ಜೈಲಿಂದ ಹೊರ ಬರುತ್ತಿದ್ದಂತೆಯೇ 'ರೆಡ್ ಕಾರ್ಪೆಟ್', ಶಿರಡಿ 'ಪವಿತ್ರ' ದರ್ಶನ..!

By ಫಿಲ್ಮಿಬೀಟ್ ಡೆಸ್ಕ್

ಅಗಮ್ಯ ಎಂಬ ಪರಮತೋಪು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಉದಯಿಸಿದವರು ಪವಿತ್ರಾ ಗೌಡ. ಆ ನಂತರ ಎಸ್.ನಾರಾಯಣ್ ನಿರ್ದೇಶನದ ಛತ್ರಿಗಳು ಸಾರ್ ಛತ್ರಿಗಳು ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾಗಿದ್ದ ಪವಿತ್ರಾ ಗೌಡ, ಸಾ.ರಾ.ಗೋವಿಂದು ಅವರ ಮಗ ಅನೂಪ್ ಅಭಿನಯಿಸಿದ್ದ ಸಾಗುವ ದಾರಿಯಲ್ಲಿ ಎಂಬ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದರು.

ಇನ್ನೂ ಪವಿತ್ರಾ ಗೌಡ ಕೇವಲ ನಾಯಕಿ ಮಾತ್ರ ಅಲ್ಲ ದರ್ಶನ್ ಸಾಂಗತ್ಯ ಬೆಳೆಸಿಕೊಂಡ ನಂತರ ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದರು. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದರು. ದರ್ಶನ್ ಕೃಪೆಯಿಂದ ಸಿಕ್ಕ ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದರು. ಆ ನಂತರ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಹೋಗಿ ಬಂದರು.

pavithra-gowda-shares-first-video-after-jail-release-netizens-advise-against-using-foul-language

ಇಂಥಾ ಪವಿತ್ರಾ ಗೌಡ ಸದ್ಯ ನಿರಾಳರಾಗಿದ್ದಾರೆ. ತಾವು ಜೈಲಿನಲ್ಲಿದ್ದಾಗ ಮುಚ್ಚಿದ್ದ ತಮ್ಮ ರೆಡ್‌ ಕಾರ್ಪೆಟ್ 777 ಸ್ಟುಡಿಯೋಗೆ ಮರು ಜೀವ ನೀಡಲು ಸಿದ್ಧರಾಗಿದ್ದಾರೆ. ಬೇಕಾದ ವಸ್ತುಗಳನ್ನೆಲ್ಲ ಖರೀದಿ ಮಾಡಲು ದೆಹಲಿಗೆ ಹೋದ ಪವಿತ್ರಾ ಗೌಡ ಸದ್ಯ ಶಿರಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿಬಾಬಾ ದರ್ಶನ ಪಡೆದು ಪುನೀತರಾಗಿದ್ದಾರೆ. ಫೋಟೊಗಳನ್ನೆಲ್ಲ ಕೊಲಾಜ್ ಮಾಡಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ಪವಿತ್ರಾ ಗೌಡ ಮತ್ತು ದರ್ಶನ್ ಜೈಲು ಪಾಲಾಗಲು ಕಾರಣವಾಗಿದ್ದು ಅಶ್ಲೀಲ ಸಂದೇಶ. ಹೀಗಾಗಿಯೇ ತುಂಬಾ ಜಾಗರೂಕರಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಅನೇಕರು ಇನ್ನು ಮೇಲಾದರೂ ನಿಮ್ಮ ಜೀವನ ನೀವು ನೋಡಿಕೊಂಡು ಚೆನ್ನಾಗಿರಿ ಎಂದು ಹೇಳಿದ್ದಾರೆ. ಅಕ್ಕಾಗೆ ಯಾರು ಕೆಟ್ಟದಾಗಿ ಎಸ್‌ಎಮ್‌ಎಸ್ ಮಾಡಬೇಡಿ ಯಾಕೆಂದರೆ ನಿಮಗೆ ಗೊತ್ ಅಲ್ವಾ ಅದಕ್ಕೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. 33 ವಾರಗಳ ನಂತರ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯ ಹೇಳಿದ್ದರು. ಆ ನಂತರ ದಿನಕರ್ ನಿರ್ದೇಶನದ ರಾಯಲ್ ಯಶಸ್ವಿಯಾಗಲಿ ಎಂದು ಆಶಿಸುತ್ತಾ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದ್ದರು. ಈಗ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಫೋಸ್ಟ್ ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಇಂದು ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಇನ್ನು ಐದು ಆರೋಪಿಗಳ ಜಾಮೀನು ರದ್ದು ಮಾಡಬೇಕೆಂದು ಕೋರಿ ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್‌ಗೆ 1,492 ಪುಟಗಳ ದಾಖಲೆ ಸಲ್ಲಿಸಿದ್ದರು. ಈ ಹಿನ್ನೆಲೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ಸೇರಿ 07 ಜನ ಆರೋಪಿಗಳಿಗೆ ನೊಟೀಸ್ ಜಾರಿ ಮಾಡಿದೆ. ವಿಚಾರಣೆಯನ್ನು ಮುಂದಕ್ಕೂಡಿದೆ. ಸುಪ್ರೀಂ ಕೋರ್ಟ್ ನೀಡಿದ ಈ ನೊಟೀಸ್‌ಗೆ ಪವಿತ್ರಾ ಗೌಡ ಈಗ ಉತ್ತರ ನೀಡಬೇಕು. ತಮ್ಮ ವಕೀಲರಿಂದ ಉತ್ತರ ಕಳಿಸಬೇಕು. ಈ ಕಾರಣಕ್ಕೆ ಪವಿತ್ರಾ ಗೌಡಗೆ ಪೂರ್ತಿ ಪ್ರಮಾಣದ ನೆಮ್ಮದಿ ಇನ್ನು ಸಿಕ್ಕಿಲ್ಲ. ಕೇವಲ ಪವಿತ್ರಾ ಗೌಡ ಮಾತ್ರ ಅಲ್ಲ ದರ್ಶನ್ ಕಥೆ ಕೂಡ ಸೇಮ್ ಟು ಸೇಮ್. ಇನ್ನು ಸದ್ಯ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಲು ಓಡಾಡುತ್ತಿರುವ ಪವಿತ್ರಾ ಗೌಡ ಸದ್ಯದಲ್ಲಿಯೇ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರೀಕ್ಷೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X