ಮೊದಲ ವೀಕೆಂಡ್‌ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?

ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಕಳೆದ ಬುಧವಾರ ( ಜನವರಿ 25 ) ಬಿಡುಗಡೆಗೊಂಡ ಪಠಾಣ್ ಚಿತ್ರ ಮೊದಲ ದಿನವೇ 106 ಕೋಟಿ ಗಳಿಕೆ ಮಾಡುವ ಮೂಲಕ ಅಬ್ಬರಿಸಿತ್ತು. ಈ ಪರಿ ಓಪನಿಂಗ್ ಪಡೆದುಕೊಂಡ ಪಠಾಣ್ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್‌ಗೆ ಮರುಜೀವ ತಂದಿದೆ ಎಂದೇ ಹೇಳಬಹುದು.

ಹೌದು, ಕಳೆದೆರಡು ವರ್ಷಗಳಿಂದ ಬಾಲಿವುಡ್‌ನ ಯಾವ ಸ್ಟಾರ್ ನಟನ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದ ರೀತಿ ಗೆಲುವು ಕಂಡಿರಲಿಲ್ಲ. ಎಷ್ಟೋ ಸ್ಟಾರ್ ನಟರ ಚಿತ್ರಗಳು ಬಜೆಟ್‌ನಷ್ಟನ್ನೂ ಸಹ ಗಳಿಸಲಾಗದೇ ಮಕಾಡೆ ಮಲಗಿಬಿಟ್ಟಿದ್ದವು. ಬಾಯ್‌ಕಟ್ ಟ್ರೆಂಡ್‌ಗೆ ಎಲ್ಲಾ ಚಿತ್ರಗಳು ಬಲಿಯಾಗಿ ಹಿನ್ನಡೆ ಅನುಭವಿಸಿದರೆ, ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಮಾತ್ರ ಬಾಯ್‌ಕಾಟ್ ಅಭಿಯಾನಕ್ಕೆ ಸೊಪ್ಪು ಹಾಕದೇ ಅಬ್ಬರಿಸಿದೆ.

ಇನ್ನು ಚಿತ್ರತಂಡ ಚಿತ್ರ ಎಷ್ಟು ಗಳಿಸಿತು ಎಂಬ ಮಾಹಿತಿಯನ್ನು ಪ್ರತಿದಿನವೂ ಹಂಚಿಕೊಳ್ಳುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ವಾರಾಂತ್ಯಕ್ಕೆ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನೂ ಸಹ ನೀಡಿದೆ. ಪಠಾಣ್ ಮೊದಲ ವಾರಾಂತ್ಯಕ್ಕೆ ವಿಶ್ವದಾದ್ಯಂತ 543 ಕೋಟಿ ಗಳಿಕೆ ಮಾಡಿದ್ದು, ಮೊದಲ ವಾರಾಂತ್ಯಕ್ಕೆ ಅತಿಹೆಚ್ಚು ಗಳಿಸಿದ ಭಾರತ ಚಿತ್ರ ಎಂಬ ದಾಖಲೆಯಲ್ಲಿ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ಎಡವಿ ಎರಡನೇ ಸ್ಥಾನಕ್ಕೆ ತೃಪ್ಟಿಪಟ್ಟುಕೊಂಡಿದೆ. ಹಾಗಿದ್ದರೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರಾಂತ್ಯಕ್ಕೆ ಅತಿಹೆಚ್ಚು ಗಳಿಸಿದ ಭಾರತದ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕೆಜಿಎಫ್ 2 ದಾಖಲೆ ಹಿಂದಿಕ್ಕುವಲ್ಲಿ ವಿಫಲವಾದ ಪಠಾಣ್!

ಕೆಜಿಎಫ್ 2 ದಾಖಲೆ ಹಿಂದಿಕ್ಕುವಲ್ಲಿ ವಿಫಲವಾದ ಪಠಾಣ್!

