For Quick Alerts
  ALLOW NOTIFICATIONS  
  For Daily Alerts

  ಅದ್ದೂರಿ ಸೆಟ್‌ನಲ್ಲಿ ರೆಮೋ ಚಿತ್ರೀಕರಣ ಶುರು ಮಾಡಿದ ಪವನ್ ಒಡೆಯರ್

  |

  ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ರೆಮೋ ಸಿನಿಮಾ ಬಹಳ ದಿನಗಳ ನಂತರ ಮತ್ತೆ ಚಿತ್ರೀಕರಣ ಶುರು ಮಾಡಿದೆ. ಲಾಕ್‌ಡೌನ್‌ನಿಂದ ಶೂಟಿಂಗ್‌ಗೆ ಬ್ರೇಕ್ ಹಾಕಿದ್ದ ರೆಮೋ ಈಗ ಕೊನೆಯ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.

  ಬೆಂಗಳೂರು ನಗರದ ಕೆಂಗೇರಿಯ ಉಲ್ಲಾಳದ ಬಹುದೊಡ್ಡ ಗ್ರೌಂಡ್‍ನಲ್ಲಿ ಸುಮಾರು 1.5 ಕೋಟಿ ಅದ್ದೂರಿ ವೆಚ್ಚದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಲಾ ನಿರ್ದೇಶಕದ ಗುಣಸೇಖರನ್ ಈ ಸೆಟ್ ನಿರ್ಮಿಸಿದ್ದು, ಬಹಳ ಶ್ರೀಮಂತವಾಗಿ ಮೂಡಿ ಬಂದಿದೆ.

  ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕ

  ನಾಯಕನಟನ ಇಂಟ್ರೋಡಕ್ಷನ್ ಸಾಂಗ್ ಶೂಟಿಂಗ್ ಇದಾಗಿದ್ದು, ಹಲವು ಕ್ಯಾಮೆರಾ ಮತ್ತು ಛಾಯಾಗ್ರಹಕರನ್ನು ಬಳಸಲಾಗುತ್ತಿದೆ. ವಿಶೇಷವಾಗಿ ವೈದಿ ಅವರ ಛಾಯಾಗ್ರಹಣ ಕೈಚಳಕ ಒಳಗೊಂಡಿದೆ. ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನ ಮಾಡ್ತಿದ್ದಾರೆ.

  ಇಶಾನ್ ಈ ಚಿತ್ರದಲ್ಲಿ ನಾಯಕನಾಗಿದ್ದು, ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಡ್ಯಾನ್ಸ್‌ನಲ್ಲಿ ಇಬ್ಬರು ಉತ್ತಮವಾಗಿದ್ದು, ಹೊಸ ಮತ್ತು ವಿಭಿನ್ನ ಶೈಲಿಯ ನೃತ್ಯ ಸಂಯೋಜಿಸಲು ಇಮ್ರಾನ್ ಪ್ಲಾನ್ ಮಾಡಿದ್ದಾರೆ.

  ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳು ವಿಭಿನ್ನ ಮತ್ತು ವಿಶೇಷ ರೀತಿಯ ಮೂಡಿಬರಲಿದೆ ಎಂಬ ಭರವಸೆ ಹುಟ್ಟಿದೆ. ಭಾರತದ ಎಲ್ಲಾ ರಾಜ್ಯದ ಜನರ ಕಿವಿ ನಿಮಿರುವಂತಹ ಸಂಗೀತ ರೆಮೋ ಚಿತ್ರದಲ್ಲಿರಲಿದೆಯಂತೆ.

  2020ರ ಅನುಭವ: ಕೊರೊನಾ, ಪ್ಯಾನ್ ಇಂಡಿಯಾ, ಒಟಿಟಿ ಬಗ್ಗೆ ಒಡೆಯರ್ ಮಾತು2020ರ ಅನುಭವ: ಕೊರೊನಾ, ಪ್ಯಾನ್ ಇಂಡಿಯಾ, ಒಟಿಟಿ ಬಗ್ಗೆ ಒಡೆಯರ್ ಮಾತು

  ಸುದೀಪ್ ಹೀಗೆ ಮಾಡ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ | Vikranth Rona | Sudeep

  ನಿರ್ದೇಶನ, ಛಾಯಾಗ್ರಹಣ, ಕಲೆ, ನೃತ್ಯ, ಸಂಗೀತ, ಸಂಕಲನವೂ ಕೂಡ ಹೊಸತರಹದ ಮತ್ತು ಈಗೀನ ಟ್ರೆಂಡ್ ಸೆಟ್ ಮಾಡುವ ಹಾಗೆ ಚಿತ್ರತಂಡ ಹಲವು ರೀತಿಯ ಯೋಜನೆಯನ್ನು ರೂಪಿಸಿಕೊಂಡಿದೆ. ಸದ್ಯಕ್ಕೆ ರಿಲೀಸ್ ಬಗ್ಗೆ ಮಾಹಿತಿ ಇಲ್ಲ. ಆದರೆ, ಆದಷ್ಟೂ ಬೇಗ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದು ಪವನ್ ಒಡೆಯರ್ ಮಾಹಿತಿ ನೀಡಿದ್ದಾರೆ.

  English summary
  Kannada actor ishan and director Pavan Wadeyar resume shoot for Raymo with an introduction song to be choreographed by Imran Sardhariya Film stars Ashika Ranganath as the female lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X