ಬೆಂಗಳೂರಿಗೆ ಬೈ ಹೇಳಿ ನೆಮ್ಮದಿಯಾಗಿ ದೆಹಲಿ, ಮುಂಬೈ ಸುತ್ತಾಡಲು ಸಿದ್ಧವಾದ ಪವಿತ್ರಾ ಗೌಡ..!

By ಫಿಲ್ಮಿಬೀಟ್ ಡೆಸ್ಕ್

ಕಳೆದ ವರ್ಷದ ಆರಂಭದಲ್ಲಿ ಪವಿತ್ರಾ ಗೌಡ ನನ್ನ ಮತ್ತು ದರ್ಶನ್ ಸಂಬಂಧಕ್ಕೆ ಹತ್ತು ವರ್ಷ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸಹಜವಾಗಿ ತನ್ನ ಗಂಡನ ಈ ಅಪವಿತ್ರ ಸಂಬಂಧ ಜಗಜ್ಜಾಹೀರಾದ ಹಿನ್ನೆಲೆ ದರ್ಶನ್ ಅವರ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಕೆರಳಿದ್ದರು. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪವಿತ್ರಾ ಗೌಡ ಮುಖಕ್ಕೆ ಉಗಿದು ಉಪ್ಪಾಕಿ ಮಂಗಳಾರತಿಯನ್ನೂ ಎತ್ತಿದ್ದರು.

ಆದರೆ ಈಗ ಕೇವಲ ಒಂದು ವರ್ಷದಲ್ಲಿ ಎಲ್ಲವೂ ಬದಲಾಗಿದೆ. ಕಳೆದ ವರ್ಷದವರೆಗೆ ಪವಿತ್ರಾ ಗೌಡ ಅವರ ಜೊತೆಯಲ್ಲಿ ಇರುತ್ತಿದ್ದ ದರ್ಶನ್ ಈಗ ಕಣ್ಮುಂದೆ ತನ್ನ ಜೀವದ ಗೆಳತಿ ಇದ್ದರೂ ಕೂಡ ಮಾತನಾಡುತ್ತಿಲ್ಲ. ಇವತ್ತು ನ್ಯಾಯಾಲಯದಲ್ಲಿ ಮುಖಾಮುಖಿಯಾದರು ಕೂಡ ಮೌನ ಮುರಿದಿಲ್ಲ. ಇದಕ್ಕೆ ನಿಖರವಾದ ಕಾರಣ ಅವರ ಅವರಿಗೆ ಗೊತ್ತಾದರೂ ಸದ್ಯ ದರ್ಶನ್ ಅವರ ಇಂದಿನ ನಡೆಯಿಂದ ಪವಿತ್ರಾ ಗೌಡ ನೊಂದು ಬೆಂದು ಹೋಗಿದ್ದಾರೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಹೀಗಿರುವಾಗ ಪವಿತ್ರಾ ಗೌಡ ಈಗ ಬೇಸತ್ತು ಬೆಂಗಳೂರಿಂದ ಕೆಲ ಕಾಲ ದೂರ ಉಳಿಯಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಎಲ್ಲೆಡೆ ಕೇಳಿ ಬರುತ್ತಿದೆ.

pavithra-gowda-a1-in-the-renuka-swamy-case-gains-court-approval-to-travel-to-mumbai-and-delhi

ಹೌದು, ಅಸಲಿಗೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ. ಆದರೆ ನೆಮ್ಮದಿ ಇನ್ನೂ ಸಿಕ್ಕಿಲ್ಲ. ಪ್ರಕರಣ ಸುಪ್ರೀಂ ಅಂಗಳದಲ್ಲಿದೆ. ಇನ್ನು ದರ್ಶನ್ ಆಗಲಿ ಪವಿತ್ರಾ ಗೌಡ ಆಗಲಿ ಮೊದಲಿನಂತೆ ಎಲ್ಲೆಂದರಲ್ಲಿ ಮನಸೋ ಇಚ್ಛೆ ತಿರುಗುವಂತೆ ಇಲ್ಲ. ಬೆಂಗಳೂರಿಂದ ಹೊರ ಹೋಗಬೇಕು ಅಂದರೆ ನ್ಯಾಯಾಲಯದ ಬಾಗಿಲು ಬಡೆಯಬೇಕು. ಅಲ್ಲಿಂದ ಅಪ್ಪಣೆಯನ್ನು ಪಡೆಯಬೇಕು. ಹೀಗಾಗಿಯೇ ಪವಿತ್ರಾ ಗೌಡ ಈಗ ಇನ್ನೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದೆಹಲಿ ಮತ್ತು ಮುಂಬೈಗೆ ತೆರಳಲು ಅನುಮತಿಯನ್ನು ಪಡೆದಿದ್ದಾರೆ ಎಂದು TV9 ಕನ್ನಡ ವರದಿಯನ್ನು ಮಾಡಿದೆ.

ಆ ಪ್ರಕಾರ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾದ ಪವಿತ್ರಾ ಗೌಡ ತಮ್ಮ ವಕೀಲರಾದ ರವೀಂದ್ರ ಗೌಡ ಅವರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ಮೊನ್ನೆ ಮೊನ್ನೆ ಪ್ರೇಮಿಗಳ ದಿನದ ಪ್ರಯುಕ್ತ ರೀಲಾಂಚ್ ಆದ ತಮ್ಮ ರೆಡ್‌ ಕಾರ್ಪೆಟ್ ಸ್ಟುಡಿಯೋಗೆ ಬಟ್ಟೆಯನ್ನು ತರಬೇಕಿದೆ ಎಂದು ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ಮನ್ನಣೆ ನೀಡಿರುವ 57ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶರಾದ ಜೈ ಶಂಕರ್ ಅವರು ಸದ್ಯ ಪವಿತ್ರಾ ಗೌಡಗೆ ಅನುಮತಿಯನ್ನು ನೀಡಿದ್ದಾರೆ. ಮಾರ್ಚ್ 3ರಿಂದ ಮಾರ್ಚ್ 10 ಮತ್ತು ಮಾರ್ಚ್ 17ರಿಂದ ಮಾರ್ಚ್ 26ರವರೆಗೆ ತಿರುಗಾಡಲು ಪವಿತ್ರಾ ಗೌಡಗೆ ಅವಕಾಶವನ್ನು ನೀಡಿದ್ದಾರೆ.

ಇನ್ನುಳಿದಂತೆ ಅಕ್ಟೋಬರ್ 19-2022ರಲ್ಲಿ ಪವಿತ್ರಾ ಗೌಡ ತಮ್ಮ ಈ ರೆಡ್ ಕಾರ್ಪೆಟ್ 777 ಸ್ಟುಡಿಯೋ ಶುರು ಮಾಡಿದ್ದರು. ಅಮೂಲ್ಯ, ಸೋನಲ್, ರಕ್ಷಿತಾ ಪ್ರೇಮ್ ಸೇರಿ ಅನೇಕರು ಮುಖ್ಯ ಅತಿಥಿಗಳಾಗಿ ಬಂದು ಸ್ಟುಡಿಯೋದ ಬಾಗಿಲು ತೆರೆದಿದ್ದರು. ಆದರೆ ಕಳೆದ ವರ್ಷ ಜೂನ್‌ ನಂತರ ಈ ಸ್ಟುಡಿಯೋಗೆ ಬೀಗ ಜಡಿಯಲಾಗಿತ್ತು. ಸದ್ಯ ಈ ಸ್ಟುಡಿಯೋಗೆ ಮರುಜೀವ ನೀಡಿರುವ ಪವಿತ್ರಾ ಗೌಡ ತಮ್ಮ ಈ ಬಟ್ಟೆ ವ್ಯಾಪಾರದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X