ಮನಮುಟ್ಟುವ ‘ಭಾರ್ಗವ’ ಇವನು; ‘ಕಡಲ ತೀರದ ಭಾರ್ಗವ’ನ ಮೇಲೆ ಪಟೇಲ್ ವರುಣ್ ರಾಜು ಭರವಸೆ

'ಕಡಲ ತೀರದ ಭಾರ್ಗವ' ಸಿನಿಮಾ ಇದೇ ಮಾರ್ಚ್ 3ಕ್ಕೆೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆೆ ಮತ್ತೊಬ್ಬ ನವ ನಟ ಮತ್ತು ನಿರ್ಮಾಪಕನ ಪರಿಚಯವಾಗುತ್ತಿದೆ. ಅವರೇ ಪಟೇಲ್ ವರುಣ್ ರಾಜು. ಅಂದಹಾಗೆ, ಪಟೇಲ್ ವರುಣ್ ರಾಜು ಅವರಿಗೆ ಚಿತ್ರರಂಗ ಹೊಸದು. ಆದರೆ 'ಕಡಲ ತೀರದ ಭಾರ್ಗವ' ಸಿನಿಮಾದ ಕಥೆ ಮತ್ತು ಪಾತ್ರ ಅವರನ್ನು ಈ ಸಿನಿಮಾದಲ್ಲಿ ಅಭಿನಯಿಸಿ, ನಿರ್ಮಾಣ ಮಾಡುವಂತೆ ಮಾಡಿದೆ.

ತಮ್ಮ ಚೊಚ್ಚಲ ಸಿನಿಮಾದ ಬಗ್ಗೆೆ ಸಾಕಷ್ಟು ಭರವಸೆ ಇಟ್ಟುಕೊಂಡಿರುವ ಪಟೇಲ್ ವರುಣ್ ರಾಜು, ತಮ್ಮ ಪಾತ್ರವನ್ನು ವಿವರಿಸುವುದು ಹೀಗೆ, ''ಕಡಲ ತೀರದ ಭಾರ್ಗವ' ಸಿನಿಮಾದಲ್ಲಿ ಟೈಟಲ್‌ನಲ್ಲಿರುವ 'ಭಾರ್ಗವ' ಎಂಬ ಪಾತ್ರವನ್ನು ನಾನೇ ನಿಭಾಯಿಸಿದ್ದೇನೆ. ಇಡೀ ಸಿನಿಮಾ ಪ್ರಮುಖವಾಗಿ ಐದು ಪಾತ್ರಗಳ ಸುತ್ತ ಸಾಗುತ್ತದೆ. ಅದರಲ್ಲಿ ನನ್ನ ಪಾತ್ರ ಕೂಡ ಒಂದು. ತುಂಬ ಸ್ನೇಹಮಯಿಯಾಗಿರುವಂಥ, ನೋಡುಗರಿಗೆ ಕುತೂಹಲ ಮೂಡಿಸಿ ಕೊನೆಯವರೆಗೂ ಕೂರಿಸುವಂಥ ಪಾತ್ರ ನನ್ನದು' ಎನ್ನುತ್ತಾರೆ ವರುಣ್.

Patel Varun Raju entering KFI as an actor and producer with the movie Kadala Theeradha Bhargava

'ಇದು ನನ್ನ ಮೊದಲ ಸಿನಿಮಾವಾದರೂ, ಇಡೀ ತಂಡದ ಸಹಕಾರದಿಂದ ಎಲ್ಲವೂ ಸುಗವಾಗಿ ನಡೆದುಕೊಂಡು ಬಂದಿದೆ. ಈಗ ಸಿನಿಮಾ ಬಿಡುಗಡೆಯ ಹಂತಕ್ಕೆೆ ಬಂದಿದೆ. ಒಂದೊಳ್ಳೆೆ ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕರು ಕೂಡ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ. ಇತ್ತೀಚೆಗಷ್ಟೇ 'ಕಡಲ ತೀರದ ಭಾರ್ಗವ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತನಾಡುತ್ತಿದ್ದಾರೆ. ಇದು ನಮ್ಮ ನಿರೀಕ್ಷೆೆಯನ್ನು ಇನ್ನಷ್ಟು ಹೆಚ್ಚಿಸಿದೆ' ಎಂಬ ಭರವಸೆಯ ಮಾತನಾಡುತ್ತಾರೆ ಪಟೇಲ್ ವರುಣ್ ರಾಜು.

Patel Varun Raju entering KFI as an actor and producer with the movie Kadala Theeradha Bhargava

ಇನ್ನು ಸೈಕಾಲಜಿಕಲ್ ಥ್ರಿಲ್ಲರ್ ಜೊತೆಗೆ ಮೆಸೇಜ್ ಕೂಡ ಇರುವಂಥ 'ಕಡಲ ತೀರದ ಭಾರ್ಗವ' ಸಿನಿಮಾದಲ್ಲಿ ಪಟೇಲ್ ವರುಣ್ ರಾಜು ಅವರೊಂದಿಗೆ ಭರತ್ ಗೌಡ ಮತ್ತೊಬ್ಬ ನಾಯಕನಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಯುವ ನಿರ್ದೇಶಕ ಪನ್ನಗ ಸೋಮಶೇಖರ್ ಈ ಸಿನಿಮಾವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಒಟ್ಟಾರೆ ತನ್ನ ಟೈಟಲ್ ಮತ್ತು ಕಂಟೆಂಟ್‌ನಿಂದ ಸೌಂಡ್ ಮಾಡುತ್ತಿರುವ 'ಕಡಲ ತೀರದ ಭಾರ್ಗವ' ತೆರೆಮೇಲೆ ಹೇಗಿರಲಿದೆ ಎಂಬುದು ಮಾರ್ಚ್ 3ಕ್ಕೆೆ ಗೊತ್ತಾಗಲಿದೆ.

More from Filmibeat

English summary
Patel Varun Raju entering Sandalwood as an actor and producer with the movie Kadala Theerada Bhargava. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X