ಶ್ರೀಲಂಕಾ ಭಾಷೆಗೆ ರಿಮೇಕ್ ಆದ ಕನ್ನಡದ 'ಯೂ ಟರ್ನ್'
ಪವನ್ ಕುಮಾರ್ ನಿರ್ದೇಶನದ 'ಯೂ ಟರ್ನ್' ಸಿನಿಮಾ ಈಗಾಗಲೇ ಬೇರೆ ಭಾಷೆಗೆ ರಿಮೇಕ್ ಆಗಿದೆ. ಇದೀಗ ಈ ಸಿನಿಮಾ ಶ್ರೀಲಂಕಾ ಭಾಷೆಯಲ್ಲಿಯೂ ಬಂದಿದೆ.
ಸಿಂಹಳ ಭಾಷೆಗೆ 'ಯೂ ಟರ್ನ್' ಸಿನಿಮಾ ರಿಮೇಕ್ ಆಗಿದೆ. ಅಲ್ಲಿಯೂ 'ಯೂ ಟರ್ನ್' ಎನ್ನುವ ಹೆಸರಿನಲ್ಲಿಯೇ ಸಿನಿಮಾ ಬರುತ್ತಿದೆ. ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ, ಯೂ ಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ.
ಸಿನಿಮಾದ ಟ್ರೇಲರ್ ಅನ್ನು ಟ್ವಿಟ್ಟರ್ ಖಾತೆಯಲ್ಲಿ ಪವನ್ ಕುಮಾರ್ ಹಂಚಿಕೊಂಡಿದ್ದಾರೆ. ''ಒಬ್ಬ ರೈಟರ್ ಆಗಿ ಈ ರೀತಿ ಕಥೆ ಆಧಾರಿತ ಸಿನಿಮಾಗಳು ಬೇರೆ ಬೇರೆ ಭಾಷೆಗೆ ರಿಮೇಕ್ ಆಗುತ್ತಿರುವುದು ನೋಡಿದರೆ ಖುಷಿ ಆಗುತ್ತದೆ.'' ಎಂದಿದ್ದಾರೆ.

ಕನ್ನಡ 'ಯೂ ಟರ್ನ್' ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಬೆಂಗಾಲಿ, ಹಿಂದಿ ಭಾಷೆಯಲ್ಲಿ ಬಂದಿದೆ. ಇದೀಗ ಗಡಿದಾಟಿ ಶ್ರೀಲಂಕಾಕ್ಕೆ ಸಿನಿಮಾ ಹೋಗಿದೆ.
'ಯೂ ಟರ್ನ್' ಸಿನಿಮಾ 2016ರಲ್ಲಿ ಬಿಡುಗಡೆ ಆಗಿತ್ತು. ಶ್ರದ್ಧಾ ಶ್ರೀನಾಥ್ ಈ ಸಿನಿಮಾದ ನಾಯಕಿ ಆಗಿದ್ದಾರೆ. ತೆಲುಗಿನಲ್ಲಿ ಸಮಂತಾ ಸಿನಿಮಾದಲ್ಲಿ ನಟಿಸಿದರು. ತೆಲುಗಿನಲ್ಲಿ ಪವನ್ ಕುಮಾರ್ ಅವರೇ ನಿರ್ದೇಶನ ಮಾಡಿದ್ದರು.


Click it and Unblock the Notifications











