»   » ದರ್ಶನ್ ಮತ್ತು ಪವಿತ್ರ ಗೌಡ ಬಗ್ಗೆ ಅಚ್ಚರಿ ಬೆಳವಣಿಗೆ.! ಯಾಕ್ಹೀಗಾಯ್ತು.?

ದರ್ಶನ್ ಮತ್ತು ಪವಿತ್ರ ಗೌಡ ಬಗ್ಗೆ ಅಚ್ಚರಿ ಬೆಳವಣಿಗೆ.! ಯಾಕ್ಹೀಗಾಯ್ತು.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ಪವಿತ್ರ ಗೌಡ ಅವರ ಫೋಟೋಗಳು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಹೆಚ್ಚು ಸದ್ದು ಮಾಡಿತ್ತು. ಈ ಫೋಟೋಗಳನ್ನ ನೋಡಿದ ಮೇಲಂತ ಪ್ರತಿಯೊಬ್ಬ ಅಭಿಮಾನಿಯೂ ಒಂದೊಂದು ರೀತಿಯಲ್ಲಿ ಮಾತನಾಡಿಕೊಂಡಿದ್ದರು.

ಆದ್ರೆ, ಅದ್ಯಾವುದಕ್ಕೂ ಯಾರಿಂದಲೂ ಉತ್ತರವಿಲ್ಲ. ಯಾರೂ ಯಾಕೆ, ಸ್ವತಃ ಫೋಟೋಗಳನ್ನ ಪೋಸ್ಟ್ ಮಾಡಿದ್ದ ಪವಿತ್ರ ಗೌಡ ಅವರಿಂದಲೇ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ, ಇವರಿಬ್ಬರ ಸ್ನೇಹದ ಬಗ್ಗೆ ಹರಿದಾಡಿದ ಚರ್ಚೆಗಳು ಬರಿ ಚರ್ಚೆಗಳಾಗಿಯೇ ಉಳಿದುಕೊಳ್ಳುತ್ತಿತ್ತು.

ದರ್ಶನ್ ಕುಟುಂಬದ ಜೊತೆ ಪವಿತ್ರ ಪೋಟೋ ವೈರಲ್

ಇದೀಗ, ನಟ ದರ್ಶನ್ ಮತ್ತು ಪವಿತ್ರ ಗೌಡ ಅವರ ವಿಷ್ಯದಲ್ಲಿ ಹೊಸದೊಂದು ಬೆಳವಣಿಗೆ ನಡೆದಿದೆ. ದಿಢೀರ್ ಅಂತ ಈ ಬೆಳವಣಿಗೆಯನ್ನ ಗಮನಿಸಿದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಅಷ್ಟಕ್ಕೂ, ಏನದು ಹೊಸ ಬೆಳವಣಿಗೆ.? ಮುಂದೆ ಓದಿ....

ಫೋಟೋಗಳೆಲ್ಲ ಡಿಲೀಟ್.!

ಯಾರ ಬಗ್ಗೆಯೂ ತಲೆಕಡೆಸಿಕೊಳ್ಳದೇ ತನ್ನಿಷ್ಟದಂತೆ ದರ್ಶನ್ ಮತ್ತು ಪವಿತ್ರ ಗೌಡ ಒಟ್ಟಿಗಿರುವ ಕೆಲವು ಫೋಟೋಗಳನ್ನ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇದೀಗ, ತಮ್ಮ ಅಕೌಂಟ್ ನಲ್ಲಿ ಯಾವ ಫೋಟೋವೂ ಇಲ್ಲ. ಎಲ್ಲವೂ ಡಿಲೀಟ್ ಆಗಿದೆ.

