twitter
    For Quick Alerts
    ALLOW NOTIFICATIONS  
    For Daily Alerts

    ರೈತರ ಬಗ್ಗೆ ದರ್ಶನ್‌ಗಿರುವ ಕಾಳಜಿ ಕುರಿತು ಪವನ್ ಒಡೆಯರ್ ಮಾತು

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರ ಪರ ಸದಾ ನಿಲ್ಲುವ ನಟ. ತಮ್ಮ ಪ್ರತಿಯೊಂದು ಚಿತ್ರಗಳಲ್ಲೂ ರೈತರ ಪರವಾಗಿ ಅಥವಾ ರೈತರ ಸಮಸ್ಯೆಯ ಕುರಿತು ಒಂದಲ್ಲ ಒಂದು ಅಂಶವನ್ನು ಗಂಭೀರವಾಗಿ ಚರ್ಚಿಸಿರುವ ಉದಾಹರಣೆಗಳಿವೆ.

    ರೈತರ ಹೋರಾಟ, ರೈತರ ಕಷ್ಟ ಅಂತ ಬಂದಾಗ ಒಂದು ಹೆಜ್ಜೆ ಮುಂದೆ ಬರುವ ಕಲಾವಿದ ಸಹ ಹೌದು. ರೈತರ ಬಗ್ಗೆ ಡಿ ಬಾಸ್‌ಗೆ ಇರುವ ಕಾಳಜಿ ಕುರಿತು ಯುವ ನಿರ್ದೇಶಕ ಪವನ್ ಒಡೆಯರ್ ಬಹಿರಂಗಪಡಿಸಿದ್ದಾರೆ. 'ಬದಲಾಗು ನೀನು' ಎಂಬ ಕೊರೊನಾ ಜಾಗೃತಿ ಹಾಡಿನ ಬಗ್ಗೆ ಮಾತನಾಡಲು ದರ್ಶನ್ ಮನೆಗೆ ಹೋದ ವೇಳೆ ಅವರು ಚರ್ಚಿಸಿದ ವಿಚಾರಗಳನ್ನು ಕಂಡು ನಿರ್ದೇಶಕ ಒಡೆಯರ್ ಒಂದು ಕ್ಷಣ ಅಚ್ಚರಿಗೊಂಡಿದ್ದರಂತೆ. ಮುಂದೆ ಓದಿ...

    ಏನ್ ಡೈರೆಕ್ಟರ್ರೆ,,,,,,

    ಏನ್ ಡೈರೆಕ್ಟರ್ರೆ,,,,,,

    ''ಬದಲಾಗು ನೀನು....ಹಾಡಿನ ಕುರಿತಾಗಿ ದರ್ಶನ್ ಸರ್ ಬಳಿ ಚರ್ಚಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿತ್ತು. ಭೇಟಿ ಮಾಡಲು ಮನೆಗೆ ಹೋದೆ. ಅವ್ರು ಬಂದ್ರನೇ ಯಾವುದೋ ಹುಲಿ ಅಥವಾ ಸಿಂಹ,,,,ಆ ಎರಡು ಮಿಕ್ಸ್ ಆಗಿ ಒಂದು ಮೂರ್ತಿ ಬರ್ತಿದೆ ಅಂತ ಅನಿಸುತ್ತೆ. ಬಂದ್ರು, ಕೂತ್ಕೊಂಡ್ರು....ಏನ್ ಡೈರೆಕ್ಟರ್ರೆ,,,,,,ಅಂದ್ರು.'' ಎಂದು ಪವನ್ ಒಡೆಯರ್ ಮಾತು ಆರಂಭಿಸಿದರು.

