ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪಗಳಿಗೆ ಪವಿತ್ರಾ ಲೋಕೇಶ್ ತೀಕ್ಷ್ಣ ಪ್ರತಿಕ್ರಿಯೆ
ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್ ವಿವಾಹ ಸುದ್ದಿ ಹಲವು ತಿರುವುಗಳನ್ನು ಪಡೆಯುತ್ತಲೇ ಇದೆ. ನರೇಶ್‌ರ ಮೊದಲ ಪತ್ನಿ ರಮ್ಯಾ ರಘುಪತಿ ಮೊದಲಿಗೆ ನರೇಶ್ ಹಾಗೂ ಪವಿತ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಬಳಿಕ ಸುಚೇಂದ್ರ ಪ್ರಸಾದ್ ಸಹ ಪವಿತ್ರಾ ಲೋಕೇಶ್‌ಗೆ ಲಾಲಸೆ ಹೆಚ್ಚು ನರೇಶ್ ಜೊತೆ ಸಹ ಆಕೆ ಆರು ತಿಂಗಳಿಗೂ ಹೆಚ್ಚು ಬಾಳಲಾರಳು ಎಂದಿದ್ದರು.
ರಮ್ಯಾ ರಘುಪತಿ, ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಉತ್ತರ ನೀಡಲೆಂದು ನಿನ್ನೆ ನಟ ನರೇಶ್ ಬೆಂಗಳೂರಿಗೆ ಬಂದಿದ್ದರು. ಪತ್ರಿಕಾಗೋಷ್ಠಿ ಹಾಗೂ ಸಂದರ್ಶನಗಳಲ್ಲಿ ಪಾಲ್ಗೊಂಡು, ರಮ್ಯಾ ರಘುಪತಿ ಒಬ್ಬ ವಂಚಕಿ, ಸರಣಿ ಆರ್ಥಿಕ ಅಪರಾಧಗಳನ್ನು ಎಸಗಿದ್ದಾರೆ. ನಾವಿಬ್ಬರೂ ಕಳೆದ ಎಂಟು ವರ್ಷಗಳಿಂದಲೂ ಒಟ್ಟಿಗಿಲ್ಲ ಎಂದಿದ್ದರು. ರಮ್ಯಾರ ಆರ್ಥಿಕ ಅಪರಾಧಗಳ ಕುರಿತು ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಇಂದು ನಟಿ ಪವಿತ್ರಾ ಲೋಕೇಶ್ ತಮ್ಮ ವಿರದ್ಧ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನರೇಶ್‌ರ ಮೂರನೇ ಪತ್ನಿ ರಮ್ಯಾ ರಘುಪತಿ ಹಾಗೂ ತಮ್ಮ ಪತಿ ಸುಚೇಂದ್ರ ಪ್ರಸಾದ್ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪವಿತ್ರಾ ಮಾಧ್ಯಮಗಳ ಮೂಲಕ ಉತ್ತರ ನೀಡಿದ್ದಾರೆ.
Recommended Video


ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ಏಕೆ? ಪವಿತ್ರಾ ಪ್ರಶ್ನೆ
''ನನ್ನನ್ನು ಹಾಗೂ ನರೇಶ್ ಅನ್ನು ಮುಂದೆ ಇಟ್ಟುಕೊಂಡು ರಮ್ಯಾ ರಘೂಪತಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾರೆ ಅಷ್ಟೆ. ಆಕೆ ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ನನ್ನ ಗಂಡ ಸರಿಯಿಲ್ಲ, ಅವರೊಬ್ಬ ವಿಮೆನೈಸರ್, ಸುಳ್ಳುಗಾರ, ಮೋಸಗಾರ ಎಂದೆಲ್ಲ ಹೇಳುತ್ತಾರೆ ಕೊನೆಗೆ ನಾನು ನನ್ನ ಗಂಡನ ಜೊತೆ ಇರಬೇಕು ಎನ್ನುತ್ತಾರೆ. ಅವರಿಗೆ ಯಾವುದು ಬೇಕು ಎಂಬುದು ಅವರಿಗೇ ಗೊತ್ತಿಲ್ಲ. ಕನ್ನಡದವಳು ಎನ್ನುತ್ತಾರೆ, ಆದರೆ ಮನೆ ಹೈದರಾಬಾದ್‌ನಲ್ಲಿದೆ ಅಂತಾರೆ, ಈ ವಿಷಯವನ್ನು ಅಲ್ಲಿ ಹೈದರಾಬಾದ್‌ನಲ್ಲಿ ಮಾತನಾಡದೆ ಇಲ್ಲಿ ಬಂದು ಮಾತನಾಡಿರುವ ಉದ್ದೇಶ ಏನು. ನನ್ನ ಟಾರ್ಗೆಟ್ ಮಾಡಲೆಂದೇ ತಾನೆ, ಇದಕ್ಕೆ ಕಾರಣ ಏನು'' ಎಂದು ಪ್ರಶ್ನೆ ಮಾಡಿದ್ದಾರೆ ಪವಿತ್ರಾ ಲೋಕೇಶ್.

