»   » ಸಿಂಗಪೂರ್‌ಕಿರುಚಿತ್ರೋತ್ಸವಕ್ಕೆ ಬೆಂಗಳೂರುನಿರ್ಮಾಪಕನ ‘ಕನ್ನಡಿ’

ಸಿಂಗಪೂರ್‌ಕಿರುಚಿತ್ರೋತ್ಸವಕ್ಕೆ ಬೆಂಗಳೂರುನಿರ್ಮಾಪಕನ ‘ಕನ್ನಡಿ’

Posted By: Staff
Subscribe to Filmibeat Kannada

ಬೆಂಗಳೂರು : ಹದಿನೇಳು ವರ್ಷಗಳ ಹಿಂದೆಯೇ ನಟನೆಗೆ ಕಾಲಿಟ್ಟು, ಹನ್ನೆರಡು ವರ್ಷಗಳಿಂದ ಕಾರ್ಪೊರೇಟ್‌ ಚಿತ್ರಗಳನ್ನು ನಿರ್ಮಿಸುತ್ತಿರುವ ನಗರದ ಪತಿ ಅಯ್ಯರ್‌ ಅವರಿಗೆ ಇದೀಗ ಜಾಗತಿಕ ಮನ್ನಣೆ. ಅವರ ಕನ್ನಡ ಚಿತ್ರ ಕನ್ನಡಿ (ಮಿರರ್‌) ಡಿಸೆಂಬರ್‌ 4ರಿಂದ ಪ್ರಾರಂಭವಾಗುವ ಸಿಂಗಪೂರ್‌ ಕಿರುಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.


ನ್ಯೂಜೆರ್ಸಿಯಲ್ಲಿ ಮೈಹೆಲೆನ್‌ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿದ್ದ ಈ ಚಿತ್ರವನ್ನು 1999ರ ಅಕ್ಟೋಬರ್‌ನಲ್ಲಿ ಅಲಯನ್ಸ್‌ ಫ್ರಾಂಚೈಸ್‌ನಲ್ಲಿ ತೋರಿಸಲಾಗಿತ್ತು. ಹನ್ನೆರಡೇ ನಿಮಿಷ ಅವಧಿಯ ಚಿತ್ರ. ಕತೆ ಕಲಾಯಿ ಕಲೆಗಾರ ಕರ್ಮಿಗಳ ಕುರಿತದ್ದು. ಕೆಲಸ ಹುಡುಕಿಕೊಂಡು ಹಳ್ಳಿಯಾಂದಕ್ಕೆ ಬರುವ ಶಿವಮ್ಮ ಮತ್ತು ಮರಿಯಪ್ಪ ನಲ್ಲಿ ಹತಾಶೆ ಮಡುಗಟ್ಟುತ್ತದೆ. ಹಸಿವು ಹೊಟ್ಟೆ ಬೆಂಕಿ ಹಚ್ಚುತ್ತದೆ. ಪರಿಣಾಮ ಜಗಳ. ಅಕಸ್ಮಾತ್ತಾಗಿ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುವ ಶಿವಮ್ಮನಲ್ಲಾಗುವ ಬದಲಾವಣೆ ಚಿತ್ರದ ವಸ್ತು. ರಂಗ ಕಲಾವಿದರಾದ ತಂತಿ ಶಿವು, ರಶ್ಮಿ, ಸಂಪ್ರಾಗ್ನಿ ಮತ್ತು ಸಂಯುಕ್ತ ಇದರಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ಇಂಗ್ಲಿಷ್‌ ಚಿತ್ರಕತೆಯಾಂದನ್ನು ಸಿದ್ಧಪಡಿಸಿರುವ ಪತಿ ಅಯ್ಯರ್‌, ಅದನ್ನು ತೆರೆಗೆ ತರುವ ಪ್ರಯತ್ನದಲ್ಲಿ ಮುಳುಗಿದ್ದಾರೆ.

English summary
Bangalore filmmaker's work selected for Singapore short film festival
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada