ಪವನ್ ಒಡೆಯರ್ ನಿರ್ದೇಶನದ 'ರೆಮೋ' ಮೂರು ಭಾಷೆಯಲ್ಲಿ ಬಿಡುಗಡೆ!

ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುವ ಟ್ರೆಂಡ್ ಹೆಚ್ಚಾಗುತ್ತಿದೆ. ಕೆಜಿಎಫ್, ಕುರುಕ್ಷೇತ್ರ ಅಂತಹ ದೊಡ್ಡ ಚಿತ್ರಗಳಿಕ ಕೆಲವು ಸ್ಟಾರ್ ನಟ ಮತ್ತು ನಿರ್ದೇಶಕರ ಚಿತ್ರಗಳು ಬಹುಭಾಷೆಯಲ್ಲಿ ತೆರೆಕಾಣಲು ತಯಾರಿ ನಡೆಸಿವೆ.

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರೆಮೋ ಸಿನಿಮಾ ಕನ್ನಡದ ಜೊತೆ ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಕನ್ನಡದಲ್ಲಿ ಸಿದ್ಧವಾಗಿದ್ದು, ತೆಲುಗು ಮತ್ತು ತಮಿಳಿನಲ್ಲಿ ಡಬ್ ಆಗಿ ಥಿಯೇಟರ್‌ಗೆ ಬರಲಿದೆ ಎನ್ನಲಾಗಿದೆ. ಮುಂದೆ ಓದಿ...

ಮೂರು ಭಾಷೆಯಲ್ಲಿ ಒಡೆಯರ್ ಸಿನಿಮಾ

ಮೂರು ಭಾಷೆಯಲ್ಲಿ ಒಡೆಯರ್ ಸಿನಿಮಾ

ಇಶಾನ್ ಮತ್ತು ಅಶಿಕಾ ರಂಗನಾಥ್ ನಟನೆಯಲ್ಲಿ ಸಿದ್ಧವಾಗುತ್ತಿರುವ ರೆಮೋ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಅಧಿಕೃತವಾಗದಿದ್ದರೂ ಆಪ್ತಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿದೆ. ನಿರ್ದೇಶಕ ಪವನ್ ಪಡೆಯರ್ ಸಹ ಈ ಸುದ್ದಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಕೊನೆಯ ಹಂತದ ಶೂಟಿಂಗ್

ಕೊನೆಯ ಹಂತದ ಶೂಟಿಂಗ್

ರೆಮೋ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಅಂದಾಜು ಹತ್ತು ದಿನಗಳ ಶೂಟಿಂಗ್ ಬಾಕಿ ಇದೆ ಎಂದು ಹೇಳಲಾಗಿದೆ. ಇತ್ತೀಚಿಗಷ್ಟೆ ಕೊರಿಯೋಗ್ರಫರ್ ಇರ್ಮಾನ್ ಸರ್ದಾರಿಯಾ, ನಿರ್ದೇಶಕ ಪವನ್ ಒಡೆಯರ್ ಮತ್ತು ನಟ ಇಶಾನ್ ಭೇಟಿ ಮಾಡಿದ್ದರು. ಹಾಡಿನ ಚಿತ್ರೀಕರಣ ಸಂಬಂಧ ಪ್ಲಾನ್ ಮಾಡಲಾಗಿದೆಯಂತೆ.

ಕಂಪ್ಲೀಟ್ ಲವ್ ಸ್ಟೋರಿ

ಕಂಪ್ಲೀಟ್ ಲವ್ ಸ್ಟೋರಿ

ಗೂಗ್ಲಿ ಸಿನಿಮಾದ ನಂತರ ಕಂಪ್ಲೀಟ್ ಲವ್ ಸ್ಟೋರಿ ಕೈಗೆತ್ತಿಕೊಂಡಿರುವ ಪವನ್ ಒಡೆಯರ್ ಬಹಳ ನಿರೀಕ್ಷೆಯಿಂದ ಈ ಸಿನಿಮಾ ಮಾಡುತ್ತಿದ್ದಾರೆ. 2017ರಲ್ಲಿ ರೋಗ್ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿ ಪ್ರವೇಶಿಸಿದ ಇಶಾನ್‌ಗೆ ಇದು ಎರಡನೇ ಸಿನಿಮಾ. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿಯಾಗಿದ್ದಾರೆ.

Recommended Video

ಚಿತ್ರರಂಗದ 40 ವರ್ಷದ ಅನುಭವವನ್ನು ಪತ್ನಿಯ ಜೊತೆ ಬಂದು ಹಂಚಿಕೊಂಡ ಜಗ್ಗೇಶ್ | Jaggesh 40 years Cine Journey
ಮುಂದಿನ ವರ್ಷ ತೆರೆಗೆ

ಮುಂದಿನ ವರ್ಷ ತೆರೆಗೆ

ತಮಿಳು ನಟ ಶರತ್ ಕುಮಾರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದು, ದೊಡ್ಡ ಉದ್ಯಮಿ ಪಾತ್ರ ನಿರ್ವಹಿಸಿದ್ದಾರೆ. ರೆಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಎಸ್ ವೈದ್ಯ ಅವರ ಛಾಯಾಗ್ರಹಣ ಇದೆ. ಎಲ್ಲ ಅಂದುಕೊಂಡಂತೆ ಆದರೆ, ಮುಂದಿನ ವರ್ಷದ ಮೊದಲಾರ್ಧದಲ್ಲಿಯೇ ಈ ಚಿತ್ರ ತೆರೆಗೆ ಬರಲಿದೆ.

More from Filmibeat

English summary
Blockbuster Director Pavan Wadeyar's Much Awaited Upcoming film Raymo will be releasing in 3 languages Kannada, Telugu & Tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X