"ಎಷ್ಟೇ ಕುತಂತ್ರ ಮಾಡಿದ್ರು ಮೇಲೊಬ್ಬ ನೋಡ್ತಿದ್ದಾನೆ"; ಪವಿತ್ರಾ ಗೌಡ ಕೌಂಟರ್ ಯಾರಿಗೆ?

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜಾಮೀನು ಪಡೆದು ಹೊರಬಂದಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಕೂಡ ದರ್ಶನ್ & ಗ್ಯಾಂಗ್‌ಗೆ ರಿಲೀಫ್‌ ಸಿಕ್ಕಿದೆ. ಸದ್ಯ ಪವಿತ್ರಾ ಗೌಡ ಜೀವನ ಸಹಜಸ್ಥಿತಿಗೆ ಬಂದಿದೆ. ಜೈಲಿನಿಂದ ಬಿಡುಗಡೆಯಾಗಿ ಕೆಲ ದಿನ ವಿಶ್ರಾಂತಿ ಪಡೆದ ನಟಿ ಇದೀಗ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಪವಿತ್ರಾ ಗೌಡ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗುತ್ತಿದ್ದಾರೆ. ಮೊದಲಿನಂತೆ ಆಗಾಗ್ಗೆ ಮನಸ್ಸಿನಲ್ಲಿರುವ ಭಾವನೆಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೆರೆದಿಡುತ್ತಿದ್ದಾರೆ. ಸದ್ಯ ಆಕೆಯ ಹೊಸ ಪೋಸ್ಟ್ ವೈರಲ್ ಆಗುತ್ತಿದೆ.

Pavithra Gowda Drops Cryptic Quote after bail in Renukaswamy Case

ರೇಣುಕಾಸ್ವಾಮಿ ಮಾಡಿದ್ದು ತಪ್ಪು, ಆತನ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾನೆ ಎಂದು ಕೆಲವರು ಹೇಳುತ್ತಾ ಬರುತ್ತಿದ್ದಾರೆ. ನಟಿ ಭಾವನಾ ಸೇರಿದಂತೆ ಕೆಲವರು ಪ್ರಕರಣದಲ್ಲಿ ದರ್ಶನ್ ಪರ ನಿಂತಿದ್ದರು. ಒಂದು ವೇಳೆ ದರ್ಶನ್ ಮಾಡಿದ್ದು ತಪ್ಪು ಎಂದು ರುಜುವಾತು ಆದರೂ ಕೂಡ ನಾವು ಅವರ ಪರ ನಿಲ್ಲುತ್ತೇವೆ ಎಂದಿದ್ದರು.

ಸದ್ಯ ಪವಿತ್ರಾ ಗೌಡ "ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು" ಎನ್ನುವ ಕೋಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ಜೂನ್ 11ರಂದು ಪವಿತ್ರಾ ಗೌಡ ಬಂಧನವಾಗಿತ್ತು.

ಪವಿತ್ರಾ ಗೌಡಗೆ ಮೃತ ಆರೋಪಿ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ. ಆತನಿಗೆ ಬುದ್ದಿ ಕಲಿಸಲು ದರ್ಶನ್ ಮುಂದಾಗಿದ್ದರು. ಕರೆತಂದು ಹೊಡೆದು ಪಾಠ ಕಲಿಸಲು ಹೋದಾಗ ಆತನ ಪ್ರಾಣವೇ ಹೋಗಿತ್ತು ಎಂದು ಶಾರ್ಟ್ ಶೀಟ್‌ನಲ್ಲಿ ಹೇಳಲಾಗಿದೆ. ಇನ್ನು ಪವಿತ್ರಾ ಗೌಡ ಕುಮ್ಮಕ್ಕಿನಿಂದಲೇ ದರ್ಶನ್ ಈ ಕೆಲಸಕ್ಕೆ ಕೈ ಹಾಕಿದ್ದರು. ಹಾಗಾಗಿ ಆಕೆ ಪ್ರಕರಣದ ಎ1 ಆರೋಪಿ ಆಗಿದ್ದಾರೆ.

ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಪವಿತ್ರಾ ಗೌಡ 179 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಬರೋಬ್ಬರಿ 6 ತಿಂಗಳ ಬಳಿಕ ಡಿಸೆಂಬರ್ 17ರಂದು ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದಿದ್ದರು. ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬಳಿಕ ಸಾರ್ವಜನಿಕವಾಗಿ ಆಕೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ಸಾಯಿಬಾಬಾ ಆಲಯಕ್ಕೆ ಭೇಟಿ ನೀಡಿದ್ದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಪವಿತ್ರಾ ಗೌಡ ಆರ್‌ಆರ್‌ ನಗರದಲ್ಲಿ 'ರೆಡ್‌ ಕಾರ್ಪೆಟ್‌ ಸ್ಟುಡಿಯೋ' ಎಂಬ ಡಿಸೈನರ್‌ ಬೊಟಿಕ್ ಹೊಂದಿದ್ದಾರೆ. ಇತ್ತೀಚೆಗೆ ಅದನ್ನು ರೀ ಲಾಂಚ್ ಮಾಡುವ ಬಗ್ಗೆ ಪೋಸ್ಟ್ ಮಾಡಿದ್ದರು. ಪವಿತ್ರಾ ಗೌಡ ಬಂಧನವಾಗಿ ಕೆಲ ದಿನಗಳ ಕಾಲ ಆ ಬೊಟಿಕ್ ಬಾಗಿಲು ಬಂದ್ ಆಗಿತ್ತು. ಬಳಿಕ ಮಗಳು ಖುಷಿ ಪುನರಾಂಭ ಮಾಡಿದ್ದರು. ಸಿಬ್ಬಂದಿ ಜೊತೆ ಸೇರಿ ನಡೆಸಿಕೊಂಡು ಬಂದಿದ್ದರು.

'ಛತ್ರಿಗಳು ಸಾರ್ ಛತ್ರಿಗಳು', 'ಅಗಮ್ಯ', 'ಸಾಗುವ ದಾರಿಯಲ್ಲಿ' ಎಂಬ ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದರು. 'ಜಗ್ಗುದಾದಾ' ಚಿತ್ರದ ಪಾತ್ರವೊಂದಕ್ಕೆ ಆಡಿಷನ್ ಕೊಡಲು ಹೋದಾಗ ದರ್ಶನ್ ಪರಿಚಯವಾಗಿತ್ತು. ಅದು ಮುಂದೆ ಇಬ್ಬರ ನಡುವೆ ಆತ್ಮೀಯ ಒಡನಾಟಕ್ಕೆ ಕಾರಣವಾಗಿತ್ತು. ನಾನು, ದರ್ಶನ್ 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೀವಿ ಎಂದು ಕೆಲ ತಿಂಗಳ ಹಿಂದೆ ಸ್ವತಃ ಪವಿತ್ರಾ ಗೌಡ ಹೇಳಿಕೊಂಡಿದ್ದರು. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಸಮಾಧಾನ ಹೊರ ಹಾಕಿದ್ದರು. ಪವಿತ್ರಾ ಗೌಡ ಈಗಾಗಲೇ ಒಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.

More from Filmibeat

English summary
God watching everything, Pavithra Gowda's latest Instagram story goes viral;
Read more about: pavithra gowda sandalwood darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X