ಮುಂದುವರೆದ ಟೆಂಪಲ್ ರನ್: ಶಕ್ತಿ ದೇವತೆ ಬನಶಂಕರಿ ಅಮ್ಮನ ಮೊರೆ ಹೋದ ಪವಿತ್ರಾ ಗೌಡ

By ಫಿಲ್ಮಿಬೀಟ್ ಡೆಸ್ಕ್

ಪವಿತ್ರಾ ಗೌಡ ಇತ್ತೀಚೆಗೆ ತಮ್ಮ ಫ್ಯಾಷನ್ ಉದ್ಯಮದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಪಡೆದು ಹೊರ ಬಂದಿದ್ದಾರೆ. ಮತ್ತೆ ಹೊಸದಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ರೆಡ್ ಕಾರ್ಪೆಟ್ ಸ್ಡುಡಿಯೋದ ಡಿಸೈನ್‌ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಈ ಮಧ್ಯೆ ಪವಿತ್ರಾ ಗೌಡ ಟೆಂಪಲ್ ರನ್ ಕೂಡ ಮಾಡುತ್ತಿದ್ದಾರೆ. ಜಾಮೀನು ಪಡೆದು ಹೊರ ಬಂದ ಬಳಿಕ ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ದೇವರ ಹರಕೆಗಳನ್ನು ತೀರಿಸುತ್ತಿದ್ದಾರೆ. ಇಂದು ಮಂಗಳವಾರ (ಏಪ್ರಿಲ್ 15) ಪವಿತ್ರಾ ಗೌಡ ಬೆಂಗಳೂರಿನ ಪವರ್‌ಫುಲ್ ಶಕ್ತಿ ದೇವತೆ ಬನಶಂಕರಿ ಅಮ್ಮನ ದೇವಸ್ಥಾನಕ್ಕೆ ವಿಸಿಟ್ ಹಾಕಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Pavithra Gowda visited Bengaluru Banashankari temple and offers prayer

ರೇಣುಕಾಸ್ವಾಮಿ ಪ್ರಕರಣದಲ್ಲಿ ಪವಿತ್ರಾ ಗೌಡ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದರು. ಮೊದಲನೇ ಆರೋಪಿಯಾಗಿ ಜೈಲನ್ನು ಸೇರಬೇಕಾಯ್ತು. ಸುಮಾರು ಆರು ತಿಂಗಳುಗಳ ಕಾಲ ಪವಿತ್ರಾ ಗೌಡ ಜಾಮೀನು ಸಿಗದೆ ಪರದಾಡಿದ್ದರು. ಈ ವೇಳೆ ಈ ಸಂಕಷ್ಟದಿಂದ ಪಾರು ಮಾಡುವಂತೆ ದೇವರಲ್ಲಿ ಹರಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆ ಎಲ್ಲಾ ಹರಕೆಗಳನ್ನು ಒಂದೊಂದಾಗಿಯೇ ಪವಿತ್ರಾ ಗೌಡ ತೀರಸುತ್ತಾ ಬರುತ್ತಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪವಿತ್ರಾ ಗೌಡ ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವಿಗೆ ಹರಕೆ ತೀರಿಸಿದ್ದಾರೆ. ಮಡಿಲಕ್ಕಿ ಅರ್ಪಿಸಿ ಬಂದಿದ್ದಾರೆ. ಪವಿತ್ರಾ ಗೌಡ ಬನಶಂಕರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪವಿತ್ರಾ ಗೌಡ ಟೆಂಪಲ್ ರನ್ ಮತ್ತೆ ಶುರು ಮಾಡಿದ್ದಾರೆ ಅಂತ ಚರ್ಚೆ ಮಾಡುತ್ತಿದ್ದಾರೆ.

Pavithra Gowda visited Bengaluru Banashankari temple and offers prayer

ಹಾಗಂತ ಪವಿತ್ರಾ ಗೌಡ ದೇವಸ್ಥಾನಕ್ಕೆ ಭೇಟಿ ಕೊಡುವುದು ಇದೇ ಮೊದಲೇನು ಅಲ್ಲ. ಜೈಲಿನಿಂದ ಹೊರ ಬರುತ್ತಿದ್ದಂತೆ ತಮ್ಮ ಮನೆ ದೇವರ ಹೊರ ಹೋಗಿದ್ದರು. ಆ ದೇವಸ್ಥಾನದಲ್ಲಿಯೇ ಸ್ನಾನ ಮಾಡಿ, ಪೂಜೆಯನ್ನು ಅರ್ಪಿಸಿ ಬಂದಿದ್ದರು. ಅದಾದ ಬಳಿಕ ಪವಿತ್ರಾ ಗೌಡಗೆ ರಾಜ್ಯ ಬಿಟ್ಟು ಹೊರ ಹೋಗಲು ನ್ಯಾಯಾಲಯ ಅನುಮತಿ ನೀಡಿದ ಬಳಿಕ ಪ್ರಯಾಗ್‌ ರಾಜ್‌ನಲ್ಲಿ ನಡೆದ ಕುಂಬಮೇಳಕ್ಕೆ ಹೋಗಿದ್ದರು. ಅಲ್ಲಿ ಪವಿತ್ರಾ ಸ್ನಾನ ಮಾಡಿ, ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದ್ದರು. ಇತ್ತೀಚೆಗೆ ನಿಮಿಷಾಂಬ ದೇವಸ್ಥಾನದಲ್ಲಿಯೂ ಪವಿತ್ರಾ ಗೌಡ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.

ಇನ್ನೊಂದು ಕಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಟೆಂಪಲ್ ರನ್ ಮುಂದುವರೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಮತ್ತೊಂದು ಶಕ್ತಿ ದೇವತೆ ಅಣ್ಣಮ್ಮ ದೇವಿ ಸನ್ನಿಧಾನಕ್ಕೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ವಿಜಯಲಕ್ಷ್ಮಿ ಒಬ್ಬರೇ ಬಂದು ಹರಕೆಯನ್ನು ತೀರಿಸಿದ್ದರು. ದರ್ಶನ್‌ಗೆ ಜಾಮೀನಿ ಸಿಗುವಂತೆ ಹರಕೆ ಹೊತ್ತಿದ್ದರು. ಅದನ್ನು ಈಗ ತೀರಿಸಿ, ಪೂಜೆಯನ್ನು ಸಲ್ಲಿಸಿ ಹೋಗಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ಪವಿತ್ರಾ ಗೌಡ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಮತ್ತೊಂದು ಕಡೆ ದರ್ಶನ್ ಕೂಡ ದೇವಸ್ಥಾನಗಳಿಗೆ ವಿಸಿಟ್ ಹಾಕುತ್ತಿದ್ದಾರೆ. ಅದರಲ್ಲೂ ಕೇರಳದ ಸುಪ್ರಸಿದ್ಧ ದೇವಸ್ಥಾನಕ್ಕೆ ದರ್ಶನ್ ತಮ್ಮ ಪುತ್ರನೊಂದಿ ವಿಸಿಟ್ ಹಾಕಿದ್ದರು. ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಬಳಿಕ ದರ್ಶನ್, ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ಮೂವರ ಟೆಂಪಲ್ ರನ್ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿರುವುದಂತೂ ಅಷ್ಟೇ ಸತ್ಯ.

More from Filmibeat

English summary
Pavithra Gowda visited Bengaluru Banashankari temple and offers prayer
Read more about: pavithra gowda actress temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X