ಆಗಸ್ಟ್ 10ಕ್ಕೆ ತೆರೆಗೆ ಬರಲಿದೆ ನಿರೀಕ್ಷಿತ ತುಳು ಚಿತ್ರ 'ಪತ್ತೀಸ್ ಗ್ಯಾಂಗ್'
ಬಹು ನಿರೀಕ್ಷಿತ ತುಳು ಚಲನಚಿತ್ರ 'ಪತ್ತೀಸ್ ಗ್ಯಾಂಗ್' ಆಗಸ್ಟ್ 10 ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ. ಆನಂದ್ ಬೋಳಾರ್ ನಿರ್ಮಾಣದಲ್ಲಿ ಹಾಗೂ ಪ್ರೀತಂ ಎಂ ಎನ್ ಅವರ ನೇತೃತ್ವದಲ್ಲಿ ಈ ಪತ್ತೀಸ್ ಗ್ಯಾಂಗ್ ಸಿದ್ಧವಾಗಿದೆ. ಮನೋಜ್ ಕುಮಾರ್ ಅವರು ಈ ಸಿನಿಮಾವನ್ನು ಪ್ರಸ್ತುತ ಪಡಿಸಿದ್ದಾರೆ.
ವಿಶೇಷವೆಂದರೆ, ತುಳು ರಂಗಭೂಮಿಯ ಹಾಗೂ ತುಳು ಚಲನಚಿತ್ರ ಕ್ಷೇತ್ರದ ಅತ್ಯಂತ ಬೇಡಿಕೆ ಹಾಗೂ ಹಿರಿಯ ನಟ ಆನಂದ್ ಬೌಲರ್ ಅವರಿಗೆ ಈ ಸಿನಿಮಾ ಸಮರ್ಪಣೆಯಾಗಿಸುವ ನಿಟ್ಟಿನಲ್ಲಿ ಈ ಸಿನೆಮಾ ಸಿದ್ಧಗೊಂಡಿದೆ. ಮೋಹನ್ ಶಣೈ, ಅಜಯ್ ರಾಜ್ , ವಿಶ್ಮಯ ವಿನಾಯಕ್ , ಚಂದ್ರಹಾಸ್ ಉಳ್ಳಾಲ್ ನವ್ಯತಾರೈ ಚಿತ್ರದ ಪ್ರಮುಖ ಮುಖ್ಯ ಭೂಮಿಕೆಯಲ್ಲಿದ್ದಾರೆ.
ತುಳು ಚಿತ್ರರಂಗ ರಾಜಕೀಯದಿಂದ ದೂರ ಉಳಿಯಲು ಕಾರಣಗಳೇನು?
ತುಳು ಭಾಷೆಯಲ್ಲಿ 'ಪತ್ತೀಸ್ ' ಅಂದರೆ ವಂಚನೆ ಎಂದರ್ಥ. ಈ ಹಿನ್ನೆಲೆಯಲ್ಲಿ ಈ ಚಲನ ಚಿತ್ರದ ಕಥಾವಸ್ತು ವಂಚನೆಯ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ. ದೇಶದಲ್ಲಿ ನಡೆದ ನೈಜ ಘಟನೆಗಳನ್ನೇ ಮುಖ್ಯವಾಗಿರಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ತಮಿಳುನಾಡು, ಆಂಧ್ರ ಹೀಗೆ ಬೇರೆ ಬೇರೆ ಭಾಗದಲ್ಲಿ ನಡೆದ ನೈಜ ಘಟನೆಗಳ ಕಥಾನಕವನ್ನೇ ಸಿನಿಮಾ ಕತೆಯಾಗಿಸಿಕೊಳ್ಳಲಾಗಿದೆ .

ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ ಈ ಸಿನಿಮಾದಲ್ಲೆಲ್ಲೂ ಕುಡಿತ, ಸಿಗರೇಟ್ ಸೇದುವ ಅಥವಾ ಐಟಂ ಸಾಂಗ್ ಕೂಡ ಇಲ್ಲ. ಹೀಗಾಗಿ ಕರಾವಳಿಯ ಎಲ್ಲ ಜನರು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಚಿತ್ರ ಇದಾಗಿದೆ. ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇವರು 'ಸವಾರಿ 2', 'ರನ್ ಅಂಟೋನಿ' ಚಿತ್ರದ ಹಾಡುಗಳು ಸೇರಿಂದತೆ ಅನೇಕ ಸೂಪರ್ ಹಾಡುಗಳನ್ನು ನೀಡಿದ್ದಾರೆ.


Click it and Unblock the Notifications











