ಅತ್ತ ಥಾಯ್ಲೆಂಡ್‌ನಲ್ಲಿ ದರ್ಶನ್,ಇತ್ತ ತಮ್ಮ ಗರಡಿಯಲ್ಲಿ ಮಾಡೆಲ್‌ಗಳನ್ನು ಪಳಗಿಸುತ್ತಿರುವ ಪವಿತ್ರಾ ಗೌಡ;ವಿಡಿಯೋ ವೈರಲ್
ಹೆಚ್ಚೇನು ಇಲ್ಲ .. ಸುಮಾರು ಒಂದೂವರೆ ವರ್ಷದ ಹಿಂದೆ ಸದ್ಯ ಥಾಯ್ಲೆಂಡ್‌ನಲ್ಲಿ ಬಿಡಾರ ಹೂಡಿರುವ ಕನ್ನಡ ಚಿತ್ರರಂಗದ ಸ್ಟಾರ್ ದರ್ಶನ್ ಅವರ ಜೊತೆ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದವರು ಪವಿತ್ರಾ ಗೌಡ. ಅವತ್ತು ಕಾನೂನು ಪ್ರಕಾರ ಹೆಂಡತಿ ಎಂದು ಕರೆಸಿಕೊಂಡಿರುವ ವಿಜಯಲಕ್ಷ್ಮಿ ಅದೆಷ್ಟು ಕಣ್ಣೀರು ಹಾಕಿದ್ದರೋ .. ನೊಂದು ಬೆಂದು ಹಿಡಿ ಶಾಪ ಹಾಕಿದ್ದರೋ .. ಗೊತ್ತಿಲ್ಲ.
ಆದರೆ.. ಕಾಲ..ಕಾಲಕ್ಕೆ.. ಕರ್ಮ- ಪಾಪ-ಪುಣ್ಯದ ಪಾಠವನ್ನು ಮಾಡುವ ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮಿ ಹಾಕಿದ್ದ ಹಿಡಿಶಾಪವೆಲ್ಲ ಅದ್ಯಾವ ಸ್ಪೀಡ್‌ನಲ್ಲಿ ಕೆಲಸ ಮಾಡಿತ್ತು ಅಂದರೆ ಒಂದೆರಡು ವಾರ ಕಳೆಯುವಷ್ಟರಲ್ಲಿ ನಡೆಯಬಾರದ್ದೆಲ್ಲಾ ನಡೆದು ಹೋಗಿತ್ತು. ಲಂಗೂ ಲಗಾಮು ಇಲ್ಲದೇ ಉಂಡಿದ್ದೇ ಉಗಾದಿ.. ಉಟ್ಟಿದ್ದೇ ದೀಪಾವಳಿ.. ಎಂದು ಮೆರೆಯುತ್ತಿದ್ದ ಪವಿತ್ರಾ ಗೌಡ ಬದುಕಿನಲ್ಲಿ ಅಕ್ಷರಶಃ ಕತ್ತಲು ಆವರಿಸಿಕೊಂಡಿತ್ತು. ದರ್ಶನ್ ಬದುಕು ಕೂಡ ಅಲ್ಲೋಲ.. ಕಲ್ಲೋಲವಾಯ್ತು.

