"ಇದು ಹತ್ತು ವರ್ಷದ ಸಂಬಂಧ" ಎಂದು ದರ್ಶನ್ ಜೊತೆಗಿನ ಫೋಟೊ ಹಂಚಿಕೊಂಡ ಪವಿತ್ರಗೌಡ

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ದರ್ಶನ್ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಆಗಾಗಾ ಸುದ್ದಿಯಾಗುತ್ತಲೇ ಇತ್ತು. ಈಗ ಮತ್ತೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಸ್ವತ: ಪವಿತ್ರಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೊಗಳು.

ಪವಿತ್ರಾ ಗೌಡ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬತಾಸ್', 'ಛತ್ರಿಗಳು ಸಾರ್ ಛತ್ರಿಗಳು' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಷನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆಗಾಗ ದರ್ಶನ್ ಜೊತೆಗಿರುವ ಫೋಟೊಗಳನ್ನು ಪವಿತ್ರಾ ಗೌಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

Pavithra Gowda revealed photos with Darshan and says 10years of our relationship

ಈಗ ಇದ್ದಕ್ಕಿಂತ ಹಾಗೇ ದರ್ಶನ್ ಜೊತೆಗಿನ ಹಲವು ಫೋಟೊಗಳನ್ನು ಒಟ್ಟಿಗೆ ಸೇರಿಸಿ ಅದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ "ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ" ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳನ್ನು ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿದೆ.

ಕಳೆದ ವರ್ಷ ಕೂಡ ಪವಿತ್ರಾ ಗೌಡ ಮಗಳ ಹುಟ್ಟುಹಬ್ಬದ ಸಂಭ್ರಮದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲೂ ದರ್ಶನ್ ಕೂಡ ಇದ್ದರು. ಪವಿತ್ರಾ ಗೌಡ ಮಗಳೊಂದಿಗೆ ದರ್ಶನ್ ಹೆಜ್ಜೆ ಹಾಕಿ ಸಂಭ್ರಮಿಸಿದ್ದರು. ಒಟ್ಟಿಗೆ ಕೇಕ್ ಕಟ್ ಮಾಡಿದ್ದರು. "ಹ್ಯಾಪಿ ಬರ್ತಡೇ ಬ್ಯೂಟಿಫುಲ್" ಎಂದು ಬರೆದು ದರ್ಶನ್ ಅವ‌ರನ್ನು ಟ್ಯಾಗ್ ಕೂಡ ಮಾಡಿದ್ದರು.

ಅದು ಬಿಟ್ಟರೆ ಕೆಲವು ವರ್ಷಗಳ ಹಿಂದೆ ದರ್ಶನ್ ಜೊತೆಗಿರುವ ಫೋಟೊವನ್ನು ಸೋಶಿಯಲ್ ಮೀಡಿಯಾ ಪ್ರೊಫೈಲ್ ಮಾಡಿಕೊಂಡಿದ್ದರು. ಅಲ್ಲಿಂದ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಸಂಬಂಧದ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಈಗ ಪವಿತ್ರಾ ಗೌಡ ಅಧಿಕೃತವಾಗಿ ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ತಮ್ಮದು 10 ವರ್ಷದ ಸಂಬಂಧ ಎಂಬುದನ್ನು ರಿವೀಲ್ ಮಾಡಿದ್ದಾರೆ.

ದರ್ಶನ್ ಇದೂವರೆಗೂ ಪವಿತ್ರಾ ಗೌಡ ಅವರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾತಾಡಿಲ್ಲ. ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ಕೊಟ್ಟಿಲ್ಲ. ಆದರೆ, ಈ ಹಿಂದೆ ಕೆಲವು ಮಾಧ್ಯಮಗಳು ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಸಂಬಂಧದ ಬಗ್ಗೆ ಸುದ್ದಿ ಮಾಡಿದ್ದರು. ಅದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

Pavithra Gowda revealed photos with Darshan and says 10years of our relationship

ಇಷ್ಟೇ ಅಲ್ಲದೆ ದರ್ಶನ್ 46ನೇ ಹುಟ್ಟುಹಬ್ಬದ ವೇಳೆ ಪವಿತ್ರಾ ಗೌಡ ಗೆಳತಿ ಮೇಘಾ ಶೆಟ್ಟಿ ಸೇರಿದಂತೆ ಹಲವರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ್ದರು. ದರ್ಶನ್ ಹುಟ್ಟುಹಬ್ಬವನ್ನು ಪವಿತ್ರಾ ಗೌಡ, ಮೇಘಾ ಶೆಟ್ಟಿ, ಸೋನಾಲ್ ಮಾಂತೆರೋ ಸೇರಿದಂತೆ ಇನ್ನೂ ಹಲವರು ಗ್ರ್ಯಾಂಡ್ ಆಗಿ ಆಚರಿಸಿದ್ದರು. ಅದನ್ನು ಮೇಘಾ ಶೆಟ್ಟಿ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿಕೊಂಡಿದ್ದರು. ಆ ವಿಡಿಯೋಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಾರ್ನಿಂಗ್ ಕೊಟ್ಟಿದ್ದರು.

ಆದ್ರೀಗ ಪವಿತ್ರಾ ಗೌಡ ನೇರವಾಗಿ ದರ್ಶನ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ 10 ವರ್ಷದ ರಿಲೇಷನ್‌ಶಿಪ್ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೋ? ಅನ್ನೋ ಪ್ರಶ್ನೆ ಎದ್ದಿದೆ.

More from Filmibeat

English summary
Pavithra Gowda revealed photos with Darshan and says 10years of our relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X