Just In
Don't Miss!
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Technology
ಇಂದು 'ವಿವೋ U20' ಫ್ಲ್ಯಾಶ್ ಸೇಲ್!..ಆರಂಭಿಕ ಬೆಲೆ 10,990ರೂ!
- News
ಹಿರೇಕೆರೂರು ಉಪ ಚುನಾವಣೆ: ಗೆಲುವಿನ ಕೇಕೆಯತ್ತ ಕೌರವ..!
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Finance
ಜಿಎಸ್ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪವನ್ ಕುಮಾರ್ ನಿರ್ದೇಶನದ ಮುಂದಿನ ಸಿನಿಮಾ ಯಾವಾಗ?
'ಲೂಸಿಯಾ' ಮತ್ತು 'ಯೂ ಟರ್ನ್' ಸಿನಿಮಾಗಳ ನಂತರ ನಿರ್ದೇಶಕ ಪವನ್ ಕುಮಾರ್ ತೆಲುಗು ಸಿನಿಮಾ ಮಾಡಿದರು. ಸಮಂತಾ ಜೊತೆಗೆ 'ಯೂ ಟರ್ನ್' ತೆಲುಗು ಅವತರಣಿಕೆ ಸಿದ್ಧವಾಯ್ತು. ಈ ಚಿತ್ರದ ನಂತರ ಪವನ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದೆ.
ತೆಲುಗು 'ಯೂ ಟರ್ನ್ ಚಿತ್ರ' ಬಿಡುಗಡೆಯಾಗಿ ವರ್ಷಗಳೆ ಕಳೆದಿದೆ. ಆದರೆ, ಪವನ್ ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಹಾಗಾದರೆ, ಪವನ್ ಕುಮಾರ್ ನಿರ್ದೇಶನದ ಮುಂದಿನ ಸಿನಿಮಾ ಯಾವಾಗ ಎನ್ನುವ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.
ಸದ್ಯ, ಪವನ್ ಕುಮಾರ್ 4 ಕಥೆಯನ್ನು ಬರೆದುಕೊಂಡಿದ್ದು, ಮುಂದಿನ ವರ್ಷ ಆ ಸಿನಿಮಾಗಳನ್ನು ಶುರು ಮಾಡಲಿದ್ದಾರಂತೆ. ಒಂದಷ್ಟು ಕಥೆಗಳ ಸಿದ್ಧತೆಯ ನಂತರ ಸಿನಿಮಾ ಪ್ರಾರಂಭ ಮಾಡುವುದು ಅವರ ಪ್ಲಾನ್ ಆಗಿದೆಯಂತೆ.
ತೆಲುಗು ಚಿತ್ರದ ನಂತರ ನೆಟ್ ಫ್ಲಿಕ್ಸ್ ಗಾಗಿ 'ಲೀಲಾ' ಸಿನಿಮಾ ಮಾಡಿದ್ದೇನೆ. ಸದ್ಯ, 'ಗಾಳಿಪಟ 2' ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಈ ಸಿನಿಮಾದ ಬಳಿಕ ನಿರ್ದೇಶನ ಎಂದು ಪವನ್ ಕುಮಾರ್ ತಿಳಿಸಿದ್ದಾರೆ. 'ಗಾಳಿಪಟ 2' ಸಿನಿಮಾಗಾಗಿ ಪವನ್ ತೂಕ ಇಳಿಸಿದ್ದಾರೆ. 'ಅಳಿದು ಉಳಿದವರು' ಸಿನಿಮಾದ ಕಾರ್ಯಕ್ರಮದಲ್ಲಿ ಮುಂದಿನ ಪ್ರಾಜೆಕ್ಟ್ ಬಗ್ಗೆ ಪವನ್ ಕುಮಾರ್ ಮಾತನಾಡಿದ್ದಾರೆ.
'ಅಳಿದು ಉಳಿದವರು' ಸಿನಿಮಾದ ಒಂದು ಪಾತ್ರದಲ್ಲಿ ಪವನ್ ಕುಮಾರ್ ನಟಿಸಿದ್ದಾರೆ. 'ಇಂತಿ ನಿನ್ನ ಪ್ರೀತಿಯ' ನಂತರ ಪವನ್ ಕುಮಾರ್ ಬೇರೆ ರೀತಿಯ ಪಾತ್ರದಲ್ಲಿ ಈ ಸಿನಿಮಾದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ.