»   » ಸಪ್ತ ಸ್ವರಗಳ, ಸಪ್ತ ಮನಗಳ ಸಂಗೀತ ‘ಪರ್ವ’ ಶುಕ್ರವಾರ ತೆರೆಗೆ

ಸಪ್ತ ಸ್ವರಗಳ, ಸಪ್ತ ಮನಗಳ ಸಂಗೀತ ‘ಪರ್ವ’ ಶುಕ್ರವಾರ ತೆರೆಗೆ

Posted By: Super
Subscribe to Filmibeat Kannada

ಸುನಿಲ್‌ ಕುಮಾರ್‌ ದೇಸಾಯರ 'ಪರ್ವ" ಸಾಮಾನ್ಯ ಚಿತ್ರ ಅಲ್ಲ ! ಮಹಾಭಾರತದ ಪರ್ವದಂತೆಯೇ ದೊಡ್ಡ ಚಿತ್ರ. ಭೈರಪ್ಪನವರ ಸುದೀರ್ಘ ಕಾದಂಬರಿಯಂತೆಯೇ ಆಕಾರದಲ್ಲಿ ವಿಶಾಲ. ಅರ್ಥಾತ್‌ ದೊಡ್ಡ ಬಜೆಟ್‌ ಚಿತ್ರ. ಈ ಅದ್ಧೂರಿ ಚಿತ್ರ ಜನವರಿ 18ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ವಿಭಿನ್ನ ಶೈಲಿಯ ಪ್ರೇಮ ಕಥಾನಕವಾದ 'ಪರ್ವ" ಸಪ್ತ ಸ್ವರಗಳ... ಸುಪ್ತ ಮನಗಳ... ಸಂಗೀತ 'ಪರ್ವ" ಎಂಬುದು ಲೇಟೆಸ್ಟ್‌ ಘೋಷಣೆ.

'ಪರ್ವ" ಸೆಟ್ಟೇರಿದ ಆರಂಭದಲ್ಲಿ ಅದ್ಧೂರಿತನದ ಹೆಸರಿನಲ್ಲಿ ಸುದ್ದಿ ಮಾಡಿತು. ಆನಂತರ ಕಳೆದ ವರ್ಷಾಂತ್ಯದಲ್ಲಿ ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ - ನಟಿ ಪ್ರೇಮಾರ 'ಯುದ್ಧಪರ್ವ"ದಿಂದಾಗಿ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸುವ ಮೂಲಕ ಭಾರಿ ಸುದ್ದಿ ಮಾಡಿತು.

ಎಲ್ಲ ಹರ್ಡಲ್ಸ್‌ಗಳನ್ನೂ ದಾಟಿಕೊಂಡು ಕೊನೆಗೂ 'ಪರ್ವ" ಬಿಡುಗಡೆಯಾಗುತ್ತಿದೆ. ಶುಕ್ರವಾರದಿಂದ ಬೆಂಗಳೂರಿನ ಮೇನಕ, ಪ್ರಸನ್ನ, ಪುಟ್ಟಣ್ಣ, ನಳಂದ, ವೆಂಕಟೇಶ್ವರ, ಮೋಹನ್‌, ಉಲ್ಲಾಸ್‌, ಸಿದ್ಧೇಶ್ವರ, ವೀರಭದ್ರೇಶ್ವರ, ಉಮಾ, ನಂದ, ಕಾವೇರಿ, ಮೈಸೂರಿನ ಪ್ರಭಾ, ಗಾಯತ್ರಿ, ಸರಸ್ವತಿ, ಮಂಡ್ಯದ ಮಹಾವೀರ್‌, ಹಾಸನದ ಸಹ್ಯಾದ್ರಿ, ಮಂಗಳೂರು ಜ್ಯೋತಿ, ಶಿವಮೊಗ್ಗದ ವಿನಾಯಕ, ದಾವಣಗೆರೆಯ ಅಶೋಕ, ಚಿಕ್ಕಮಗಳೂರಿನ ಗುರುನಾಥ್‌, ಚಿತ್ರದುರ್ಗ ಪ್ರಸನ್ನ, ಬಳ್ಳಾರಿಯ ಮುಬಾರಕ್‌, ರಾಯಚೂರಿನ ನೀಲಕಂಠೇಶ್ವರ, ಧಾರವಾಡದ ಪದ್ಮ ಮೊದಲಾದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

 'ಪರ್ವ" ದ ತಾರಾಬಳಗದಲ್ಲಿ ವಿಷ್ಣುವರ್ಧನ್‌, ಪ್ರೇಮಾ, ರೋಜಾ, ಅಪರ್ಣಾ, ವೈದ್ಯನಾಥನ್‌, ಕೃತ್ತಿಕಾ, ಕೆರೆಮನೆ ಶಂಭು ಹೆಗಡೆ, ರೇಖಾ, ರಾಧಾರವಿ, ರಮೇಶ್‌ ಭಟ್‌, ಸಲಾವುದ್ದೀನ್‌, ಕಾಶಿ, ನವೀನ್‌, ಮಯೂರ್‌ ಮೊದಲಾದವರಿದ್ದಾರೆ. ಹಂಸಲೇಖಾರ ಗೀತೆ - ರಾಗಸಂಯೋಜನೆ, ಎಚ್‌.ಸಿ. ವೇಣು ಛಾಯಾಗ್ರಹಣ ಚಿತ್ರಕ್ಕಿದೆ.ವಾರ್ತಾ ಸಂಚಯ

English summary
Sunilkumar desais Parva releasing on 18th January 2002

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada