ಪುನೀತ್ ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಕಡೆಯಿಂದ ಭರ್ಜರಿ ಗಿಫ್ಟ್
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ದೊಡ್ಮನೆ ಹುಡ್ಗನ ಉತ್ಸವಕ್ಕೆ ಅಭಿಮಾನಿಗಳು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾ ಯಶಸ್ಸು ಕಂಡಿರುವ ಹಿನ್ನೆಲೆ ಈ ವರ್ಷದ ಬರ್ತಡೇ ಆಚರಣೆ ಮತ್ತಷ್ಟು ಜೋರಾಗಲಿದೆ.
ಮಾರ್ಚ್ 17ಕ್ಕೆ ಪವರ್ ಸ್ಟಾರ್ ಹುಟ್ಟು ಹಬ್ಬ. ಅಭಿಮಾನಿಗಳ ಸಂಭ್ರಮ ಒಂದೆಡೆ ಆದರೆ, ನಿರ್ದೇಶಕ ಪವನ್ ಒಡೆಯರ್ ಸ್ಪೆಷಲ್ ಗಿಫ್ಟ್ ನೀಡಲು ಸಜ್ಜಾಗಿದ್ದಾರೆ. ಪವನ್ ನಿರ್ದೇಶನದ ನಟಸಾರ್ವಭೌಮ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೀಗ ಪುನೀತ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ಸಿದ್ದಮಾಡುತ್ತಿದ್ದಾರೆ.
ವಿಶೇಷ ಏನಪ್ಪಾ ಅಂದ್ರೆ, ಅಪ್ಪುಗಾಗಿ ನಿರ್ದೇಶಕ ಪವನ್ ಒಡೆಯರ್ ವಿಶೇಷ ಹಾಡೊಂದನ್ನ ಉಡುಗೊರೆಯಾಗಿ ನೀಡಲು ಸಿದ್ಧವಾಗಿದ್ದು, ಅದಕ್ಕಾಗಿ ತಯಾರಿ ನಡೆಸಿದ್ದಾರೆ. ನಟಸಾರ್ವಭೌಮ ಚಿತ್ರದ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗಿದೆ. ಆ ಹಾಡಿಗೆ ಬೇರೆಯದ್ದೆ ಲಿರಿಕ್ಸ್ ಸೇರಿಸಿ ಹೊಸ ಹಾಡೊಂದನ್ನ ತಯಾರಿಸಿ ಬರ್ತಡೇ ಗಿಫ್ಟ್ ನೀಡಲು ಪವನ್ ಚಿಂತಿಸಿದ್ದಾರಂತೆ.

ಅಂದ್ಹಾಗೆ, ಈ ಹಾಡಿನ ಸಾಹಿತ್ಯ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಜೀವನಕ್ಕೆ ಸಂಬಂಧ ಪಟ್ಟಿದ್ದಾಗಿರುತ್ತಂತೆ. ಎಲ್ಲಾ ಸಿನಿಮಾಗಳನ್ನು ಸೇರಿಸಿ ಒಂದು ವಿಶೇಷವಾದ ಹಾಡನ್ನು ರೆಡಿ ಮಾಡುತ್ತಿದ್ದಾರೆ ಪವನ್. ಈ ಹಾಡಿನ ಸಾಹಿತ್ಯ ಕೂಡ ಬಹಿರಂಗವಾಗಿದ್ದು, ''ಆಕಾಶದಿ ಅಭಿಯಾಗಿ ಕನ್ನಡ ಪೃಥ್ವಿಗೆ ನೀ ಅರಸು, ಅಣ್ಣಬಾಂಡ್ ದೊಡ್ಮನೆ ಹುಡುಗನ ನಾನ್ ಸ್ಟಾಪ್ ಸ್ಟೆಪ್'... ಈ ಸಾಲುಗಳಿಂದ ಪ್ರಾರಂಭವಾಗಲಿದೆ.
ಸಾಹಿತ್ಯ ಮಾತ್ರ ಹೊಸದಾಗಿ ಪೋಣಿಸಲಾಗಿದೆ. ಆದ್ರೆ ಮ್ಯೂಸಿಕ್ ನಟಸಾರ್ವಭೌಮ ಚಿತ್ರದ ಟೈಟಲ್ ಟ್ರ್ಯಾಕ್ ನದ್ದೇ ಆಗಿರುತ್ತೆ. ಈಗಾಗಲೆ ಸಾಹಿತ್ಯ ಬರೆದು ರೆಡಿಯಾಗಿರುವ ಪವನ್ ಈ ಹಾಡನ್ನು ತಮಿಳಿನ ಗಾಯಕರೊಬ್ಬರ ಬಳಿ ಹಾಡಿಸುವ ಪ್ಲಾನ್ ಮಾಡಿದ್ದಾರೆ. ಎಲ್ಲಾ ಸಿದ್ದವಾದ ಬಳಿಕ ಪುನೀತ್ ಹುಟ್ಟಹಬ್ಬದ ದಿನ ರಾತ್ರಿ 12 ಗಂಟೆಗೆ ರಿಲೀಸ್ ಮಾಡಿ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲಿದ್ದಾರೆ.


Click it and Unblock the Notifications











