ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ 'ರೀ ಲಾಂಚ್‌'ಗೆ ಮುಹೂರ್ತ ಫಿಕ್ಸ್ , ಮುಖ್ಯ ಅತಿಥಿಯಾಗಿ ಬರ್ತಾರಾ ದರ್ಶನ್ ?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಪಾಲಿಗೆ ಮಗ್ಗಲ ಮುಳ್ಳು ಆದವರು ಪವಿತ್ರಾ ಗೌಡ. ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿದ ಕುಖ್ಯಾತಿ ಹೊಂದಿರುವ ಪವಿತ್ರಾ ಗೌಡ ಕೇವಲ ನಾಯಕಿ ಮಾತ್ರ ಅಲ್ಲ ದರ್ಶನ್ ಸಾಂಗತ್ಯ ಬೆಳೆಸಿಕೊಂಡ ನಂತರ ಉದ್ಯಮಿಯಾಗಿ ಕೂಡ ಹೊರ ಹೊಮ್ಮಿದರು. ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಾದರು. ಆ ನಂತರ ತಮಗೆ ನೆರವಾದ ದರ್ಶನ್ ಅವರನ್ನು ಕರೆದುಕೊಂಡು ಪರಪ್ಪನ ಅಗ್ರಹಾರಕ್ಕೂ ಹೋಗಿ ಬಂದರು.

ಇಂಥಾ ಪವಿತ್ರಾ ಗೌಡ ಸದ್ಯ ನಿರಾಳರಾಗಿದ್ದಾರೆ. ತಾವು ಜೈಲಿನಲ್ಲಿದ್ದಾಗ ಮುಚ್ಚಿದ್ದ ತಮ್ಮ ರೆಡ್‌ ಕಾರ್ಪೆಟ್ 777 ಸ್ಟುಡಿಯೋಗೆ ಮರು ಜೀವ ನೀಡಲು ಸಿದ್ಧರಾಗಿದ್ದಾರೆ. ಇದೇ ಫೆಬ್ರವರಿ 14ರಂದು ಪ್ರೇಮಿಗಳ ಹಬ್ಬದ ಪ್ರಯುಕ್ತ ತಮ್ಮ ರೆಡ್ ಕಾರ್ಪೆಟ್ 777 ಸ್ಟುಡಿಯೋವನ್ನು ರೀ ಲಾಂಚ್ ಮಾಡಲಿದ್ದಾರೆ. ಹೀಗೊಂದು ಸುದ್ದಿ ಸದ್ಯ ರಾಜರಾಜೇಶ್ವರಿ ನಗರದೆಲ್ಲೆಡೆ ಗುಲ್ಲಾಗಿದೆ.

Pavithra Gowda to Relaunch Red Carpet Studio 777 on Valentine s Day Will Darshan Attend

ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನದಂದು ರೆಡ್ ಥೀಮ್‌ನಲ್ಲಿ ರೆಡ್ ಕಾರ್ಪೆಟ್ 777 ಸ್ಡುಡಿಯೋದ ರೀ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಇನ್ನು ಇಲ್ಲಿಯವರೆಗೆ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ ಮಹಿಳೆಯರಿಗೆ ಬೇಕಾದ ಇಂಡೋ ವೆಸ್ಟರ್ನ್ ಶೈಲಿಯ ಉಡುಗೆಗಳು ದೊರೆಯುತ್ತಿದ್ದವು. ಹಬ್ಬ ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಡಿಸೈನರ್ ಸೀರೆ, ಲೆಹಂಗಾ ಸೇರಿದಂತೆ ಬಗೆ ಬಗೆಯ ಉಡುಗೆಗಳು ಸಿಗುತ್ತಿದ್ದವು.

ಆದರೆ ಈಗ ಪವಿತ್ರಾ ಗೌಡ ತಮ್ಮ ಡಿಸೈನರ್ ಕಲೆಕ್ಷನ್‌ಗಳಲ್ಲಿ ಸೀರೆಯನ್ನು ಕೂಡ ಸೇರಿಸಿದ್ದಾರೆ. ಅತ್ಯಾಕರ್ಷಕ, ವೈವಿಧ್ಯಮಯ, ಡಿಸೈನರ್ ಸೀರೆಗಳನ್ನು ಕೂಡ ಪವಿತ್ರಾ ಗೌಡ ಮಾರಲಿದ್ದಾರೆ. ಈ ವಿಚಾರವನ್ನು ಖುದ್ದು ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಮ್‌ ಮೂಲಕ ಹೇಳಿದ್ದಾರೆ.

