»   » ಸೆನ್ಸಾರ್‌ನತ್ತ ಹೆಜ್ಜೆ ಇಟ್ಟ ಸುನಿಲ್‌ ಕುಮಾರ್‌ ದೇಸಾಯರ ‘ಪರ್ವ’

ಸೆನ್ಸಾರ್‌ನತ್ತ ಹೆಜ್ಜೆ ಇಟ್ಟ ಸುನಿಲ್‌ ಕುಮಾರ್‌ ದೇಸಾಯರ ‘ಪರ್ವ’

Posted By: Staff
Subscribe to Filmibeat Kannada

ಕಳೆದ ವರ್ಷದ ಅಂತ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಘಟಿಸಿದ 'ಯುದ್ಧಪರ್ವ" 'ಸಂಧಾನಪರ್ವ"ದ ಮೂಲಕ 'ಶಾಂತಿಪರ್ವ"ದಲ್ಲಿ ಕೊನೆಯಾಗಿ 'ಚಿತ್ರೀಕರಣ ಪರ್ವ"ಮುಗಿಸಿ ಈಗ 'ಸೆನ್ಸಾರ್‌ ಪರ್ವ"ದತ್ತ ಹೆಜ್ಜೆ ಇಟ್ಟಿದೆ.

ಗೊತ್ತಾಗಿರಬೇಕಲ್ಲವೇ ನಿಮಗೆ. ಕಾಲ್‌ಶೀಟ್‌ ಕಿರಿಕಿರಿಗೆ ಸಂಬಂಧಿಸಿದಂತೆ ನಟಿ ಪ್ರೇಮಾ ಹಾಗೂ 'ಪರ್ವ" ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ರ ನಡುವೆ ಭಾರೀ ಸಂಘರ್ಷವೇ ನಡೆದಿತ್ತು. ಸಂಧಾನ- ದಂಡದ ತರುವಾಯ 'ಪರ್ವ" ಚಿತ್ರೀಕರಣ ಪುನಾರಂಭವಾಗಿ ಕುಂಬಳಕಾಯಿ ಒಡೆದಾಯಿತು. ಈಗ ಚಿತ್ರದ ಮೊದಲ ಪ್ರತಿ ಸೆನ್ಸಾರ್‌ ವೀಕ್ಷಣೆಗೆ ಅಣಿಯಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಎಚ್‌.ಸಿ. ಶ್ರೀನಿವಾಸ್‌ ಸಿದ್ಧತೆ ನಡೆಸಿದ್ದಾರೆ.

ಶ್ರೀನಿವಾಸ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸಿದ್ಧವಾಗಿರುವ 'ಪರ್ವ"ವೆಂಬ ಪ್ರೇಮ ಕಥಾನಕದ ನಿರೂಪಣೆಗೆ ತಾವು ಹೊಸದೊಂದು ತಂತ್ರ ಅಳವಡಿಸಿರುವುದಾಗಿ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ಹೇಳಿದ್ದಾರೆ. ಹಂಸಲೇಖಾರ ಗೀತೆ - ರಾಗಸಂಯೋಜನೆ, ಎಚ್‌.ಸಿ. ವೇಣು ಛಾಯಾಗ್ರಹಣ ಇರುವ ಚಿತ್ರದ ತಾರಾಗಣದಲ್ಲಿ ವಿಷ್ಣುವರ್ಧನ್‌, ಪ್ರೇಮಾ, ರೋಜಾ, ಅಪರ್ಣ, ರಮೇಶ್‌ಭಟ್‌, ವೈದ್ಯನಾಥನ್‌, ರೇಖಾ, ನವೀನ್‌ ಮಯೂರ್‌, ಕೆರೆಮನೆ ಶಂಭುಹೆಗಡೆ ಮೊದಲಾದವರಿದ್ದಾರೆ.ವಾರ್ತಾ ಸಂಚಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada