For Quick Alerts
  ALLOW NOTIFICATIONS  
  For Daily Alerts

  ಪವನ್ ಕುಮಾರ್ ಅವರ 'C10 H14 N2' ಸಿನಿಮಾ ಎಲ್ಲಿಗೆ ಬಂತು

  By Naveen
  |

  ನಿರ್ದೇಶಕ ಪವನ್ ಕುಮಾರ್ ಕನ್ನಡಕ್ಕೆ ವಿಭಿನ್ನ ರೀತಿಯ ಸಿನಿಮಾಗಳನ್ನು ನೀಡಿ ಹೆಸರು ಮಾಡುತ್ತಿರುವ ನಿರ್ದೇಶಕ. 'ಲೂಸಿಯ' ಸಿನಿಮಾದ ದೊಡ್ಡ ಯಶಸ್ಸಿನ ನಂತರ ಪವನ್ 'C10 H14 N2' ಚಿತ್ರವನ್ನು ಮಾಡುವುದಾಗಿ ಹೇಳಿದ್ದರು. ಆದರೆ 'ಯೂಟರ್ನ್' ಸಿನಿಮಾ ಶುರು ಮಾಡಿ ಅದರಲ್ಲಿಯೂ ಗೆದ್ದರು.

  ಒಂದು ಕಡೆ 'ಯೂ ಟರ್ನ್' ಸಿನಿಮಾ ಬಂದು ವರ್ಷಗಳೆ ಕಳೆದಿದೆ. ಇನ್ನೊಂದು ಕಡೆ ಪವನ್ ತಮ್ಮ 'C10 H14 N2' ಸಿನಿಮಾ ಬಗ್ಗೆ ಎಲ್ಲಿಯೂ ಏನು ಹೇಳಿಲ್ಲ. ಸೋ, ಆ ಸಿನಿಮಾ ಯಾವಗ ಶುರು.. ಯಾಕೆ ಈ ಸಿನಿಮಾ ತಡ ಆಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಪವನ್ ಕುಮಾರ್ ಆ ಬಗ್ಗೆ ಮಾತನಾಡಿದ್ದಾರೆ.

   ಮದುವೆಯ ನಂತರ ನಟಿ ಸಮಂತಾ 'ಯೂಟರ್ನ್' ಮದುವೆಯ ನಂತರ ನಟಿ ಸಮಂತಾ 'ಯೂಟರ್ನ್'

  'ಫಿಲ್ಮಿಬೀಟ್ ಕನ್ನಡ'ದ ನನ್ನ ಮೊದಲ ಸಿನಿಮಾ ಸರಣಿ ಲೇಖನದ ಸಂದರ್ಶನ ವೇಳೆ 'C10 H14 N2' ಚಿತ್ರ ಬಗ್ಗೆ ಮಾತನಾಡಿದರು. ಆ ಸಿನಿಮಾ ಯಾಕೆ ಲೇಟ್ ಆಗುತ್ತಿದೆ ಎನ್ನುವ ಪ್ರಶ್ನೆಗೆ ಪವನ್ ಆ ಸಿನಿಮಾಗೆ ತುಂಬ ಬಜೆಟ್ ಬೇಕು ಅದಕ್ಕೆ ಸಿನಿಮಾ ತಡ ಆಗುತ್ತಿದೆ ಎಂದು ಉತ್ತರಿಸಿದ್ದಾರೆ.

  ಸದ್ಯಕ್ಕೆ ಪವನ್ ಕುಮಾರ್ ತಮ್ಮ 'ಯೂಟರ್ನ್' ಚಿತ್ರವನ್ನು ಟಾಲಿವುಡ್ ನಲ್ಲಿ ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದು, ಇದೇ ಫೆಬ್ರವರಿಯಿಂದ ಆ ಸಿನಿಮಾ ಶುರು ಆಗಲಿದೆ.

  English summary
  Kannada director Pavan Kumar spoke about his C10 H14 N2 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X