ಪಾರ್ವತಮ್ಮ ರಾಜ್ ಕುಮಾರ್ ಅವರ ಮೊದಲನೇ ಪುಣ್ಯ ಸ್ಮರಣೆ
Recommended Video

ವರನಟ ಡಾ.ರಾಜ್ ಕುಮಾರ್ ಶ್ರೀಮತಿ, ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕುಟುಂಬ ಮತ್ತು ಅಭಿಮಾನಿಗಳನ್ನ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ.
ಈ ದಿನದ ವಿಶೇಷವಾಗಿ ಡಾ ರಾಜ್ ಕುಮಾರ್ ಕುಟುಂಬಸ್ಥರು, ಮಕ್ಕಳು, ಮೊಮ್ಮಕ್ಕಳು ಸೇರಿ ಪಾರ್ವತಮ್ಮ ಅವರ ಸಮಾಧಿಗೆ ಪೂಜೆ ಮಾಡುವ ಮೂಲಕ ಒಂದನೇ ವರ್ಷದ ಪುಣ್ಯತಿಥಿಯನ್ನ ಆಚರಿಸಿದರು.
ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದ ಎಲ್ಲರೂ ಸುಮಾರು ಹತ್ತು ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಪಾರ್ವತಮ್ಮ ಅವರ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಲಿದರು.

ಇಂದು ಪಾರ್ವತಮ್ಮ ಅವರ ಪುಣ್ಯತಿಥಿಯ ಪ್ರಯುಕ್ತ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಮತ್ತು ಅನ್ನದಾನವನ್ನ ಏರ್ಪಡಿಸಲಾಗಿದೆ. ಸಮಾಧಿ ಬಳಿ ಪೂಜೆ ಮುಗಿಸಿದ ನಂತರ ದೊಡ್ಮನೆಯಲ್ಲಿ ವರ್ಷದ ತಿಥಿ ಕಾರ್ಯಕ್ರಮಗಳು ನಡೆಯಲಿವೆ.

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ (78) ಅವರು ಮೇ 30, 2017 ರಂದು ಬೆಳಗ್ಗೆ 4.40 ರ ಸುಮಾರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.


Click it and Unblock the Notifications











