Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಕುಟುಂಬದ ಜೊತೆ ಪವಿತ್ರ ಪೋಟೋ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತಿಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿಕೊಂಡರು. ರಾಜ್ಯದ ಅನೇಕ ಕಡೆಯಿಂದ ಅಭಿಮಾನಿಗಳು ದರ್ಶನ್ ಮನೆಯ ಬಳಿ ಬಂದು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು.
ಇದೇ ಮೊದಲ ಬಾರಿಗೆ ಡಿ ಬಾಸ್ ದಿನ ಪೂರ್ತಿ ಬಿಡುವು ಮಾಡಿಕೊಂಡು ಮನೆಯ ಬಳಿ ಬಂದಿದ್ದ ಪ್ರತಿ ಅಭಿಮಾನಿಗಳನ್ನ ಭೇಟಿ ಮಾಡಿ ಅವರಿಂದ ಶುಭಾಶಯ ಸ್ವೀಕರಿಸಿ ಫ್ಯಾನ್ಸ್ ಜೊತೆ ಫೋಟೋ ತೆಗೆಸಿಕೊಂಡರು.
ಪುಟ್ಟಣ್ಣಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ದರ್ಶನ್
ಅಭಿಮಾನಿಗಳು ಮಾತ್ರವಲ್ಲದೆ ಈ ಬಾರಿ ಚಿತ್ರರಂಗದಿಂದಲೂ ಚಾಲೆಂಜಿಂಗ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಸಾಕಷ್ಟು ಜನರು ದರ್ಶನ್ ಅವರ ರಾಜಾರಾಜೇಶ್ವರಿ ನಗರದ ಮನೆಗೆ ಭೇಟಿ ನೀಡಿದ್ದರು. ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ಪವಿತ್ರ ಗೌಡ ದರ್ಶನ್ ಕುಟುಂಬದ ಜೊತೆ ತೆಗೆಸಿಕೊಂಡಿರುವ ಪೋಟೋ ವೈರಲ್ ಆಗಿದೆ.

ದರ್ಶನ್ ಕುಟುಂಬಸ್ಥರ ಜೊತೆ ಪವಿತ್ರ
ದರ್ಶನ್ ಅವರ ತಾಯಿ ಮೀನಾ ತೂಗುದೀಪ ಹಾಗೂ ಸಹೋದರಿ ದಿವ್ಯಾ ಅವರ ಜೊತೆ ನಟಿ ಪವಿತ್ರ ಗೌಡ ತೆಗೆಸಿಕೊಂಡಿರುವ ಪೋಟೋ ಸದ್ಯ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

ಕುರುಕ್ಷೇತ್ರ ಸೆಟ್ ನಲ್ಲಿ ಪವಿತ್ರ ಗೌಡ
ಇದಕ್ಕೂ ಮುಂಚೆ ಪವಿತ್ರ ಗೌಡ ದರ್ಶನ್ ಅವರ ಜೊತೆ ಕುರುಕ್ಷೇತ್ರ ಸಿನಿಮಾ ಸೆಟ್ ನಲ್ಲಿ ಕಾಣಿಸಿಕೊಂಡಿದ್ದರು. ಅದಷ್ಟೇ ಅಲ್ಲದೆ ಪವಿತ್ರ ಗೌಡ ತಮ್ಮ ಫೇಸ್ ಬುಕ್ ಪ್ರೊಫೈಲ್ ನಲ್ಲಿ ದರ್ಶನ್ ಜೊತೆಗಿರುವ ಪೋಟೋವನ್ನ ಅಪ್ಲೌಡ್ ಮಾಡಿ ಸುದ್ದಿ ಆಗಿದ್ದರು.

ಸಹೋದರಿಯ ಜೊತೆ ಹುಟ್ಟುಹಬ್ಬ
ದರ್ಶನ್ ಚಿತ್ರೀಕರಣದಲ್ಲಿ ಬಿಡುವಿದ್ದಾಗ ಸಾಮಾನ್ಯವಾಗಿ ಮೈಸೂರಿನ ಮನೆಯಲ್ಲಿ ಇರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಷ್ಟೇ ಅಲ್ಲದೆ ಡಿ ಬಾಸ್ ಗೆ ಮತ್ತೊಂದು ಪ್ರೀತಿಯ ಮನೆ ಇದೆ. ಅದು ಸಹೋದರಿ ದಿವ್ಯಾ ಅವರ ಮನೆ. ದರ್ಶನ್ ಅವರಿಗೆ ದಿವ್ಯಾ ತೂಗುದೀಪ ಅಂದರೆ ಎಲ್ಲಿಲ್ಲದ ಪ್ರೀತಿ.

ನಂ ಒನ್ ಸ್ಟಾರ್ ಕೇಕ್ ಕತ್ತರಿಸಿದ ದರ್ಶನ್
ದರ್ಶನ್ ಸಹೋದರಿ ಮುದ್ದಿನ ತಮ್ಮನಿಗಾಗಿ ನಂ ಒನ್ ಸ್ಟಾರ್ ಎಂದು ಸೂಚಿಸುವ ಕೇಕ್ ಡಿಸೈನ್ ಮಾಡಿಸಿದ್ದರು. ಮನೆಯಲ್ಲಿ ಸಂಜೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡರು ದರ್ಶನ್