ಜಾಲಿ ಮೂಡ್‌ನಲ್ಲಿ ಪವಿತ್ರಾ ಗೌಡ; ಮಗಳ ಜೊತೆ ಕಾಶ್ಮೀರದ ಸುಂದರ ತಾಣಗಳಲ್ಲಿ ಮಸ್ತ್ ಮಜಾ!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಬ್ಯೂಟಿಪುಲ್ ನಟಿ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅದಲ್ಲೂ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಗೂ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದರೂ, ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ.

ನಟಿ ಪವಿತ್ರಾ ಗೌಡ ಸದ್ಯಕ್ಕೀಗ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ವಸ್ತ್ರ ವಿನ್ಯಾಸ ಮಳಿಗೆ ಹೊಂದಿದ್ದಾರೆ. ಈ ಮೂಲಕ ಎರಡೂ ಚಿತ್ರರಂಗದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ ನಟಿಯರು ಪವಿತ್ರಾ ಗೌಡ ವಿನ್ಯಾಸಗೊಳಿಸಿದ ಕಾಸ್ಟ್ಯೂಮ್‌ಗಳನ್ನು ಧರಿಸಿ ಪೋಸ್ ಕೊಡುತ್ತಲೇ ಇರುತ್ತಾರೆ.

Pavithra Gowda s Kashmir Trip with Daughter Khushi Captured in Trending Video

ಸ್ಯಾಂಡಲ್‌ವುಡ್‌ ತಾರೆಯರೊಂದಿಗೆ ಆತ್ಮೀಯರಾಗಿರುವ ಪವಿತ್ರಾ ಗೌಡ ಸದ್ಯ ಜಾಲಿ ಮೂಡ್‌ನಲ್ಲಿ ಇದ್ದಾರೆ. ಪುತ್ರಿ ಖುಷಿ ಗೌಡ ಜೊತೆ ಕಾಶ್ಮೀರ ಪ್ರವಾಸದಲ್ಲಿ ಇದ್ದಾರೆ. ಪ್ರವಾಸವನ್ನು ಮಸ್ತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ.

ಇತ್ತೀಚೆಗೆ ನಟಿ ಪವಿತ್ರಾ ಗೌಡ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದರು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ, ಒಮ್ಮೊಮ್ಮೆ ತಮ್ಮ ಮಳಿಗೆಯಲ್ಲಿ ವಸ್ತ್ರ ವಿನ್ಯಾಸಗೊಳಿದ ಫೋಟೊಗಳ ಜೊತೆಗೆ ಪ್ರತ್ಯಕ್ಷ ಆಗುತ್ತಾರೆ. ಮತ್ತೊಮ್ಮೆ ತಮ್ಮ ಮಗಳೊಂದಿಗೆ ಪೋಸ್ ಕೊಟ್ಟು ನೆಟ್ಟಿಗರ ಗಮನ ಸೆಳೆಯುತ್ತಾರೆ.

ಸದ್ಯಕ್ಕೀಗ ನಟಿ ಪವಿತ್ರಾ ಗೌಡ ಕಾಶ್ಮೀರ ಪ್ರವಾಸದಲ್ಲಿ ಇದ್ದಾರೆ. ಪುತ್ರಿ ಖುಷಿ ಗೌಡ ಹಾಗೂ ಸ್ನೇಹಿತೆಯರೊಂದಿಗೆ ಕಾಶ್ಮೀರ ಸುಂದರ ತಾಣಗಳನ್ನು ಸುತ್ತುತ್ತಿದ್ದಾರೆ. ಈ ವೇಳೆ ಮಗಳು ಖುಷಿ ಜೊತೆ ಕಾಶ್ಮೀರದ ಸುಂದರ ತಾಣಗಳಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ಪುತ್ರಿಗೆ ಹೋಲಿಸಿ ಹಂಚಿಕೊಂಡಿದ್ದಾರೆ.

"ನೀವು ಎಲ್ಲಿಗೆ ಹೋಗಿ, ಅಲ್ಲಿನ ವಾತಾವರಣ ಏನೇ ಇರಲಿ, ಯಾವಾಗಲೂ ಸೂರ್ಯನ ಕಿರಣಗಳನ್ನು ನಿಮ್ಮ ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು. ಸನ್‌ಶೈನ್" ಎಂದು ಪುತ್ರಿ ಖುಷಿ ಗೌಡಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ನಟಿ ಪವಿತ್ರಾ ಗೌಡ ವಿಡಿಯೋಗೆ ನೆಟ್ಟಿಗರು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಯಾವಾಗಲೂ ನಗು ನಗುತ ಇರಿ ಮೇಡಂ", "ಸೂಪರ್ ಸಿಸ್ಟರ್", "ಅದ್ಭುತ ಜಾಗ", "ಬ್ಯೂಟಿಫುಲ್ ಪವಿತ್ರಾ ಗೌಡ" ಅಂತೆಲ್ಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಪವಿತ್ರಾ ಗೌಡ ಹಂಚಿಕೊಂಡ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More from Filmibeat

English summary
Actress Pavithra Gowda embarks on a scenic Kashmir trip with her daughter Khushi, sharing captivating moments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X