ಸೇಮ್ ಸೀರೆಯಲ್ಲಿ ಪವಿತ್ರಾ, ವಿಜಯಲಕ್ಷ್ಮಿ ದರ್ಶನ್; ಯಾರು ಯಾರನ್ನ ಫಾಲೋ ಮಾಡ್ತಿದ್ದಾರೆ?
10 ವರ್ಷಗಳಿಂದ ನಾನು ದರ್ಶ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದೀನಿ ಎಂದು ಪವಿತ್ರಾ ಗೌಡ ಹೇಳಿದ್ದು ಗೊತ್ತೇಯಿದೆ. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ದರ್ಶನ್ ಸಿಕ್ಕಾಪಟ್ಟೆ ಗರಂ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ನಡೆದಿತ್ತು. ಪತ್ನಿಗೆ ದರ್ಶನ್ ಏನಾದರೂ ಕೊಡಿಸಿದರೆ ಅಂಥದ್ದೇ ನನಗೂ ಬೇಕು ಎಂದು ಪವಿತ್ರಾ ಗೌಡ ಪಟ್ಟು ಹಿಡಿಯುತ್ತಿದ್ದರಂತೆ.
ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಜೈಲು ಸೇರಿದ್ದರು. ಪತ್ನಿ ದರ್ಶನ್ ಐಷಾರಾಮಿ ಕಾರ್ ಉಡುಗೊರೆಯಾಗಿ ನೀಡಿದ್ದರು. ಸೇಮ್ ಅದೇ ತರಹದ ಕಾರ್ ಬೇಕು ಎಂದು ಪವಿತ್ರಾ ಗೌಡ ಕೂಡ ಪಟ್ಟು ಹಿಡಿದಿದ್ದರು ಎನ್ನುವ ಮಾತುಗಳು ಕೇಳಿ ಬಂದಿತ್ತು. ವಿಜಯಲಕ್ಷ್ಮಿ ಅವರನ್ನು ಪವಿತ್ರಾ ಗೌಡ ಫಾಲೋ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು.

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳೆಲ್ಲ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿ ಆಗುವ ಸುಳಿವು ನೀಡಿದ್ದಾರೆ. ಇದೆಲ್ಲದರ ನಡುವೆ ಮತ್ತೆ ಆಪ್ತರ ಸಮಾರಂಭಗಳಲ್ಲಿ ಭಾಗಿ ಆಗಲು ಆರಂಭಿಸಿದ್ದಾರೆ.
ದರ್ಶನ್ ಜೈಲಿನಿಂದ ಬಿಡುಗಡೆ ಆಗಿ 3 ತಿಂಗಳು ಕಳೆದಿದೆ. ದೇವಸ್ಥಾನ, ಆಸ್ಪತ್ರೆಗೆ ಬಂದಾಗ ಬಿಟ್ಟರೆ ಬೇರೆ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಜೊತೆ ದರ್ಶನ್ ಬಂದಿದ್ದರು. ಬೆನ್ನು ನೋವಿನ ನಡುವೆಯೂ ನಗುತ್ತಲೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ನೀಲಿ ಬಣ್ಣದ ಸೀರೆ ಉಟ್ಟು ವಿಜಯಲಕ್ಷ್ಮಿ ದರ್ಶನ್ ಕಂಗೊಳಿಸಿದ್ದರು.
ಸದ್ಯ ಅದೇ ಸೀರೆಯಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅರೇ ಸೇಮ್ ಇದೇ ತರಹದ ನೀಲಿ ಬಣ್ಣದ ಸೀರೆಯಲ್ಲಿ ಇತ್ತೀಚೆಗೆ ಪವಿತ್ರಾ ಗೌಡ ಕೂಡ ಮಿಂಚಿದ್ದರು ಅಲ್ವಾ? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದು ಕಾಕತಾಳೀಯವೋ ಏನೋ 3 ದಿನಗಳ ಅಂತರದಲ್ಲಿ ಇಬ್ಬರು ಒಂದೇ ತರಹದ ಸೀರೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನ ಫ್ಯಾಷನ್ ಬ್ಯೂಟಿಕ್ ಒಡತಿ. ಕೆಲ ನಟಿಯರು ಕೂಡ ಆ ಬ್ಯೂಟಿಕ್ ಮಾಡೆಲ್‌ಗಳಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಹೊಸದಾಗಿ ಸೀರೆಗಳ ಕಲೆಕ್ಷನ್ ಬಂದಿರುವ ಬಗ್ಗೆ ಪವಿತ್ರಾ ಗೌಡ ಮಾಹಿತಿ ನೀಡಿದ್ದರು. ಅದಕ್ಕಾಗಿ ಹೀಗೆ ಕಡು ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದರು.
ಪತಿ ದರ್ಶನ್ ಜೈಲು ಸೇರಿದಾಗ ಕೆಲ ದಿನಗಳ ಕಾಲ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಡೀ ಆಕ್ಟಿವೇಟ್ ಮಾಡಿದ್ದರು. ಬಳಿಕ ಮತ್ತೆ ಆಕ್ಟೀವ್ ಮಾಡಿದ್ದರು. ಆದರೆ ಯಾವುದೇ ಪೋಸ್ಟ್ ಮಾಡುತ್ತಿರಲಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಮೊದಲಿನಂತೆ ಫೋಟೊ, ವೀಡಿಯೋ ಹಂಚಿಕೊಳ್ಳಲು ಆರಂಭಿಸಿದ್ದಾರೆ. ಪವಿತ್ರಾ ಗೌಡ ಕೂಡ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಕುಂಭಮೇಳದಲ್ಲಿ ಪವಿತ್ರಸ್ನಾನ ಮಾಡಿದ್ದು ಕಾಶಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.


Click it and Unblock the Notifications











