"ಪವಿತ್ರಾಗೆ ದೇವ್ರು ಸೌಂದರ್ಯ ಕೊಟ್ಟಿದ್ದಾನೆ, ನನ್ನ ಚಿನ್ನು ಯಾವ್ದೆ ತಪ್ಪು ಮಾಡಿಲ್ಲ"; ಮಾಜಿ ಪತಿ

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ. ಆದರೆ 3 ದಿನ ಕಳೆದರೂ ಆಕೆ ಜೈಲಿನಿಂದ ಹೊರ ಬಂದಿಲ್ಲ. ನಾಳೆ(ಡಿಸೆಂಬರ್ 17) ಪವಿತ್ರಾ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ಪವಿತ್ರಾ ಮಾಜಿ ಪತಿ ಸಂಜಯ್ ಸಿಂಗ್ ಮಾಧ್ಯಮಗಳಲ್ಲಿ ಮಾತನಾಡುತ್ತಾರೆ.

ಪವಿತ್ರಾ ಗೌಡ ಜಾಮೀನು ಸಿಕ್ಕಿ ಜೈಲಿನಿಂದ ಬಿಡುಗಡೆ ಆಗುತ್ತಿರುವ ಬಗ್ಗೆ ಸಂಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ಪವಿತ್ರಾ ಮತ್ತೆ ತಾಯಿಯನ್ನು ಅವರ ಪೋಷಕರನ್ನು ಭೇಟಿ ಮಾಡುವಂತಾಗಿದೆ. ಅದಕ್ಕೆ ಖುಷಿ ಆಗುತ್ತಿದೆ ಎಂದಿದ್ದಾರೆ. ನಾನು ಮಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತ ಆಗುತ್ತದೆ. ಕರ್ಮ ಬಿಡಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Pavithra Gowda s ex husband Sanjay Singh interesting comments on renukaswamy case and Darshan

ಪವಿತ್ರಾ ಗೌಡ ಈ ಪ್ರಕರಣಕ್ಕೆ ಕಾರಣ ಆಗಿರಬಹುದು. ಆದರೆ ಆಕೆ ಯಾವುದೇ ತಪ್ಪು ಮಾಡಿಲ್ಲ. ಸಿಹಿಯನ್ನು ಬಂದು ಇರುವೆ ತಿಂದರೆ ಇರುವೆ ತಪ್ಪು. ಸಿಹಿ ತಿನಿಸಿನದ್ದಲ್ಲ. ದೇವರು ಸೌಂದರ್ಯ ಕೊಟ್ಟಿದ್ದಾನೆ. ರೇಣುಕಾಸ್ವಾಮಿ ಯಾಕೆ ಮೆಸೇಜ್ ಮಾಡಿ ತಪ್ಪು ಮಾಡಿದರು. ಆತನಿಗೂ ಮಡದಿ ಇದ್ದಾರಲ್ಲ. ಪವಿತ್ರಾಗೆ ಕಷ್ಟ ಎಂದಾಗ ಆಪ್ತ ದರ್ಶನ್‌ಗೆ ಹೇಳಿದ್ದಾಳೆ. ದರ್ಶನ್ ತೆಗೆದುಕೊಂಡ ನಿರ್ಧಾರ ಕೊಂಚ ಹೆಚ್ಚು ಕಮ್ಮಿ ಆಯಿತು ಎಂದು ಅವನಿಯಾನ ಯೂಟ್ಯೂಬ್ ಸಂದರ್ಶನದಲ್ಲಿ ಸಂಜಯ್ ಸಿಂಗ್ ಹೇಳಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಮುಂದೆ ಏನಾಗುತ್ತದೆ ಎಂದು ಪವಿತ್ರಾ ಗೌಡಗೆ ಗೊತ್ತಿರಲಿಲ್ಲ. ಆಕಸ್ಮಿಕವಾಗಿ ಈ ರೀತಿ ಆಗಿದೆ. ಪವಿತ್ರಾ ಗೌಡ ಕೊಂಚ ಶ್ರೀಮಂತ ಕುಟುಂಬದವರು. ಆಕೆಯದ್ದು ರಘುವನ ಹಳ್ಳಿ. ಅವರದ್ದು ಡಿಪಾರ್ಟ್‌ಮೆಂಟಲ್ ಸ್ಟೋರ್ ಇತ್ತು. ಮೊದಲ ನೋಟದಲ್ಲೇ ಪವಿತ್ರಾಗೆ ನನ್ನ ಮೇಲೆ ಲವ್ವಾಗಿತ್ತು ಎಂದು ಸಂಜಯ್ ಸಿಂಗ್ ನೆನಪಿಸಿಕೊಂಡಿದ್ದಾರೆ.