ಹೆಣ್ಣು ಮಗಳ ಜೀವನದಲ್ಲಿ ಆಟ ಆಡಬಹುದಾ? ಪವಿತ್ರಾ ಪ್ರಶ್ನೆ
''ಗಂಡನ ಮೇಲೆ ಅಷ್ಟೋಂದು ಪ್ರೀತಿ ಇದ್ದರೆ ಅವರೊಟ್ಟಿಗೆ ಇರಬಹುದಿತ್ತಲ್ಲ. ಬಿಟ್ಟು ಹೋಗಿದ್ದು ಏಕೆ? ಈಗಲೂ ಅವರೊಟ್ಟಿಗೆ ಇರಲಿ, ಅವರ ಅನುಮತಿ ತೆಗೆದುಕೊಳ್ಳಲಿ, ನರೇಶ್ ಅವರ ಕುಟುಂಬ ಸದಸ್ಯರ ಅನುಮತಿ ತೆಗೆದುಕೊಂಡು ಅವರೊಟ್ಟಿಗೆ ವಾಸ ಮಾಡಲಿ ಆಗುತ್ತಾ ಅವರಿಗೆ ಅದು?'' ಎಂದು ಪ್ರಶ್ನೆ ಮಾಡಿರುವ ಪವಿತ್ರಾ ಲೋಕೇಶ್, ''ಒಬ್ಬ ಹೆಣ್ಣು ಮಗಳು ಇನ್ನೊಬ್ಬ ಹೆಣ್ಣು ಮಗಳ ಜೀವನ ಹಾಳು ಮಾಡಬಹುದಾ? ಅವರ ಒಂದು ವೈಯಕ್ತಿಕ ಸಮಸ್ಯೆಯಿಂದ ಇನ್ನೊಬ್ಬ ಹೆಣ್ಣು ಮಗಳ ಜೀವನದಲ್ಲಿ ಆಟ ಆಡಬಹುದಾ?'' ಎಂದು ಪ್ರಶ್ನೆ ಮಾಡಿದ್ದಾರೆ ಪವಿತ್ರಾ.

''ಹೆಣ್ಣು ಮಗಳ ಖಾಸಗಿ ವಿಷಯ ಸ್ಟಿಂಗ್ ಆಪರೇಷನ್ ಮಾಡಬಹುದಾ?''
''ನನ್ನ ಮನೆಯ ಒಳಕ್ಕೆ ಜನರನ್ನು ರಮ್ಯಾ ರಘುಪತಿ ಕಳಿಸಿದ್ದಾರೆ. ಒಬ್ಬ ಹೆಣ್ಣು ಮಗಳ ಖಾಸಗಿ ವಿಷಯವನ್ನು ಮಾಧ್ಯಮಗಳು ಸ್ಟಿಂಗ್ ಆಪರೇಷನ್ ಮೂಲಕ ಬಹಿರಂಗ ಮಾಡಿವೆ. ಮಹಿಳೆಯ ವೈಯಕ್ತಿಕ ವಿಷಯವನ್ನು ಮಾಧ್ಯಮಗಳು ಸ್ಟಿಂಗ್ ಆಪರೇಷನ್ ಮಾಡಬಹುದಾ? ಮಾಧ್ಯಮಗಳಿಗೆ ಒಂದು ಚೌಕಟ್ಟಿಲ್ಲವಾ? ಹೆಣ್ಣು ಮಗಳ ಮನೆಗೆ ಹೋಗಿ ಹೀಗೆ ಮಾಡಬಹುದಾ ಇಲ್ಲವಾ ಎಂಬುದು ಗೊತ್ತಾಗೋದು ಬೇಡವಾ? ಈಗ ಇವರು ಬಂದಿದ್ದಾರೆ. ನಾಳೆ ಇನ್ನೊಬ್ಬರು ಬರಬಹುದು? ಯಾರಾದರೂ ಬಂದು ನನಗೆ ಏನಾದರೂ ಮಾಡಿದರೆ? ನನ್ನ ಕೊಲೆ ಸಹ ಮಾಡಬಹುದು ನನಗೆ ರಕ್ಷಣೆ ಬೇಕಿದೆ'' ಎಂದಿದ್ದಾರೆ ಪವಿತ್ರಾ ಲೋಕೇಶ್.

ನ್ಯಾಯ ಒದಗಿಸುವ ಸ್ಥಾನದಲ್ಲಿದ್ದಾರೆ ನರೇಶ್!
''ಹೈದರಾಬಾದ್‌ನಲ್ಲಿ ನರೇಶ್‌ಗೆ ದೊಡ್ಡ ಹೆಸರಿದೆ. ಮಾ ಪ್ರೆಸಿಡೆಂಟ್ ಆಗಿದ್ದವರು. ಅವರ ಮನೆಗೆ ಯಾರೇ ಬಂದರು ಸಹಾಯ ಮಾಡುತ್ತಾರೆ. ನರೇಶ್ ಹಾಗೂ ಅವರ ತಂದೆ-ತಾಯಿ ಹೆಸರು ಹೇಳಿಕೊಂಡು ಎಷ್ಟೋ ಜನ ಊಟ ಮಾಡುತ್ತಿದ್ದಾರೆ. ಇಂಥಹಾ ದೊಡ್ಡ ಮನೆಯವರು ಮೋಸ ಮಾಡಲು ಸಾಧ್ಯವಾ? ಅವರು ನಾಲ್ಕು ಜನರಿಗೆ ನ್ಯಾಯ ಒದಗಿಸುವ ಸ್ಥಾನದಲ್ಲಿರುವವರು. ಆದರೆ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ರಮ್ಯಾ ರಘುಪತಿಯೇ ನೇರ ಕಾರಣ'' ಎಂದಿದ್ದಾರೆ ಪವಿತ್ರಾ


Click it and Unblock the Notifications