ಪಠಾಣ್ ಪಡೆದುಕೊಂಡ ಓಪನಿಂಗ್ ಹಾಗೂ ವಿಮರ್ಶೆಗಳನ್ನು ಕಂಡು ಈ ಚಿತ್ರ ಕೆಜಿಎಫ್ ಚಾಪ್ಟರ್ 1 ನಿರ್ಮಿಸಿದ್ದ ದಾಖಲೆಯನ್ನು ಪುಡಿಗಟ್ಟಬಹುದು ಎಂದು ಊಹಿಸಲಾಗಿತ್ತು. ಆದರೆ ಬಿಡುಗಡೆಯಾದ ಮೊದಲ ವಾರಾಂತ್ಯದ ಕಲೆಕ್ಷನ್‌ನಲ್ಲಿ ಪಠಾಣ್ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಪಠಾಣ್ ಮೊಲದ ವಾರಾಂತ್ಯಕ್ಕೆ 543 ಕೋಟಿ ಗಳಿಕೆ ಮಾಡಿದರೆ, ಕೆಜಿಎಫ್ ಚಾಪ್ಟರ್ 2 ಮೊದಲ ವಾರಾಂತ್ಯಕ್ಕೆ 546 ಕೋಟಿ ರೂಪಾಯಿಗಳನ್ನು ವಿಶ್ವದಾದ್ಯಂತ ಗಳಿಸಿತ್ತು. ಹೀಗಾಗಿ ಕೇವಲ 3 ಕೋಟಿ ಅಂತರದಲ್ಲಿ ಪಠಾಣ್ ಕೆಜಿಎಫ್ ಚಾಪ್ಟರ್ 2 ಮೊದಲ ವಾರಾಂತ್ಯದ ಕಲೆಕ್ಷನ್ ಅನ್ನು ಹಿಂದಿಕ್ಕುವಲ್ಲಿ ಸೋತಿದೆ.

ಅತಿಹೆಚ್ಚು ಗಳಿಸಿದ ಭಾರತದ ಚಿತ್ರಗಳು

ಅತಿಹೆಚ್ಚು ಗಳಿಸಿದ ಭಾರತದ ಚಿತ್ರಗಳು

ಇನ್ನು ವಿಶ್ವದಾದ್ಯಂತ ಮೊದಲ ವಾರಾಂತ್ಯಕ್ಕೆ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್ 4 ಚಿತ್ರಗಳ ಪಟ್ಟಿ ಇಲ್ಲಿದೆ..

1. ಕೆಜಿಎಫ್ ಚಾಪ್ಟರ್ 2 - 546 ಕೋಟಿ ರೂಪಾಯಿಗಳು ( ನಾಲ್ಕು ದಿನಗಳಲ್ಲಿ )

2. ಪಠಾಣ್ - 542 ಕೋಟಿ ರೂಪಾಯಿಗಳು ( ಐದು ದಿನಗಳಲ್ಲಿ )

3. ಬಾಹುಬಲಿ 2 - 540 ಕೋಟಿ ರೂಪಾಯಿಗಳು ( ಮೂರು ದಿನಗಳಲ್ಲಿ )

4. ಆರ್ ಆರ್ ಆರ್ - 500 ಕೋಟಿ ರೂಪಾಯಿಗಳು ( ಮೂರು ದಿನಗಳಲ್ಲಿ )

ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಚಿತ್ರಗಳು

ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಚಿತ್ರಗಳು

ಒಟ್ಟಾರೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್ 5 ಚಿತ್ರಗಳ ಪಟ್ಟಿ ಇಲ್ಲಿದೆ.

1. ದಂಗಲ್ - 1924 ಕೋಟಿ ರೂಪಾಯಿಗಳು

2. ಬಾಹುಬಲಿ 2 - 1749 ಕೋಟಿ ರೂಪಾಯಿಗಳು

3. ಕೆಜಿಎಫ್ ಚಾಪ್ಟರ್ 2 - 1250 ಕೋಟಿ ರೂಪಾಯಿಗಳು

4. ಆರ್ ಆರ್ ಆರ್ - 1200 ಕೋಟಿ ರೂಪಾಯಿಗಳು

5. ಭಜರಂಗಿ ಭಾಯ್‌ಜಾನ್ - 858 ಕೋಟಿ ರೂಪಾಯಿಗಳು

More from Filmibeat

English summary
Pathaan failed to break KGF Chapter 2 worldwide first weekend collection record. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X