ಸಿನಿಮಾಗಳಲ್ಲಿ ಅಪ್ಪು ಯಾಕೆ ಹಾಡುತ್ತಿದ್ದರು ಗೊತ್ತಾ? ಪಾರ್ವತಮ್ಮ ಹೇಳಿದ್ರು ಅದೊಂದು ಮಾತು!

ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ಮೂರು ತಿಂಗಳು ಕಳೆದಿದೆ. ಆದರೂ ಇಂದಿಗೂ ಅಭಿಮಾನಿಗಳು, ಕುಟುಂಬ ಸದಸ್ಯರು ಸೇರಿದಂತೆ ಇಡೀ ರಾಜ್ಯವೇ ಅಪ್ಪು ನೆನಪಲ್ಲಿ ದಿನ ಕಳೆಯುತ್ತಿದೆ. ಎಲ್ಲೇ ಹೋದರು, ಬಂದರೂ ಅಪ್ಪುವಿನ ಆ ನಿಷ್ಕಲ್ಮಷ ನಗುವನ್ನು ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಇದ್ದಷ್ಟು ದಿನವೂ ಪರೋಪಕಾರಿಯಾಗಿ, ಅದೆಷ್ಟೋ ಕುಟುಂಬಗಳಿಗೆ, ಅನಾಥರಿಗೆ ದೇವರಂತಿದ್ದ ಪುನೀತ್ ಇಂದು ನಮ್ಮೊಂದಿಗೆ ಇಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Recommended Video

ಸೈನಿಕನಾಗಿ ಬಂದು ಅಚ್ಚರಿ ಮೂಡಿಸಿದ ಅಪ್ಪು

ಅಭಿಮಾನಿಗಳಂತೂ ಪುನೀತ್ ಅವರ ನೆನಪಲ್ಲಿ ದಿನಪ್ರತೀ ಒಂದಲ್ಲಾ ಒಂದು ಒಳ್ಳೆ ಕೆಲಸಗಳು, ಆರೋಗ್ಯ ಶಿಬಿರ, ಹೆಲ್ತ್ ಕ್ಯಾಂಪ್ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ಪುನೀತ್ ಅವರ ಆಸೆ, ಕನಸುಗಳನ್ನು ಈಡೇರಿಸುವಲ್ಲಿ ಗಮನ ಹರಿಸಿದ್ದಾರೆ. ಅಲ್ಲದೇ ಸಾಕಷ್ಟು ಮಂದಿ ಸೆಲೆಬ್ರೆಟಿಗಳು ಅಪ್ಪು ಅವರ ಬಗ್ಗೆ, ಅವರ ಸ್ವಭಾವದ ಬಗ್ಗೆ ಮಾತುಗಳನ್ನು, ನೆನಪುಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಂತೆಯೇ ಇದೀಗ ಸ್ಯಾಂಡಲ್‌ವುಡ್ ನಟ ರಿಷಿ ಕೂಡ ಪುನೀತ್ ಅವರ ಬಗ್ಗೆ ಮಾತು ಹಂಚಿಕೊಂಡಿದ್ದಾರೆ. ಖಾಸಗೀ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಅಪ್ಪು ಅವರು ತನಗೆ ಹೇಳಿದ್ದ ಒಂದು ಕಿವಿ ಮಾತಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದನ್ನು ಪುನೀತ್ ಅವರಿಗೆ ಪಾರ್ವತಮ್ಮ ರಾಜ್‌ಕುಮಾರ್ ಅವರು ಹೇಳಿಕೊಟ್ಟದ್ದರಂತೆ.

ಎಲ್ಲರಿಗೂ ತಿಳಿದಿರುವ ಹಾಗೆ ದೊಡ್ಮನೆ ಕುಟುಂಬ ಇವತ್ತಿಗೂ ಡಾ ರಾಜ್‌ ಅವರ ಮಾತುಗಳನ್ನು, ನಿಯಮಗಳನ್ನು ಮೀರಿಲ್ಲ. ರಾಜ್‌ಕುಮಾರ್ ಅವರು ಹಾಕಿಕೊಟ್ಟಿದ್ದ ದಾರಿಯಲ್ಲಿಯೇ ಎಲ್ಲರೂ ನಡೆಯುತ್ತಿದ್ದಾರೆ. ದೊಡ್ಮನೆ ಕುಟುಂಬದ ಈ ಶಿಸ್ತಿಗೆ ಪಾರ್ವತಮ್ಮ ರಾಜ್‌ಕುಮಾರ್ ಕೂಡ ಕಾರಣಕರ್ತರು. ತನ್ನ ಮಕ್ಕಳಿಗೆ ಡಾ ರಾಜ್‌ ಅವರ ಆದರ್ಶಗಳನ್ನು ಪಾಲಿಸಲು ಹೇಳೊದು ಅಲ್ಲದೇ, ಪರರಿಗೆ ಹೇಗೆ ನೆರವಾಗಬೇಕು ಅನ್ನೋದನ್ನು ಹೇಳಿಕೊಟ್ಟಿದ್ದರು. ಅದಕ್ಕೆ ಒಂದು ನಿದರ್ಶನ ಎಂದರೇ ನಟ ರಿಷಿ ಹಂಚಿಕೊಂಡಿರುವ ಈ ಮಾತುಗಳು.