ಸದ್ಯ.. ಇದೆಲ್ಲವೂ ಆಗಿ ಒಂದು ವರ್ಷವಾಗಿದೆ. ಖಾಸಗಿಯಾಗಿ ಪವಿತ್ರಾ ಗೌಡಗೆ ದರ್ಶನ್ ದರ್ಶನವನ್ನು ನೀಡಿ ಹಲವು ದಿನಗಳಾಗಿವೆ. ತಾವಾಯ್ತು.. ತನ್ನ ಮನೆಯಾಯ್ತು..ಚಿತ್ರದ ಚಿತ್ರೀಕರಣವಾಯ್ತು.. ಎಂದು ದರ್ಶನ್ ಇದ್ದಾರೆ.ಡೆವಿಲ್ ಚಿತ್ರದ ಚಿತ್ರೀಕರಣದ ನೆಪದಲ್ಲಿ ಥಾಯ್ಲೆಂಡ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲ ಯಾಚ್‌ನ ಕೂಡ ಓಡಿಸಿ ಖುಷಿ ಪಟ್ಟಿದ್ದಾರೆ. ರೇಣುಕಾಸ್ವಾಮಿ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ ಎಂದು ಚೂರೇ ಚೂರು ಆತಂಕಕ್ಕೂ ಒಳಗಾಗದ ದರ್ಶನ್ ಥಾಯ್ಲೆಂಡ್‌ನಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಜಾಲಿಮೂಡ್‌ನಲ್ಲಿ ಕಾಲ ಕಳೆಯುತ್ತಿದ್ಧಾರೆ . ದರ್ಶನ್ ಅವರ ಈ ಜಾಲಿಮೂಡ್‌ನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ ಕೂಡ.
ಮತ್ತೊಂದು ಕಡೆ.. ದಿನ ಬೆಳಗಾದರೆ ನಿಗೂಡಾರ್ಥದ ಬರಹಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪವಿತ್ರಾ ಗೌಡ ಸದ್ಯ ನೋವು ನಲಿವಿನ ನಡುವಿನ ಕದನದ ಬದುಕನ್ನು ದೂಡುತ್ತಿದ್ದಾರೆ. ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿಯೇ ಸುಖ ಮತ್ತು ನೆಮ್ಮದಿಯನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಲೋಕಲ್ To ನ್ಯಾಷನಲ್ ಕೊಂಡೊಯ್ಯಲು ಬೆವರು ಸುರಿಸುತ್ತಿದ್ದಾರೆ. ನಾನಾ ತರಹದ ಸರ್ಕಸ್ ಮಾಡುತ್ತಿದ್ಧಾರೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಸದ್ಯ ಪವಿತ್ರಾ ಗೌಡ ತಮ್ಮ ಗರಡಿಯಲ್ಲಿ ಮಾಡೆಲ್‌ಗಳನ್ನು ಪಳಗಿಸುತ್ತಿದ್ದಾರೆ.

ಹೌದು, ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರ್ಧಾರ ಮಾಡಿದಂತೆ ಇರುವ ಪವಿತ್ರಾ ಗೌಡ ಸದ್ಯ ತಮ್ಮ ಕನಸಿನ ರೆಡ್ ಕಾರ್ಪೆಟ್‌ಗಾಗಿ ಮಾಡೆಲ್‌ಗಳನ್ನು ಒಂದು ಕಡೆ ಸೇರಿಸಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ರೂಪದರ್ಶಿಗೆ ಕ್ಯಾಮರಾಗೆ ಹೇಗೆ ಪೋಸ್ ಕೊಡಬೇಕು, ಯಾವ ಭಂಗಿಯಲ್ಲಿ ಕೂರಬೇಕು, ಯಾವ ಕಡೆ ನೋಡಬೇಕು, ಎನ್ನುವುದನ್ನು ಪವಿತ್ರಾ ಗೌಡ ಕಲಿಸಿದ್ದಾರೆ. ಮಾಡೆಲಿಂಗ್‌ನ ಪಾಠವನ್ನು ಮಾಡಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಡಿಲೀಟ್ ಆಗಿದ್ದು ಈ ವಿಡಿಯೋದ ಸ್ಕ್ರೀನ್ ಶಾಟ್‌ಗಳು ವೈರಲ್ ಆಗಿವೆ.
ಇನ್ನುಳಿದಂತೆ ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ದರ್ಶನ್ ಅವರ ಭವಿಷ್ಯ ಈ ಜುಲೈ 22ಕ್ಕೆ ನಿರ್ಧಾರವಾಗಲಿದೆ. ಅವತ್ತು ದರ್ಶನ್‌ಗೆ ನೀಡಲಾದ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ ಬಳಸಿಲ್ಲ ಎಂದ ನ್ಯಾಯಮೂರ್ತಿ ಪರ್ದಿವಾಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆ ಜುಲೈ 22ಕ್ಕೆ ಏನಾಗಲಿದೆ ಎನ್ನುವ ಕುತೂಹಲ ಸದ್ಯ ಹಲವರಲ್ಲಿ ಮನೆ ಮಾಡಿದೆ.


Click it and Unblock the Notifications











