'ನಟಸಾರ್ವಭೌಮ'ನಿಗಾಗಿ ಹುಬ್ಬಳ್ಳಿಗೆ ಹೊರಟ ಯುವರಾಜ-ಒಡೆಯರ್
Recommended Video

ಬೆಂಗಳೂರಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಮನೆ ಮೇಲೆ ಐಟಿ ದಾಳಿಯಾಗಿದೆ. ಹೀಗಾಗಿ, ನಾಳೆ ನಡೆಯಬೇಕಾಗಿರುವ 'ನಟಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಾ ಇಲ್ವಾ ಎಂಬ ಗೊಂದಲ ಕಾಡುತ್ತಿದೆ.
ಮತ್ತೊಂದೆಡೆ ಯುವರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಹುಬ್ಬಳ್ಳಿಗೆ ಪ್ರಯಾಣ ಬೆಳಸಿದ್ದಾರೆ. 'ನಟಸಾರ್ವಭೌಮ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಾಳೆ (ಜನವರಿ 5) ಸಂಜೆ 5.30ಕ್ಕೆ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ದೇಶಕ ಪವನ್ ಒಡೆಯರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಹೊರಟಿದ್ದಾರೆ.

'ನಟಸಾರ್ವಭೌಮ' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಡ್ಯಾನ್ಸ್ ಮಾಡಲಿದ್ದಾರೆ. ಹೀಗಾಗಿ, ತಮ್ಮ ತಂಡದ ಜೊತೆ ಜರ್ನಿ ಆರಂಭಿಸಿದ್ದಾರೆ.
ಈ ಕಡೆ ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಐಟಿ ಅಧಿಕಾರಿಗಳ ಶೋಧಕಾರ್ಯ ಬಹುತೇಕ ಕೊನೆಯ ಹಂತದಲ್ಲಿದ್ದು, ಇಂದು ಪರಿಶೀಲನೆ ಮುಗಿಸುವ ಸಾಧ್ಯತೆ ಇದೆ.

ಇಂದು ಐಟಿ ದಾಳಿ ಅಂತ್ಯಗೊಂಡಿರೇ, ನಾಳೆ ಸಂಜೆ ವೇಳೆಗೆ ಪುನೀತ್ ರಾಜ್ ಕುಮಾರ್ ಹುಬ್ಬಳ್ಳಿ ತಲುಪಲಿದ್ದಾರೆ. ಈಗಾಗಲೇ ನಿರ್ದೇಶಕ ಪವನ್ ಒಡೆಯರ್ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಿಲ್ಲ, ನಡೆಯುತ್ತೆ ಎಂದು ಆಹ್ವಾನ ನೀಡಿದ್ದಾರೆ.


Click it and Unblock the Notifications