    ಐಪಿಎಲ್ ಮ್ಯಾಚ್ ನೋಡುವ ಮುನ್ನಾ ದರ್ಶನ್ ಹೇಳಿರುವ ಈ ಮಾತು ಕೇಳಿಐಪಿಎಲ್ ಮ್ಯಾಚ್ ನೋಡುವ ಮುನ್ನಾ ದರ್ಶನ್ ಹೇಳಿರುವ ಈ ಮಾತು ಕೇಳಿ

    ರೈತರ ಬಗ್ಗೆ ಯಾರೂ ಚಿಂತಿಸಲ್ಲ

    ರೈತರ ಬಗ್ಗೆ ಯಾರೂ ಚಿಂತಿಸಲ್ಲ

    ''ದರ್ಶನ್ ಅವರಿಗಿರುವ ರೈತ ಪರ ಕಾಳಜಿ ಒಂದು ಕ್ಷಣ ಅಚ್ಚರಿ ಮೂಡಿಸಿತು. ಸಡನ್ ಆಗಿ ಯಾರೂ ಅಷ್ಟೊಂದು ಯೋಚಿಸಲ್ಲ. ಕೊರೊನಾದಿಂದ ಪ್ರಾಣಿಗಳು, ಜಾನುವಾರುಗಳಿಗೆ ಎಷ್ಟು ಕಷ್ಟ ಆಗುತ್ತೆ. ರೈತರು ಬೆಳೆದ ಬೆಳೆಯನ್ನು ಹೇಗೆ ಮಾರಾಟ ಮಾಡ್ತಾರೆ ಅಂತೆಲ್ಲ ತುಂಬಾ ಮಾತಾಡಿದ್ರು'' ಎಂದು ಒಡೆಯರ್ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.

    ಮೊದಲ ದಿನ ಇಂತಹದ್ದೇ ಚರ್ಚೆ

    ಮೊದಲ ದಿನ ಇಂತಹದ್ದೇ ಚರ್ಚೆ

    ''ಮೊದಲ ಸಲ ಭೇಟಿ ಆದಾಗ 'ಬದಲಾಗು ನೀನು' ಹಾಡಿನ ಕುರಿತು ವಿಷಯವನ್ನು ಮರೆತುಹೋದ್ವಿ. ದರ್ಶನ್ ಸರ್, ರೈತರ ಕಷ್ಟ, ದಿನಗೂಲಿ ಕಾರ್ಮಿರು ಏನ್ ಮಾಡ್ತಾರೆ ಅನ್ನೋದರ ಬಗ್ಗೆಯೇ ಹೆಚ್ಚು ಮಾತಾಡಿದ್ವಿ. ಸುಮಾರು ಅರ್ಧ ಗಂಟೆ ಮಾತಾಡಿದ್ವಿ'' ಎಂದು ಹೇಳಿಕೊಂಡಿದ್ದಾರೆ.

    Recommended Video

    ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada
    ತುಂಬಾ ಶಿಸ್ತು.....

    ತುಂಬಾ ಶಿಸ್ತು.....

    ''ಕ್ಯಾಮೆರಾ ಮುಂದೆ ಬರಬೇಕು ಅಂದ್ರೆ ನಾನು ಬಹಳ ಶಿಸ್ತು. ಇವತ್ತು ಬೇಡ, ಏನೂ ರೆಡಿಯಾಗಿಲ್ಲ. ನನಗೆ ಎರಡು ದಿನ ಸಮಯ ಕೊಡಿ, ಎಲ್ಲ ರೆಡಿ ಮಾಡ್ಕೊಳ್ತೀನಿ ಅಂದ್ರು. ಮರುದಿನ ಕರೆದರು, ನಾವು ಹೋಗುವುದಕ್ಕೂ ಮುಂಚೆಯೇ ರೆಡಿಯಾಗಿ ಕೂತಿದ್ರು. ಆಮೇಲೆ ಒಂದೊಂದೆ ಟೇಕ್. ಫಟ್ ಫಟ್ ಅಂತ ಮುಗಿತು. ಆಮೇಲೆ ಮತ್ತೆ ಬೇರೆ ವಿಷಯಗಳು ಚರ್ಚೆ ಮಾಡಿದ್ವಿ. ತಾಯಿ ಚಾಮುಂಡೇಶ್ವರಿಯ ಭಕ್ತ. ಅಳತೆಗೆ ತಕ್ಕ ಘನತೆ ಸಂಪಾದಿಸಿರುವ ಕರುಣಾಮಯಿ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    English summary
    Director Pavan Wadeyar reveals About Darshan's thinking about farmers.
    Monday, September 28, 2020, 21:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X