ವಿವಾದದ ಬಳಿಕ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾ ಗೌಡ: ದರ್ಶನ್ ಫ್ಯಾನ್ಸ್ ಟ್ಯಾಟು ನೋಡ್ರೋ ಎಂದಿದ್ದೇಕೆ?
ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿರುವ ಕೆಲವು ಫೋಟೊಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ಈ ಫೋಟೊಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದವು. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ಫೋಟೊಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿಂದ ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಂಡಿದ್ದರು.
ದರ್ಶನ್ ಜೊತೆಗಿನ ಸಂಬಂಧಕ್ಕೆ 10 ವರ್ಷ ಎಂದು ಪವಿತ್ರಾ ಗೌಡ ಫೋಟೊಗಳನ್ನು ಶೇರ್ ಮಾಡಿ ಸಂಭ್ರಮಿಸಿದ್ದರು. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರೋಧ ವ್ಯಕ್ತಪಡಿಸಿದ್ದು ಕೂಡ ಅಷ್ಟೇ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಬಳಿಕ ಪವಿತ್ರಾ ಗೌಡ ತನ್ನ ಮೊದಲನೇ ಮದುವೆ ಹಾಗೂ ಮಗಳ ಬಗ್ಗೆ ಮಾಹಿತಿ ಹಂಚಿಕೊಂಡು ಖಾಸಗಿ ಫೋಟೊಗಳನ್ನು ಶೇರ್ ಮಾಡಿದ್ದಕ್ಕೆ ಎಚ್ಚರಿಕೆ ನೀಡಿದ್ದರು.

ಅಲ್ಲಿಂದ ಈ ಕಿತ್ತಾಟವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಲಿ, ಪವಿತ್ರಾ ಗೌಡ ಆಗಲಿ ಮುಂದುವರೆಸಿರಲಿಲ್ಲ. ಆದರೆ, ಪವಿತ್ರಾ ಗೌಡ ಮಾತ್ರ ಆಗಾಗ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ವಸ್ತ್ರ ವಿನ್ಯಾಸದ ಕಲೆಕ್ಷನ್‌ಗಳ ಬಗ್ಗೆ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದರು. ಈಗ ಮತ್ತೆರಡು ಫೋಟೊಗಳನ್ನು ಹಂಚಿಕೊಂಡಿದ್ದು, ಥೇಟ್ ದರ್ಶನ್‌ರಂತೆಯೇ ಕ್ಯಾಮರಾ ಹಿಡಿದು ಫೋಟೋಗ್ರಫಿ ಮಾಡುತ್ತಿದ್ದಾರೆ. ಈ ಫೋಟೊಗಳನ್ನು ನೋಡಿ ದರ್ಶನ್ ಫ್ಯಾನ್ಸ್ ಗಮನ ಕೈಯಲ್ಲಿರುವ ಟ್ಯಾಟು ಕಡೆಗೆ ತಿರುಗಿದೆ.
ಪವಿತ್ರಾ ಗೌಡ ಕ್ಯಾಮರಾ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿದ್ದಾರೆ. " ಭೂಮಿ ಅನ್ನೋದು ಒಂದು ಕಲೆ, ಅದಕ್ಕಿರುವ ಏಕೈಕ ಸಾಕ್ಷಿ ಅಂದರೆ ಅದು ಫೋಟೊಗ್ರಫಿ" ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ.

ಪವಿತ್ರಾ ಗೌಡ ಈ ಪೋಟೊಗಳನ್ನು ಶೇರ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ 24 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಹಾಗೇ ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. "ಯಾವತ್ತಿಗೂ ಬಾಸ್ ನಗುವಿಗೆ ಕಾರಣ ಆಗ್ತಾನೆ ಇರಿ" ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೇ ಇನ್ನೊಬ್ಬರು "ಅತ್ತಿಗೆ ನಮ್ಮ ಬಾಸ್‌ಗೆ ನೀವೆ ಸೂಪರ್ ಜೋಡಿ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು "ದರ್ಶನ್ ತುಂಬ ಅದ್ರುಷ್ಠವಂತ ಗುರು" ಎಂದಿದ್ದಾರೆ.
ಆದರೆ, ಕೆಲ ಅಭಿಮಾನಿಗಳ ಕಣ್ಣು ಪವಿತ್ರಾ ಗೌಡ ಅವರ ಕೈಯಲ್ಲಿರುವ ಟ್ಯಾಟು ಮೇಲೆ ಹೋಗಿದೆ. ದರ್ಶನ್ ಫ್ಯಾನ್ ಒಬ್ಬರು " ಎಲ್ಲಾರೂ ಕೈ ಮೇಲೆ ನೋಡಿ ಸ್ವಲ್ಪ.. ಗಮನಿಸಿ ಟ್ಯಾಟೊ ನೋಡ್ರೋ ಏನ್ ಇದೆ.. D&P " ಎಂದು ಕಮೆಂಟ್ ಮಾಡಿದ್ರೆ, ಅದಕ್ಕೆ ಇನ್ನಿಬ್ಬರು "D ಅಂದ್ರೆ ಬಾಸ್.. P ಅಂದ್ರೆ ಅತ್ತಿಗೆ" ಅಂತ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ, ದರ್ಶನ್ ಜೊತೆಗಿರುವ ಫೋಟೊಗಳನ್ನು ಹಂಚಿಕೊಂಡ ಬಳಿಕ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿರೋದಂತೂ ಸತ್ಯ.
ಇತ್ತ ಪವಿತ್ರಾ ಗೌಡ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿರುಗೇಟು ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ವಿಜಯಲಕ್ಷ್ಮಿ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚಾಗಿ ಆಕ್ಟೀವ್ ಆಗಿಲ್ಲ.


Click it and Unblock the Notifications











