ರೇಣುಕಾಸ್ವಾಮಿಗೆ ಶೂನಲ್ಲಿ ಹೊಡೆದು ಕೊಲೆ ಬಳಿಕ ಪಶ್ಚಾತ್ತಾಪ ಪಟ್ರಾ ಪವಿತ್ರಾ ಗೌಡ?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ನಿನ್ನೆಯಿಂದಲೂ ಸಂಚಲ ಸೃಷ್ಟಿಸಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆ ತಂದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ದರ್ಶನ್ ಹಾಗೂ ಅವರ ಸಹಚರರ ವಿರುದ್ಧ ತನಿಖೆಯನ್ನು ನಡೆಸುತ್ತಿದ್ದಾರೆ.
ಸದ್ಯ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರನ್ನು ಎ 1 ಆರೋಪಿ ಮಾಡಲಾಗಿದೆ. ಹಾಗೇ ದರ್ಶನ್ ಅವರನ್ನು ಎ 2 ಆರೋಪಿ ಎಂದು ಪರಿಗಣಿಸಲಾಗಿದೆ. ಈ ಸಂಬಂಧ ವಿಚಾರಣೆ ವೇಳೆ ಪವಿತ್ರಾ ಗೌಡ ಪೊಲೀಸರ ಮುಂದೆ ಕೆಲವು ವಿಷಯಗಳನ್ನು ಹೊರಹಾಕಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಷ್ಟಕ್ಕೂ ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ ಗ್ಯಾಂಗ್‌ಗೆ ಹೇಗೆ ಸಿಕ್ಕಿಕೊಂಡ ಅನ್ನೋದು ಈಗಾಗಲೇ ಗೊತ್ತಾಗಿದೆ. ಪೊಲೀಸರ ತನಿಖೆಯಲ್ಲಿ ರೇಣುಕಾಸ್ವಾಮಿ ನಟ ದರ್ಶನ್ ಅವರ ಅಭಿಮಾನಿಯಾಗಿದ್ದ ತಿಳಿದು ಬಂದಿತ್ತು. ಆದರೆ, ಅವರ ಮನೆಯವರು ನೀಡಿರುವ ಪ್ರತಿಕ್ರಿಯೆಯಲ್ಲಿ ದರ್ಶನ್ ಅಭಿಮಾನಿಯಾಗಿರಲಿಲ್ಲ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಬಗ್ಗೆನೂ ಮಾಹಿತಿ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
ಹೀಗಾಗಿ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಹಾಗೂ ಫೋಟೊಗಳನ್ನು ಕಳುಹಿಸಿದ್ದು ಯಾಕೆ? ಅನ್ನೋದೇ ಗೊಂದಲಕ್ಕೆ ಕಾರಣವಾಗಿದೆ. ಆದರೆ, ಈ ಕೊಲೆ ಪ್ರಕರಣವನ್ನು ತಪ್ಪಿಸಬಹುದಿತ್ತು ಅಂತ ಪವಿತ್ರಾ ಗೌಡಗೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಮೇಲೆ ಅನಿಸುತ್ತಿದೆಯಂತೆ. ಇಂತಹದ್ದೊಂದು ಇನ್‌ಸ್ಟೈಡ್ ಸ್ಟೋರಿ ಹರಿದಾಡುತ್ತಿದೆ.

ವಿಚಾರಣೆ ವೇಳೆ ಪವಿತ್ರಾ ಗೌಡ ಪೊಲೀಸರ ಮುಂದೆ ಈ ವಿಷಯವನ್ನು ದರ್ಶನ್‌ಗೆ ಹೇಳಲೇ ಬಾರದಿತ್ತು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ನೇರವಾಗಿ ಪೊಲೀಸರಿಗೆ ದೂರನ್ನು ನೀಡಿದ್ದರೆ, ಸಮಸ್ಯೆ ಬಗೆ ಹರಿದು ಹೋಗುತ್ತಿತ್ತು. ಆದರೆ, ದರ್ಶನ್‌ಗೆ ಹೇಳಿದ್ದಿದ್ದೇ ದೊಡ್ಡ ಸಮಸ್ಯೆ ಆಯ್ತು ಎಂದು ಪೊಲೀಸರ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅದೇ ಇನ್ನೊಂದು ಕಡೆ ರೇಣುಕಾಸ್ವಾಮಿಯನ್ನು ನೋಡಿ ಪವಿತ್ರಾ ಗೌಡ ರೋಷಾಗ್ನಿ ಹೊರ ಹಾಕಿದ್ದರಂತೆ. ದರ್ಶನ್ ಸಹಚರರು ರೇಣುಕಾಸ್ವಾಮಿಯನ್ನು ಎತ್ತಾಕಿಕೊಂಡು ಬಂದು ದರ್ಶನ್ ಹಾಗೂ ಪವಿತ್ರಾ ಗೌಡ ಮುಂದೆ ನಿಲ್ಲಿಸಿದ್ದರು. ಆ ವೇಳೆ ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಪವಿತ್ರಾ ಗೌಡ ಕೋಪ ಉಕ್ಕಿ ಬಂದು ಶೂನಲ್ಲಿಯೇ ಬಾರಿಸಿದ್ದಿದ್ದು ತನಿಖೆ ವೇಳೆ ಹೊರಬಂದಿದೆ ಎಂದು ವರದಿಗಳಾಗಿವೆ.
ಆದ್ರೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ 1 ಆರೋಪಿ ಅಂತಾದ ಮೇಲೆ ಪವಿತ್ರಾ ಗೌಡ ಪಶ್ಚಾತ್ತಾಪ ಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಇತ್ತ ಪತಿಯನ್ನು ಕಳೆದುಕೊಂಡ ರೇಣುಕಾಸ್ವಾಮಿ ಪತ್ನಿ ಸಹನಾ ಶಿಕ್ಷೆ ಆಗಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ದರ್ಶನ್ ಆಗಲಿ, ಯಾರೇ ಆಗಲಿ ಶಿಕ್ಷೆ ಆಗಲೇಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ.


Click it and Unblock the Notifications











