ಪ್ರತಿಯೊಬ್ಬರು ನೋಡ್ಬೇಕು 'ಪತಿಬೇಕು.ಕಾಂ': ಯಾಕಂದ್ರೆ ಇದು ನಿಮ್ಮನೆ ಕಥೆ
ಶೀತಲ್ ಶೆಟ್ಟಿ ಅಭಿನಯದ 'ಪತಿಬೇಕು.ಕಾಂ' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಬೆಂಗಳೂರಿನ ಪ್ರಸನ್ನ, ನವರಂಗ್, ಉಮಾ, ಸಿದ್ಧೇಶ್ವರ, ಕಾಮಾಕ್ಯ, ವೈಷ್ಣವಿ ಚಿತ್ರಮಂದಿಗಳು ಸೇರಿದಂತೆ ಎಲ್ಲ ಮಲ್ಟಿಪ್ಲೆಕ್ಸ್ ಗಳಲ್ಲಿ ಶೀತಲ್ ಸಿನಿಮಾ ಪ್ರದರ್ಶನವಾಗಲಿದೆ.
'ಪತಿಬೇಕು.ಕಾಂ' ಹೆಸರು ಹೇಳುವಾಗೆ ಹುಡುಗಿಯೊಬ್ಬಳು ಮದುವೆ ಮಾಡಲು ಅವರ ಕುಟುಂಬದವರು ಪಡುವ ಕಷ್ಟ ಮತ್ತು ಆ ಹುಡುಗಿಗೆ ಎದುರಾಗುವ ಸವಾಲುಗಳು ಚಿತ್ರದ ಕಥೆ.
ಇದು ಗಂಭೀರ ವಿಷ್ಯವಾದ್ರು, ತುಂಬಾ ಮನರಂಜನೆಯಿಂದ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರಾಕೇಶ್. ಆರಂಭದಿಂದ ಅಂತ್ಯದವರೆಗೂ ಎಲ್ಲರನ್ನ ರಂಜಿಸುತ್ತಾ ಸಾಗುತ್ತೆ. ಶೀತಲ್ ಶೆಟ್ಟಿ ನಾಯಕಿ ಅನ್ನೋದು ಬಿಟ್ಟರೇ, ಈ ಸಿನಿಮಾದಲ್ಲಿ ಏನಿದೆ ಎಂತಹ ವಿಶೇಷ ಎನ್ನಬಹುದು.

ಇದು ನಿಮ್ಮ ಕಥೆ
ಪತಿಬೇಕು.ಕಾಂ ಸಿನಿಮಾ ನಿಮ್ಮ ಮನೆ ಕಥೆಯನ್ನ ಮಜವಾಗಿ ಹೇಳಲಾಗಿದೆ. ಪ್ರತಿಯೊಂದು ಸನ್ನಿವೇಶಗಳು, ಪಾತ್ರಗಳು ನಿಮಗೆ ಬಹಳ ಹತ್ತಿರವಾಗಿರಲಿದೆ. ನಿಮ್ಮನ್ನೇ ನೀವು ತೆರೆಮೇಲೆ ನೋಡಿಕೊಳ್ಳುವಂತಹ ಸಿನಿಮಾ. ಈ ಚಿತ್ರವನ್ನ ನಿಮ್ಮ ಅಕ್ಕ, ತಂಗಿ, ತಾಯಿ, ಪತ್ನಿ ಹೀಗೆ ಕುಟುಂಬದ ಜೊತೆ ಕೂತು ನೋಡಬೇಕಿದೆ.
ಸ್ವಚ್ಛವಾದ ಮನರಂಜನೆ
ಚಿತ್ರದಲ್ಲಿ ಯಾವುದೇ ಸ್ಟಾರ್ ಕಲಾವಿದರು ಇಲ್ಲ. ನಿರೂಪಕಿ ಹಾಗೂ ಸಣ್ಣ ಪುಟ್ಟ ಪಾತ್ರದಲ್ಲಿ ನೋಡಿದ್ದ ಶೀತಲ್ ಶೆಟ್ಟಿ ಇಲ್ಲಿ ನಾಯಕಿಯಾಗಿ ಇಡೀ ಸಿನಿಮಾವನ್ನ ನಿಭಾಯಿಸಿರುವುದು ವಿಶೇಷ. ಮಹಿಳೆಯೊಬ್ಬಳ ಕಥೆಯಿದ್ದರೂ, ಇಡೀ ಸಿನಿಮಾ ತುಂಬಾ ಮನರಂಜನೆಯಿಂದ ಕೂಡಿದೆ. ಯಾವುದೇ ಡಬ್ಬಲ್ ಮೀನಿಂಗ್ ಡೈಲಾಗ್ ಇಲ್ಲ, ಸಿಂಪಲ್ ಆಗಿ ರಂಜಿಸುತ್ತೆ.

ಬಹುಶಃ ಸಿನಿಮಾ ನೋಡುವ ಪ್ರೇಕ್ಷಕರಿಗೆ ಇದೇ ಬೇಕಾಗಿರುವುದು. ಎರಡೂವರೆ ಗಂಟೆ ಥಿಯೇಟರ್ ನಲ್ಲಿ ಕೂತಾಗ ಎಲ್ಲೂ ಬೋರ್ ಎನಿಸಬಾರದು. ಪೂರ್ತಿ ಮನರಂಜನೆ ಇರಬೇಕು. ಇದೆರೆಡು ಈ ಚಿತ್ರದಲ್ಲಿದೆ ಎಂಬುದು ಟ್ರೈಲರ್ ಸಾಬೀತು ಮಾಡಿದೆ.


Click it and Unblock the Notifications











