ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವಿತ್ರಾ ಗೌಡ, ದುಷ್ಟಶಕ್ತಿ, ಕೆಟ್ಟ ದೃಷ್ಠಿಯಿಂದ ಮುಕ್ತಿ !

By ಫಿಲ್ಮಿಬೀಟ್ ಡೆಸ್ಕ್

ವಿಶ್ವದ ಅತೀ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿದೆ. ಸನಾತನ ಧರ್ಮದ ಪ್ರಕಾರ ಈ ಕುಂಭ ಸ್ನಾನ ಬಹಳ ಪವಿತ್ರವಾದದ್ದು. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುತ್ತೆ, ಮೋಕ್ಷ ಸಿಗುತ್ತೆ ಎನ್ನುವ ನಂಬಿಕೆ ಅನೇಕರದ್ದು.

ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ ಕೋಟ್ಯಂತರ ಜನ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಕೇವಲ ಜನ ಸಾಮಾನ್ಯರು ಮಾತ್ರವಲ್ಲ ಬಾಲಿವುಡ್‌ದಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೆ ಅನೇಕರು ಮಹಾಕುಂಭ ಮೇಳಕ್ಕೆ ತೆರಳಿ ಈ ಅಧ್ಯಾತ್ಮ ವಿಸ್ಮಯವನ್ನು ಕಣ್ತುಂಬಿಕೊಂಡಿದ್ದಾರೆ. ಸಂಗಮದಲ್ಲಿ ಮಿಂದೆದ್ದಿದ್ದಾರೆ. ಇದಕ್ಕೆ ಪವಿತ್ರಾ ಗೌಡ ಸದ್ಯದ ಉದಾಹರಣೆ.

Pavithra Gowda Takes a Holy Dip at Mahakumbh 2025

ಹೌದು, ದರ್ಶನ್ ಪಾಲಿಗೆ ಮಗ್ಗಲದ ಮುಳ್ಳಾದ ಪವಿತ್ರಾ ಗೌಡ ಜೈಲಿಂದ ಹೊರ ಬಂದ ನಂತರ ಟೆಂಪಲ್ ರನ್ ಮಾಡುತ್ತಿದ್ದಾರೆ. ತಮ್ಮ ತಪ್ಪುಗಳಿಗೆ ಪ್ರಾಯಶ್ಚಿತ ಪಡುತ್ತಿದ್ದಾರೆ. ಇದರ ಮುಂದುವರೆದ ಭಾಗವೆನ್ನುವಂತೆ ಈಗ ಪವಿತ್ರಾ ಗೌಡ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ತಮ್ಮ ಈ ಪ್ರವಾಸದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೌನಿ ಅಮಾವಾಸ್ಯಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯ ಎಂದು ಬರೆದುಕೊಂಡಿದ್ದಾರೆ. ಎಲ್ಲ ನಕಾರಾತ್ಮಕ ಶಕ್ತಿಗಳಿಂದ ನಾನು ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ ಹರ ಹರ ಮಹಾದೇವ್ ಎಂದು ಹೇಳಿದ್ದಾರೆ.

ಇನ್ನು, ಎಲ್ಲರಿಗೆ ಗೊತ್ತಿರುವಂತೆ ರೇಣುಕಾ ಸ್ವಾಮಿಯ ಪ್ರಕರಣದಲ್ಲಿ ಪವಿತ್ರಾ ಗೌಡ ಜೈಲು ಪಾಲಾಗಿದ್ದರು. ಹೀಗಾಗಿಯೇ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರೆ ನಿಮ್ಮ ಪಾಪ ಎಲ್ಲ ನಾಶವಾದಂತೆನಾ ಎಂದು ಪ್ರಶ್ನೆಯನ್ನು ಸದ್ಯ ಅನೇಕರು ಕೇಳುತ್ತಿದ್ದಾರೆ. ನೀವು ಸೀತೆಯಷ್ಟೇ ಪವಿತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದರ್ಶನ್ ಹೆಸರನ್ನು ಎಳೆದು ತಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಗಂಗಾ ನದಿ ಮಲಿನ ಆಯ್ತು, ದೇವರೆ ನಾವು ಬಂದು ತ್ರಿವೇಣಿ ಸಂಗಮದಲ್ಲಿ ಮಿಂದೇಳುವ ಮುಂಚೆ ನದಿ ಶುದ್ದಿಕರಣವಾಗಲಿ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ. ಇನ್ನಾದರೂ ಸನ್ಮಾರ್ಗದಲ್ಲಿ ನಡೆಯಿರಿ ಎಂದಿದ್ದಾರೆ.

pavithra-gowda-takes-a-holy-dip-at-mahakumbh-2025

ಅಂದ್ಹಾಗೇ ಕೆಲ ದಿನಗಳ ಹಿಂದೆ ಪವಿತ್ರಾ ಗೌಡ ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು, ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು ಎನ್ನುವ ಭಗವದ್ಗೀತೆಯ ಸಂದೇಶದ ಫೋಟೋ ಹಂಚಿಕೊಂಡಿದ್ದರು. ಇನ್ನು ಜೈಲಿಂದ ಹೊರ ಬಂದ ಬಂತರ ಪವಿತ್ರಾ ಗೌಡ ಸಾಲು ಸಾಲು ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಬೆಂಗಳೂರಿನ ಹಲವು ದೇವಸ್ಥಾನಕ್ಕೆ ತೆರಳಿದ್ದ ಪವಿತ್ರಾ ಗೌಡ ಆ ನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು ಶಿರಡಿಗೆ ತೆರಳಿದ್ದರು. ಸಾಯಿ ಬಾಬಾ ದರ್ಶನ ಪಡೆದಿದ್ದರು. ಈಗ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ತೆರಳಿ ಮಹಾಕುಂಭ ಮೇಳದಲ್ಲಿ ಮಿಂದೆದ್ದಿದ್ದಾರೆ. ಶಾಹಿ ಸ್ನಾನ ಮಾಡಿದ್ದಾರೆ.

ಇನ್ನುಳಿದಂತೆ ಜೈಲಿನಿಂದ ಹೊರ ಬಂದ ಪವಿತ್ರಾ ಗೌಡ ಸದ್ಯ ತಮ್ಮ ರೆಡ್ ಕಾರ್ಪೆಟ್ 777 ಡಿಸೈನರ್ ಸ್ಟುಡಿಯೋಗೆ ಮರುಜೀವ ನೀಡಲು ಸಿದ್ಧರಾಗಿದ್ದಾರೆ. ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಲು ಓಡಾಡುತ್ತಿರುವ ಪವಿತ್ರಾ ಗೌಡ ಸದ್ಯದಲ್ಲಿಯೇ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ತಾರೆಯರು ಭಾಗಿಯಾಗುವ ಸಾಧ್ಯತೆ ಕೂಡ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X