ಅಂದ್ಹಾಗೇ ಇದೇ ಫೆಬ್ರವರಿ 16ರಂದು ದರ್ಶನ್ ಅವರ ಜನ್ಮದಿನ. ಈ ಹಿನ್ನೆಲೆ ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋದ ರೀ ಲಾಂಚ್ ಕಾರ್ಯಕ್ರಮವನ್ನು ದರ್ಶನ್ ಅವರ ಹುಟ್ಟುಹಬ್ಬದ ದಿನವೇ ಹಮ್ಮಿಕೊಳ್ಳಲಿದ್ದಾರೆ ಎನ್ನುವ ಮಾತು ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಎರಡು ದಿನದ ಮುನ್ನವೇ ಪವಿತ್ರಾ ಗೌಡ ತಮ್ಮ ಈ ಡಿಸೈನರ್ ಸ್ಟೋರ್‌ನ ರೀ ಓಪನ್ ಮಾಡಲು ಅಣಿಯಾಗಿದ್ದಾರೆ.

ಇನ್ನು ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಈ ಹಿಂದೆ ಸಂಬಂಧ ಎಲ್ಲರಿಗೆ ಗೊತ್ತಿರುವಂತಹದ್ದೇ. ಖುದ್ದು ಪವಿತ್ರಾ ಗೌಡ ಕಳೆದ ವರ್ಷ ಇದೇ ಸಮಯಕ್ಕೆ ನಮ್ಮ ಸಂಬಂಧಕ್ಕೆ ಹತ್ತು ವರ್ಷ ಎಂದೆಲ್ಲ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಆದರೆ ಈಗ ಇಬ್ಬರ ನಡುವೆ ಒಡನಾಟ ಹೇಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಜೈಲಿಂದ ಹೊರ ಬಂದ ಮೇಲೆ ಪವಿತ್ರಾ ಗೌಡ ಸುತ್ತ ಮುತ್ತ ಎಲ್ಲಿಯೂ ದರ್ಶನ್ ಕಾಣಿಸಿಕೊಂಡಿಲ್ಲ. ಖುದ್ದು ಪವಿತ್ರಾ ಗೌಡ ಅವರಿಗೆ ತಮ್ಮ ಸಂಬಂಧದ ಕುರಿತು ಈಗ ಗೊಂದಲ ಕಾಡುತ್ತಿದ್ದರೂ ಕಾಡುತ್ತಿರಬಹುದು. ಹೀಗಿರುವಾಗ ಪವಿತ್ರಾ ಗೌಡ ಅವರ ಈ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಬರುತ್ತಾರಾ ಎನ್ನುವ ಪ್ರಶ್ನೆ ಕೂಡ ಈಗ ಕೆಲವರನ್ನು ಕಾಡುತ್ತಿದೆ. ದರ್ಶನ್ ಮತ್ತೆ ಮಾಡಿದ ತಪ್ಪನ್ನೇ ಮಾಡಲಾರರು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

ಇನ್ನುಳಿದಂತೆ ಅಕ್ಟೋಬರ್ 19-2022ರಲ್ಲಿ ಪವಿತ್ರಾ ಗೌಡ ತಮ್ಮ ಈ ರೆಡ್ ಕಾರ್ಪೆಟ್ 777 ಸ್ಟುಡಿಯೋ ಶುರು ಮಾಡಿದ್ದರು. ಅಮೂಲ್ಯ, ಸೋನಲ್, ರಕ್ಷಿತಾ ಪ್ರೇಮ್ ಸೇರಿ ಅನೇಕರು ಮುಖ್ಯ ಅತಿಥಿಗಳಾಗಿ ಬಂದು ಸ್ಟುಡಿಯೋದ ಬಾಗಿಲು ತೆರೆದಿದ್ದರು. ಪವಿತ್ರಾ ಗೌಡ ಅವರಿಗೆ ಶುಭ ಕೋರಿದ್ದರು. ಈಗ ರೀ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಯಾರೆಲ್ಲ ಬರ್ತಾರೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X