Parvathamma Rajkumar Gave Many Suggestions to Puneet Rajkumar

ನಟ ರಿಷಿ ಪುನೀತ್ ರಾಜ್‌ಕುಮಾರ್ ಅವರನ್ನು ಇತ್ತೀಚೆಗೆ ಬಲ್ಲಂತಹ ಒಬ್ಬ ವ್ಯಕ್ತಿ. ಯಾಕಂದರೆ ಅಪ್ಪು ಅವರ ಪಿಆರ್‌ಕೆ ಪ್ರೊಡಕ್ಷನನ್ನಲ್ಲಿ ಕೆಲಸ ಮಾಡಿ ಹಿಟ್ ಚಿತ್ರಗಳನ್ನು ನೀಡಿ ಗುರುತಿಸಿಕೊಂಡಿರುವವರಲ್ಲಿ ನಟ ರಿಷಿ ಕೂಡ ಒಬ್ರು. ಪುನೀತ್ ಅವರೊಂದಿಗೆ ಕೆಲಸ ಮಾಡುವ ಸಂದರ್ಭದಲ್ಲಿ ರಿಷಿ ಅವರಿಗೆ ಒಂದಷ್ಟು ಕಿವಿ ಮಾತುಗಳನ್ನು ಅಪ್ಪು ಹೇಳಿದ್ದರಂತೆ, ಜೊತೆಗೆ ತನ್ನ ಜೀವನದ ಬಗ್ಗೆಯೂ ಮಾತುಗಳನ್ನು ಹಂಚಿಕೊಂಡಿದ್ದರು. ಆ ವಿಚಾರಗಳನ್ನು ನಟ ರಿಷಿ ಈಗ ರಿವೀಲ್ ಮಾಡಿದ್ದಾರೆ.

ಪಾರ್ವತಮ್ಮ ಅವರು ಪುನೀತ್‌ಗೆ ಹೇಳಿರುವ ಮಾತು ಇದು. ಅದನ್ನು ಅಪ್ಪು ರಿಷಿಬಳಿ ಹೇಳಿಕೊಂಡಿದ್ದತು. ಅದೇನೆಂದರೆ "ನೀನು ಸಿನಿಮಾಗೆ ದುಡಿದಾಗ ಬರುವ ದುಡ್ಡನು ಹೇಗೆ ಬೇಕಾದರೂ ಖರ್ಚು ಮಾಡು. ಆದರೆ ಸಿನಿಮಾದಲ್ಲಿ ಹಾಡುವಾಗ ಬರುವಂತಹ ಸಂಭಾವನೆಯನ್ನು ನಿನಗಾಗಿ ಖರ್ಚು ಮಾಡಬೇಡ. ಒಳ್ಳೆಯ ಕೆಲಸಕ್ಕೆ, ಬಡವರಿಗಾಗಿ ಮೀಸಲಿಡು" ಎಂದಿದ್ದರಂತೆ. ಇದೇ ಕಾರಣಕ್ಕೆ ಪುನೀತ್ ಅವರು ಹೆಚ್ಚೆಚ್ಚು ಸಿನಿಮಾಗಳಲ್ಲಿ ಹಾಡುತ್ತಿದ್ದರು. ಹಾಗೇ ಅದರಿಂದ ಬರುವ ಹಣವನ್ನು ಬಡ ಮಕ್ಕಳಿಗೆ, ಸಮಾಜ ಸೇವೆಗಾಗಿ ಮೀಸಲಿಡುತ್ತಿದ್ದರು ಪುನೀತ್. ಅಮ್ಮನ ಮಾತನ್ನು ಯಾವತ್ತೂ ಮೀರಿದವರಲ್ಲ ಅಪ್ಪು.

Parvathamma Rajkumar Gave Many Suggestions to Puneet Rajkumar

ಅಲ್ಲದೇ "ಯಾರೇ ಬಂದು ತಮ್ಮ ಸಿನಿಮಾಗೆ ಹಾಡಿ ಎಂದರೇ ಇಲ್ಲ ಎನ್ನುತ್ತಿರಲಿಲ್ಲವಂತೆ ಅಪ್ಪು". ಹೀಗಾಗಿ ನಾವು ಕೂಡ ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು, ಅವರು ಮಾಡುತ್ತಿದ್ದ ಉತ್ತಮ ಕೆಲಸಗಳನ್ನು ನಾವು ಮುಂದುವರೆಸೋದರಿಂದ ಅವರನ್ನು ಜೀವಂತವಾಗಿ ಇರಿಸೋಣ, ಪುನೀತ್ ಅಂತಹವರು ಶತಕೋಟಿಗೊಬ್ಬ ಎಂದು ಅಪ್ಪು ಬಗ್ಗೆ ಮಾತನಾಡುತ್ತ ಭಾವುಕರಾಗಿದ್ದಾರೆ ರಿಷಿ.

More from Filmibeat

English summary
Parvathamma Rajkumar gave many suggestions to Puneet Rajkumar . that memorys Appu shares with Actor Rish during his film shooting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X