ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ, ಆದರೆ ನನ್ನ ಮುಟ್ಟೋಕಾಗಲ್ಲ ; ಪವಿತ್ರಾ ಗೌಡ ಮಾರ್ಮಿಕ ಸಂದೇಶ..!

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವರು ಪವಿತ್ರಾ ಗೌಡ. ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಪವಿತ್ರಾ ಗೌಡ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಮನೆಯಲ್ಲಿ ಹೋಮ ಹವನವನ್ನು ಕೂಡ ಮಾಡಿಸಿದ್ದಾರೆ. ತಮ್ಮೆಲ್ಲ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಹಿಂಬಾಲಿಸುತ್ತಿರುವವರಿಗೆ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.

ಆದರೆ.. ಇವರ ಬಹುತೇಕ ಫಾಲೋವರ್ಸ್ ಯುಗಾದಿಗೆ ಶುಭಾಶಯವನ್ನು ಹೇಳದೇ ಬೇರೆ ಆಲೋಚನೆ ಮಾಡುತ್ತಿದ್ದಾರೆ. ಪವಿತ್ರಾ ಗೌಡ ಬರೆದುಕೊಂಡ ಸಾಲುಗಳ ಕುರಿತು ಕೂಡ ಚರ್ಚೆ ಮಾಡುತ್ತಿದ್ದಾರೆ. ಹೌದು, ಅಸಲಿಗೆ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ ಪವಿತ್ರಾ ಗೌಡ ಕೆಟ್ಟ ದೃಷ್ಟಿ ಯಾವಾಗಲೂ ನೋಡುತ್ತಿರುತ್ತೆ ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯ ಇಲ್ಲ. ಋಣಾತ್ಮಕತೆಯೇ ತುಂಬಿರುವ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ ಎಂದು ಬರೆದುಕೊಂಡಿದ್ದಾರೆ.

Pavithra Gowda performs Ugadi pooja and shares cryptic post netizens ask Where is D Boss

ಹೀಗಾಗಿ ಪವಿತ್ರಾ ಗೌಡ ಅವರ ಮೇಲೆ ಬಿದ್ದಿರಬಹುದಾದ ಆ ಕೆಟ್ಟ ದೃಷ್ಟಿ ಯಾರದ್ದು ? ಈ ಮೂಲಕ ಯಾರಿಗಾದರೂ ಪವಿತ್ರಾ ಗೌಡ ಸಂದೇಶ ನೀಡುತ್ತಿದ್ದಾರಾ ? ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ಅವರದ್ದಿರಬಹುದು, ಇವರದ್ದಿರಬಹುದು ಎಂದು ಊಹೆಯನ್ನು ಇವರ ಸೋಶಿಯಲ್ ಮೀಡಿಯಾ ಬಳಗ ಮಾಡುತ್ತಿದೆ.

ಇನ್ನು ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಈ ಹಿಂದೆ ಸಂಬಂಧ ಎಲ್ಲರಿಗೆ ಗೊತ್ತಿರುವಂತಹದ್ದೇ. ಖುದ್ದು ಪವಿತ್ರಾ ಗೌಡ ಕಳೆದ ವರ್ಷ ಇದೇ ಸಮಯಕ್ಕೆ ನಮ್ಮ ಸಂಬಂಧಕ್ಕೆ ಹತ್ತು ವರ್ಷ ಎಂದೆಲ್ಲ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು.

ಆದರೆ ಈಗ ಕೇವಲ ಒಂದು ವರ್ಷದಲ್ಲಿ ಎಲ್ಲವೂ ಬದಲಾಗಿದೆ. ಕಳೆದ ವರ್ಷದವರೆಗೆ ಪವಿತ್ರಾ ಗೌಡ ಅವರ ಜೊತೆಯಲ್ಲಿ ಇರುತ್ತಿದ್ದ ದರ್ಶನ್, ಪವಿತ್ರಾ ಗೌಡ ಅವರಿಗೆ ದರ್ಶನವನ್ನು ನೀಡಿ ಅನೇಕ ದಿನಗಳೇ ಆಗಿವೆ. ಹೀಗಾಗಿಯೇ ಅನೇಕರು ದರ್ಶನ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಯಾರೋ ಒಬ್ಬರು ಮಿಸ್ ಆಗಿದ್ಧಾರೆ ಪೂಜೆಗೆ ಕಳೆ ಇಲ್ಲ ಎನ್ನುತ್ತಿದ್ದಾರೆ. ಅಕ್ಕ ಬಾಸ್ ಎಲ್ಲಿ ? ಅಕ್ಕ ಯಜಮಾನರು ಎಲ್ಲಿ ? ಎಂದು ಕಾಮೆಂಟ್ ಮಾಡಿದ್ದಾರೆ. ಅಕ್ಕನ ಮುಖದಲ್ಲಿ ನಗು ಮತ್ತು ಕಳೆ ಎರಡು ಇಲ್ಲ ಬಾಸ್ ಇದ್ದಿದ್ದರೆ ಫುಲ್ ಮಿಂಚುತ್ತಿದ್ದರು ಎಂದು ಹೇಳಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ಪವಿತ್ರಾ ಗೌಡ ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು, ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು ಎನ್ನುವ ಭಗವದ್ಗೀತೆಯ ಸಂದೇಶದ ಫೋಟೋ ಹಂಚಿಕೊಂಡಿದ್ದರು. ಇನ್ನು ಜೈಲಿಂದ ಹೊರ ಬಂದ ಬಂತರ ಪವಿತ್ರಾ ಗೌಡ ಸಾಲು ಸಾಲು ದೇವಸ್ಥಾನಕ್ಕೆ ತೆರಳಿದ್ದರು. ಬೆಂಗಳೂರಿನ ಹಲವು ದೇವಸ್ಥಾನಕ್ಕೆ ತೆರಳಿದ್ದ ಪವಿತ್ರಾ ಗೌಡ ಆ ನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು ಶಿರಡಿಗೆ ತೆರಳಿದ್ದರು. ಸಾಯಿ ಬಾಬಾ ದರ್ಶನ ಪಡೆದಿದ್ದರು. ಆ ನಂತರ ಉತ್ತರ ಪ್ರದೇಶದ ಪ್ರಯಾಗರಾಜ್‌ಕ್ಕೂ ಹೋಗಿದ್ದ ಪವಿತ್ರಾ ಗೌಡ ಮಹಾಕುಂಭ ಮೇಳದಲ್ಲಿ ಮಿಂದೆದ್ದಿದ್ದರು. ಶಾಹಿ ಸ್ನಾನ ಮಾಡಿದ್ದರು.

ಇನ್ನುಳಿದಂತೆ ಸದ್ಯ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವ ಪವಿತ್ರಾ ಗೌಡ ಮತ್ತು ದರ್ಶನ್ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಏಪ್ರಿಲ್ 2ರಂದು ಈ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X