twitter
    For Quick Alerts
    ALLOW NOTIFICATIONS  
    For Daily Alerts

    ನಟಸಾರ್ವಭೌಮ ಚಿತ್ರಕ್ಕೆ ಯಾಕೆ ಹೀಗೆ ಮಾಡ್ತಿದ್ದೀರಾ? ಪವನ್ ಒಡೆಯರ್ ಬೇಸರ

    |

    Recommended Video

    Nata Sarvabhouma Movie : ನಿರ್ದೇಶಕ ಪವನ್ ಒಡೆಯರ್ ಬೇಸರಕ್ಕೆ ಕಾರಣವೇನು? | Oneindia Kannada

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಿದೆ. ಪುನೀತ್, ರಚಿತಾ ರಾಮ್, ಅನುಪಮ ಪರಮೇಶ್ವರನ್ ನಟಿಸಿರುವ ಈ ಚಿತ್ರ ಈಗ ಎರಡನೇ ವಾರಕ್ಕೆ ಕಾಲಿಟ್ಟಿದೆ.

    ಸಿನಿಮಾ ಚೆನ್ನಾಗಿದೆ, ಒಳ್ಳೆಯ ಬಿಸಿನೆಸ್ ಮಾಡ್ತಿದೆ, ಬೇರೆ ಭಾಷೆಯವರು ನಮ್ಮ ಕನ್ನಡ ಸಿನಿಮಾಗಳ ಕಡೆ ನೋಡುತ್ತಿದ್ದಾರೆ ಎನ್ನುತ್ತಿರುವಾಗಲೇ ಕೆಲವು ಅಭಿಮಾನಿಗಳು ತಮ್ಮ ಕೆಟ್ಟ ಚಾಳಿಯನ್ನ ಮುಂದುವರಿಸಿದ್ದಾರೆ.

    Twitter Review: ಸಿನಿಮಾ ಸೂಪರ್, ಧೂಳೆಬ್ಬಿಸ್ತಿದ್ದಾರೆ ಅಪ್ಪು ಹುಡುಗ್ರು Twitter Review: ಸಿನಿಮಾ ಸೂಪರ್, ಧೂಳೆಬ್ಬಿಸ್ತಿದ್ದಾರೆ ಅಪ್ಪು ಹುಡುಗ್ರು

    ಯಾರೋ ಕೆಲವರು ಮಾಡುವ ಇಂತಹ ಕೆಲಸಗಳಿಗೆ ಚಿತ್ರ ಬಲಿಯಾಗುತ್ತೆ. ಥಿಯೇಟರ್ ಜನ ಹೋಗೋದು ಕಮ್ಮಿಯಾಗುತ್ತೆ ಎಂಬ ಆತಂಕ. ಇಂತಹ ವ್ಯವಸ್ಥೆಯ ವಿರುದ್ಧ ನಿರ್ದೇಶಕ ಪವನ್ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ. ನಟಸಾರ್ವಭೌಮ ಚಿತ್ರಕ್ಕೆ ಯಾಕೆ ಹೀಗೆ ಮಾಡ್ತಿದ್ದೀರಾ? ಎಂದು ಕೇಳ್ತಿದ್ದಾರೆ. ಏನಿದು ಒಡೆಯರ್ ಬೇಸರಕ್ಕೆ ಕಾರಣವಾಗಿರುವುದು. ಮುಂದೆ ಓದಿ.....

    ದೃಶ್ಯಗಳನ್ನ ಸೆರೆಹಿಡಿಯುವುದು

    ದೃಶ್ಯಗಳನ್ನ ಸೆರೆಹಿಡಿಯುವುದು

    ಇತ್ತೀಚಿನ ದಿನಗಳಲ್ಲಿ ಇದೊಂದು ಕಾಯಿಲೆ ಆಗಿದೆ. ನಾನು ಸಿನಿಮಾ ಹೋಗಿದ್ದೆ ಎಂಬುದನ್ನ ತೋರಿಸಿಕೊಳ್ಳೋಲು ಅಥವಾ ಅತಿಯಾದ ಅಭಿಮಾನವನ್ನ ವ್ಯಕ್ತಪಡಿಸುವುದಕ್ಕಾಗಿಯೋ ಗೊತ್ತಿಲ್ಲ ಚಿತ್ರದ ತುಣುಕುಗಳನ್ನ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಾರೆ.

    Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್.. Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..

