ಗಣೇಶ್ ಗೆ ಸಿಕ್ಕ 'ಗೀತಾ' : ಕನ್ನಡಕ್ಕೆ ಬಂದ ಮತ್ತೊಬ್ಬ ಮಲೆಯಾಳಂ ಹುಡುಗಿ
Recommended Video

ಮಲೆಯಾಳಂ ನಟಿಯರು ಸೌತ್ ಸಿನಿರಂಗದಲ್ಲಿ ಮಾತ್ರವಲ್ಲ ಬಾಲಿವುಡ್ ವರೆಗೆ ಹೆಸರು ಮಾಡಿದ್ದಾರೆ. ಈಗ ಮಲೆಯಾಳಂ ಚಿತ್ರರಂಗದಿಂದ ಮತ್ತೊಬ್ಬ ನಟಿ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.
ಪಾರ್ವತಿ ಮೆನನ್, ಭಾವನಾ, ಭಾಮಾ, ಅಮಲ ಪೌಲ್ ಹೀಗೆ ಸಾಕಷ್ಟು ಮಲೆಯಾಳಂ ನಟಿಯರು ಈಗಾಗಲೇ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಇದೀಗ ಅದೇ ರೀತಿ ನಟಿ ಪಾರ್ವತಿ ಅರುಣ್ ಕೂಡ ಕನ್ನಡ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. ಮಲೆಯಾಳಂ ಸಿನಿಮಾ ಮಾಡಿ ನಟನೆಯಲ್ಲಿ ಅನುಭವ ಇರುವ ಇವರಿಗೆ ಈಗ ಒಳ್ಳೆಯ ಅವಕಾಶ ಸಿಕ್ಕಿದೆ..
ಅಂದಹಾಗೆ, ಸದ್ಯ ಪಾರ್ವತಿ ಅರುಣ್ ಅಭಿನಯಿಸುತ್ತಿರುವ ಕನ್ನಡ ಸಿನಿಮಾ ಯಾವುದು ಎಂಬ ವಿವರ ಮುಂದಿದೆ ಓದಿ...

ಗಣೇಶ್ ಗೆ ಸಿಕ್ಕ 'ಗೀತಾ'
ನಟ ಗಣೇಶ್ ಅಭಿನಯದ 'ಗೀತಾ' ಸಿನಿಮಾ ಈಗಾಗಲೇ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿದೆ. ಈಗ ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದೆ. ಗಣೇಶ್ ಗೆ ಜೋಡಿಯಾಗಿ ಮಲೆಯಾಳಂ ನಟಿ ಪಾರ್ವತಿ ಅರುಣ್ ನಟಿಸುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ.

ಮೂವರು ನಾಯಕಿಯರು
'ಗೀತಾ' ಸಿನಿಮಾದಲ್ಲಿ ಒಟ್ಟು ಮೂರು ನಾಯಕಿಯರು ಇದ್ದಾರೆ. ಒಂದು ಪಾತ್ರಕ್ಕೆ ಪಾರ್ವತಿ ಅರುಣ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಉಳಿದ ಎರಡು ಪಾತ್ರಗಳಿಗೆ ನಾಯಕಿಯರು ಇನ್ನೂ ಆಯ್ಕೆ ಆಗಬೇಕಿದೆ. ಚಿತ್ರದ ಉಳಿದ ನಾಯಕಿಯರ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ವಿಜಯ್ ನಾಗೇಂದ್ರ ನಿರ್ದೇಶನ
ಈ ಸಿನಿಮಾವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 'ರಾಜಕುಮಾರ' ಸೇರಿದಂತೆ ಅನೇಕ ಸಿನಿಮಾಗಳಿಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ಇವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾಗಿದೆ. ವಿ ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಲಿದ್ದಾರೆ.

ಗಣೇಶ್ ಹೋಮ್ ಬ್ಯಾನರ್
ಗೀತಾ ಸಿನಿಮಾವನ್ನು ಗಣೇಶ್ ತಮ್ಮ ಬ್ಯಾನರ್ ನಲ್ಲಿಯೇ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ 'ಮುಗುಳುನಗೆ' ಚಿತ್ರದ ನಿರ್ಮಾಪಕ ಸೈಯದ್ ಸಲಾಂ ಕೂಡ ಹಣ ಹಾಕುತ್ತಿದ್ದಾರೆ. ಶ್ರೀಶಕುದುವಳ್ಳಿ ಛಾಯಾಗ್ರಹಣ ಸಿನಿಮಾಗೆ ಇದೆ.


Click it and Unblock the Notifications