ಪವಿತ್ರಾ ಗೌಡ ಅವರ ಕಿರಾಣಿ ಅಂಗಡಿ ಬಳಿಯೇ ನಾನು ಮನೆ ಮಾಡಿದ್ದೆ. ಅವರ ಅಂಗಡಿಗೆ ಹೋಗಿ ನನ್ನ ಮೊಬೈಲ್ ಚಾರ್ಜ್ ಮಾಡಿ ಕೊಡುವಂತೆ ಕೇಳಲು ಹೋಗುತ್ತಿದ್ದೆ. ಆಗ ನಮ್ಮ ಪರಿಚಯ ಶುರುವಾಯಿತು. ಆಗ ನನ್ನ ಫೋನ್ ನಂಬರ್ ತಗೊಂಡು ಪರಿಚಯ ಮಾಡಿಕೊಂಡಿದ್ದರು. ಆಗ ಆಕೆಗೆ ಇನ್ನು 19 ವರ್ಷ ವಯಸ್ಸಾಗಿತ್ತು ಎಂದು ವಿವರಿಸಿದ್ದಾರೆ.

ಪವಿತ್ರಾ ಗೌಡ ಪ್ರೀತಿ ಪಡೆಯಲು ಒಮ್ಮೆ ಜಗಳ ಕೂಡ ಆಯಿತು. ಆಕೆಯ ಸೋದರ ಸಂಬಂಧಿ ಸ್ನೇಹಿತರ ಜೊತೆ ನನ್ನ ಜೊತೆ ಜಗಳ ಮಾಡಿ ನನ್ನ ಮೇಲೆ ಹಲ್ಲೆ ನಡೆದಿತ್ತು. ಬಳಿಕ ವಿಷಯ ಅವರ ಪೋಷಕರಿಗೆ ಗೊತ್ತಾಯಿತು. ನಾನು ಮದುವೆ ಆದರೆ ಈತನನ್ನೇ ಆಗೋದು ಎಂದು ಪವಿತ್ರಾ ಪಟ್ಟು ಹಿಡಿದಳು. ಅಲ್ಲಿಂದ ನಮ್ಮ ಪ್ರೀತಿ ಮುಂದುವರೆಯಿತು ಎಂದಿದ್ದಾರೆ.

ಪವಿತ್ರಾ ಚಿತ್ರರಂಗದಲ್ಲಿ ಆಸಕ್ತಿ ಬೆಳೆಸಿಕೊಳ್ಳುವವರೆಗೂ ಎಲ್ಲವೂ ಚೆನ್ನಾಗಿತ್ತು. ಆಕೆ ಸಿನಿಮಾಗಳಲ್ಲಿ ನಟಿಸಲು ಶುರುವಾದ ಬಳಿಕ ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯ ಆರಂಭವಾಯಿತು. ನಾನು ಅವಳನ್ನು ಚಿನ್ನು ಎಂದು ಕರೆಯುತ್ತಿದ್ದೆ. ಆಕೆಗೆ ತನ್ನ ಕರಿಯರ್ ಬಗ್ಗೆ ಬಹಳ ಆಲೋಚನೆ ಇತ್ತು. ಆಗಿನಿಂದಲೂ ಬೋಟಿಕ್ ಆರಂಭಿಸುವ ಕನಸು ಆಕೆಗೆ ಇತ್ತು. ಈಗ ಅದನ್ನು ಸಾಧಿಸಿದ್ದಾಳೆ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.

ಕೋಳಿ ರಮ್ಯಾ ಕಾರಣದಿಂದಲೇ ಪವಿತ್ರಾ ಗೌಡ ಚಿತ್ರರಂಗಕ್ಕೆ ಬಂದಿದ್ದು. ಆಕೆಯಿಂದಲೇ ಪ್ರೇರಣೆಗೊಂಡು ಪವಿತ್ರಾ ಬಣ್ಣದಲೋಕದತ್ತ ಆಕರ್ಷಿತರಾದರು. ಇಲ್ಲದೇ ಇದ್ದಿದ್ದರೆ ಎಲ್ಲವೂ ಚೆನ್ನಾಗಿಯೇ ಇರ್ತಿತ್ತು ಅನ್ನಿಸುತ್ತದೆ. ಅಲ್ಲಿಂದ ಮುಂದೆ ಇಬ್ಬರ ನಡುವೆ ಹೊಂದಾಣಿಕೆ ಆಗದೇ ಡಿವೋರ್ಸ್‌ವರೆಗೂ ಹೋಯಿತು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

More from Filmibeat

English summary
Sanjay singh says Because of koli ramya Pavithra gowda attract to film industry;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X