ಎಲ್ಲವೂ ಮಾಯ

ದರ್ಶನ್ ಮತ್ತು ಪವಿತ್ರ ಗೌಡ ಫೋಟೋ, ದರ್ಶನ್ ಅವರ ಮಗ ವಿನೀಶ್ ಫಾರ್ಮ್ ಹೌಸ್ ನಲ್ಲಿ ಆಟವಾಡುತ್ತಿದ್ದ ವಿಡಿಯೋ, ದರ್ಶನ್ ಕುಟುಂಬದ ಜೊತೆ ಪವಿತ್ರ ಇರುವ ಫೋಟೋ....ಹೀಗೆ, ಈ ಮೊದಲು ಹಾಕಿದ್ದ ಎಲ್ಲ ಫೋಟೋಗಳು ಮಾಯವಾಗಿದೆ. ಒಂದೇ ಒಂದು ಫೋಟೋ ಕೂಡ ಇಲ್ಲ.

ಯಾರು ಡಿಲೀಟ್ ಮಾಡಿದ್ದು.?

ಅಭಿಮಾನಿಗಳು ಈ ಫೋಟೋಗಳನ್ನ ಡಿಲೀಟ್ ಮಾಡಿ ಎಂದು ಎಷ್ಟೇ ಕಾಮೆಂಟ್ ಮಾಡಿದ್ರು ಪವಿತ್ರ ಗೌಡ ಅವರು ಈ ಫೋಟೋಗಳನ್ನ ಡಿಲೀಟ್ ಮಾಡಿರಲಿಲ್ಲ. ಆದ್ರೀಗ, ದಿಢೀರ್ ಅಂತ ಎಲ್ಲ ಫೋಟೋಗಳು ಡಿಲೀಟ್ ಆಗಿದೆ. ಹೀಗಾಗಿ, ಈ ಫೋಟೋಗಳನ್ನ ಈಗ್ಯಾರು ಡಿಲೀಟ್ ಮಾಡಿದ್ರು.? ಯಾಕೆ ಡಿಲೀಟ್ ಮಾಡಿದ್ರು ಎಂಬ ಅನುಮಾನ ಕಾಡುತ್ತಿದೆ.

ಪತಿ ದರ್ಶನ್ ಗೆ ವಿಜಯಲಕ್ಷ್ಮಿ ಕೊಟ್ರು ದೊಡ್ಡ ಸರ್ಪ್ರೈಸ್

ಕೊನೆಯ ಫೋಟೋ ಇದೇ

ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬವಿತ್ತು. ಆ ದಿನ ಪವಿತ್ರ ಗೌಡ ಅವರು ದರ್ಶನ್ ಕುಟುಂಬ ಜೊತೆಯಿರುವ ಫೋಟೋವನ್ನ ಕೊನೆಯದಾಗಿ ಪೋಸ್ಟ್ ಮಾಡಿದ್ದರು. ಈಗ ಆ ಫೋಟೋವೂ ಇಲ್ಲದಂತಾಗಿದೆ.

ದರ್ಶನ್ ಮತ್ತು ವಿಜಯಲಕ್ಷ್ಮಿ ಚೆನ್ನಾಗಿದ್ದಾರೆ

ಪವಿತ್ರ ಗೌಡ ಅವರ ಫೋಟೋಗಳ ಭರಾಟೆಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ ಚೆನ್ನಾಗಿಯೇ ಇದ್ದಾರೆ ಎಂಬ ಸುದ್ದಿಯೂ ಇದೆ. ವಿಜಯಲಕ್ಷ್ಮಿ ಅವರು ತಮ್ಮ ಕೈಯ ಮೇಲೆ ದರ್ಶನ್ ಅವರ ಹೆಸರನ್ನ ಟ್ಯಾಟೂ ಹಾಕಿಸಿಕೊಂಡಿದ್ದರು.

'ಕುರುಕ್ಷೇತ್ರ' ಸೆಟ್ ನಲ್ಲಿ 'ಪವಿತ್ರ' ದರ್ಶನ ಫೋಟೋ ಲೀಕ್: ಮುನಿರತ್ನ ಆಕ್ರೋಶ

English summary
Kannada actress Pavitra gowda has deletes challenging star Darshan's Photos in her facebook, twitter and all social media pages.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada