For Quick Alerts
  ALLOW NOTIFICATIONS  
  For Daily Alerts

  'ನಟಸಾರ್ವಭೌಮ' ನಿರ್ದೇಶಕನ ಜೊತೆಯಲ್ಲಿ ಕಿಚ್ಚ ಸುದೀಪ್.!

  By Bharath Kumar
  |
  Natasaarvabhowma : ಸುದೀಪ್ ನಟ ಸಾರ್ವಭೌಮ ನಿರ್ದೇಶಕರ ಜೊತೆ..! | Filmibeat Kannada

  ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ನಿಂದ ಹೆಚ್ಚು ಗಮನ ಸೆಳೆಯುತ್ತಿರುವ ಈ ಸಿನಿಮಾ ಬಗ್ಗೆ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದೆ.

  ಹೀಗಿರುವಾಗ 'ನಟಸಾರ್ವಭೌಮ' ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ಪವನ್ ಒಡೆಯರ್, ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

  ಹೌದು, ಕಿಚ್ಚ ಸುದೀಪ್ ಅವರನ್ನ ನಿರ್ದೇಶಕ ಪವನ್ ಒಡೆಯರ್ ಭೇಟಿಯಾಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಭೇಟಿ ಹಿಂದೆ ಏನಾದರೂ ವಿಶೇಷ ಇರಬಹುದಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

  ಒಂದು ವೇಳೆ ನಟಸಾರ್ವಭೌಮ ಚಿತ್ರದಲ್ಲಿ ಸುದೀಪ್ ಏನಾದರೂ ವಿಶೇಷ ಪಾತ್ರ ಮಾಡಬಹುದಾ, ಹಿನ್ನಲೆ ಧ್ವನಿ ನೀಡಬಹುದಾ, ಅಥವಾ ಹಾಡು ಹೇಳಬಹುದಾ ಎಂದು ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ.

  ಆದ್ರೆ, ಇದು ಸಮಾನ್ಯವಾದ ಭೇಟಿ ಅಷ್ಟೇ ಎಂದು ಹೇಳಲಾಗುತ್ತಿದೆ. ಈ ಫೋಟೋವನ್ನ ಸ್ವತಃ ಶೇರ್ ಮಾಡಿರುವ ಪವನ್ ಒಡೆಯರ್ ''ರುಚಿ ತುಂಬಾ ಚೆನ್ನಾಗಿತ್ತು, ಥ್ಯಾಂಕ್ ಯೂ, ಲವ್ ಯೂ ಸುದೀಪ್ ಸರ್'' ಎಂದು ಸ್ಟೇಟಸ್ ಹಾಕಿದ್ದಾರೆ. ಬಹುಶಃ ಸುದೀಪ್ ಅವರು, ಪವನ್ ಒಡೆಯರ್ ಗೆ ರುಚಿಕರ ಊಟ ಮಾಡಿ ಬಡಿಸಿದ್ದಾರೆ ಎನ್ನುವುದು ಇಲ್ಲಿ ಗೊತ್ತಾಗುತ್ತಿದೆ.

  ಅದೇನೇ ಇರಲಿ, ಸುದೀಪ್ ಮತ್ತು ಒಡೆಯರ್ ಭೇಟಿ ಸಹಜವಾದದು. ಒಂದು ವೇಳೆ ನಟಸಾರ್ವಭೌಮ ಚಿತ್ರದ ಹಿನ್ನೆಲೆ ಆಗಿದ್ದರೇ ಅದಕ್ಕಿಂತ ಖುಷಿಯ ವಿಚಾರ ಇನ್ನೊಂದಿಲ್ಲ.

  English summary
  Nata sarvabhouma Movie Director pavan wadeyar has met kiccha sudeep at his home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X