    ಹೀಗೆ ಯಾಕೆ ಮಾಡ್ತಾರೆ?

    ಹೀಗೆ ಯಾಕೆ ಮಾಡ್ತಾರೆ?

    ''ಈ ಬೆಳವಣಿಗೆಯಿಂದ ಬಹಳ ನೋವಾಗುತ್ತಿದೆ. ಯಾಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ಬಿಡುಗಡೆಯಾದ ಮೊದಲ ಪ್ರದರ್ಶನದಿಂದಲೇ ನಮ್ಮ #ನಟಸಾರ್ವಭೌಮ ಚಿತ್ರದ ಥಿಯೇಟರ್ ನಲ್ಲಿ ಸೆರೆಹಿಡಿದ ತುಣುಕುಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ನೂರಾರು... '' ಎಂದು ಸ್ಕ್ರೀನ್ ಶಾರ್ಟ್ ಹಾಕಿದ್ದಾರೆ ನಿರ್ದೇಶಕ ಪವನ್ ಒಡೆಯರ್.

    ಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕು ಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕು

    ಸೆಕೆಂಡ್ ಗಳಿದ್ರೆ ಓಕೆ, ಆದ್ರೆ....

    ಸೆಕೆಂಡ್ ಗಳಿದ್ರೆ ಓಕೆ, ಆದ್ರೆ....

    ಚಿತ್ರದ ಟೈಟಲ್ ಕಾರ್ಡ್, ಹೀರೋ ಎಂಟ್ರಿ, ಹೀರೋಯಿನ್ ಎಂಟ್ರಿ ದೃಶ್ಯಗಳು ಅಂದ್ರೆ, ಇದು ಅಭಿಮಾನ ಎನ್ನಬಹುದು. ಆದ್ರೆ, 10 ನಿಮಿಷ, 15 ನಿಮಿಷದ ದೃಶ್ಯಗಳನ್ನ ರೆಕಾರ್ಡ್ ಮಾಡಿ ಪೋಸ್ಟ್ ಮಾಡ್ತಾರೆ. ಇಂತಹ ವಿಕೃತ ಮನೋಭಾವ ಯಾಕೆ? ಎಂಬುದು ಚಿತ್ರತಂಡದವರ ಪ್ರಶ್ನೆ?

    Interview: 'ನಟಸಾರ್ವಭೌಮ'ನ ರಹಸ್ಯ ಬಿಚ್ಚಿಟ್ಟ ರಚಿತಾ ರಾಮ್ Interview: 'ನಟಸಾರ್ವಭೌಮ'ನ ರಹಸ್ಯ ಬಿಚ್ಚಿಟ್ಟ ರಚಿತಾ ರಾಮ್

    ಎಲ್ಲ ಸಿನಿಮಾಗಳಿಗೂ ಇದೇ ಸ್ಥಿತಿ

    ಎಲ್ಲ ಸಿನಿಮಾಗಳಿಗೂ ಇದೇ ಸ್ಥಿತಿ

    ಕನ್ನಡದಲ್ಲಿ ಪೈರಸಿ ಕಾಟ ಇಲ್ಲ ಎಂಬ ಹೆಗ್ಗಳಿಕೆ ಒಂದು ಕಡೆಯಾದ್ರೆ, ಹೀಗೆ ಒಂದೇ ಚಿತ್ರದ ಹಲವು ದೃಶ್ಯಗಳನ್ನ ಸೆರೆಹಿಡಿದು ಒಂದು ಸಿನಿಮಾವನ್ನೇ ಯೂಟ್ಯೂಬ್ ನಲ್ಲಿ ತೋರಿಸವಂತಹ ಉದಾಹರಣೆಗಳು ಕಾಣ್ತಿದೆ. ಇದು ಕೇವಲ ನಟಸಾರ್ವಭೌಮ ಚಿತ್ರಕ್ಕೆ ಮಾತ್ರವಲ್ಲ, ದೊಡ್ಡ ದೊಡ್ಡ ಸ್ಟಾರ್ ನಟರ ಬಹುತೇಕ ಎಲ್ಲ ಸಿನಿಮಾಗಳಿಗೂ ಈ ಸಮಸ್ಯೆ ಇದೆ.

    English summary
    Kannada director Pawan wadeyar taken his twitter account to condemn of nata sarvabhouma piracy.
    Friday, February 15, 2019, 15:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X