ಪವಿತ್ರಾ ಜೊತೆ 'ಕಬಿನಿ'ಯಲ್ಲಿ ದರ್ಶನ್ ಕಾಲಹರಣ ? ವಿಜಯಲಕ್ಷ್ಮೀ ಆಕ್ರೋಶದ ಬೆನ್ನಲ್ಲಿ 'ಫೋಟೋ'ಸ್ ಹೇಳಿದ ಕಥೆ ಏನು..?
ನಿಜಾ .. ಸಂಸಾರ ಅಂದ ಮೇಲೆ ಅಲ್ಲಿ ಸರಸ - ವಿರಸ ಇದ್ದೇ ಇರುತ್ತೆ. ಯಾಕೆಂದರೆ ಇವೆರಡು ದಾಂಪತ್ಯ ಜೀವನದ ಒಂದೇ ನಾಣ್ಯದ ಎರಡು ಮುಖಗಳು. ಈ ಎರಡು ಮುಖಗಳ ಜೊತೆ ದರ್ಶನ್ ಹಾಗೂ ಅವರ ಪತ್ನಿ ವಿಜಯ ಲಕ್ಷ್ಮೀ ಸಂಸಾರದ ತೇರನ್ನ ಎಳಿಯುತ್ತಾನೇ ಇಲ್ಲಿಯವರೆಗೆ ಬಂದಿದ್ದಾರೆ. ಇದೆಲ್ಲವೂ ಎಲ್ಲರಿಗೆ ಗೊತ್ತಿರುವಂಥಹದ್ದೇ. ಯಾಕೆಂದರೆ ಕಾಲ.. ಕಾಲಕ್ಕೆ.. ಇಬ್ಬರ ನಡುವಿನ ಮನಸ್ತಾಪ ಭುಗಿಲೇದ್ದ ಉದಾಹರಣೆ ಇದೆ. ಆ ನಂತರ ಮತ್ತೆ ಜೊತೆಯಾಗಿ ಇಬ್ಬರು ಕಾಣಿಸಿಕೊಂಡಿದ್ದು ಇದೆ. ಆದರೆ.. ಯಾವಾಗ ನಾಲ್ಕು ಗೋಡೆಯ ನಡುವೆ ಇರಬೇಕಾದ ವ್ಯೆಯಕ್ತಿಕ ವಿಚಾರ ಬೀದಿಗೆ ಬಂದು ಸಾರ್ವಜನಿಕರ ಬಾಯಿಗೆ ಸೇರುತ್ತದೋ ಆಗ ಚಿಕ್ಕ ಚಿಕ್ಕ ವಿಚಾರ ದೊಡ್ಡದಾಗಿ ಬಿಡುತ್ತೆ. ದರ್ಶನ್ ಹಾಗೂ ವಿಜಯ ಲಕ್ಷ್ಮೀ ವಿಚಾರದಲ್ಲಿ ಇದು ಮೇಲಿಂದ ಮೇಲೆ ಆಗ್ತಾನೇ ಬಂದಿದೆ. ಈಗ ಮತ್ತೊಮ್ಮೆ ಆಗಿದೆ.
ನಿಮಗೆ ಗೊತ್ತು.. ಇಂದು ಬೆಳ್ಳಿಗ್ಗೆಯಿಂದ ಎಲ್ಲೆಡೆ ದರ್ಶನ್ - ವಿಜಯ ಲಕ್ಷ್ಮೀ ಹಾಗೂ ಪವಿತ್ರ ಗೌಡ ಕುರಿತ ವಿಚಾರ ಚರ್ಚೆಯಾಗ್ತಿದೆ. ಇದೆಲ್ಲದಕ್ಕೂ ಕಾರಣ ಏನು..? ಕಾಟೇರ ಸಂಭ್ರಮದಲ್ಲಿ ಈ ಕ್ಯಾತೆ ಯಾಕೆ..? ಹೀಗೆ ಅನೇಕ ಪ್ರಶ್ನೆಗಳು ಅನೇಕರ ತಲೆಯಲ್ಲಿ ಗಿರಕಿ ಹೊಡೆಯುತ್ತಿವೆ. ಈ ಪ್ರಶ್ನೆಗಳಿಗೆಲ್ಲ ದರ್ಶನ್ ಹಾಗೂ ಅವರ ಪತ್ನಿ ವಿಜಯ ಲಕ್ಷ್ಮೀ ಮತ್ತು ಪವಿತ್ರ ಗೌಡ ಅವರೇ ಸ್ಪಷ್ಟವಾದ ಉತ್ತರ ಕೊಡಬೇಕಾದರೂ, ಸದ್ಯಕ್ಕೆ ಇದೆಲ್ಲದಕ್ಕೂ ಕಾರಣ ಕಬಿನಿ ಅನ್ನುವ ಮಾತು ರಾಜರಾಜೇಶ್ವರಿ ನಗರದ ಸುತ್ತ ಮುತ್ತ ಕೇಳಿ ಬರ್ತಿದೆ.

ಹೌದು. ನಿನ್ನೆ ರಾತ್ರಿ ವಿಜಯ ಲಕ್ಷ್ಮೀ ಅವರು 'ನಮ್ಮ ಸಂಸಾರ.. ಆನಂದ ಸಾಗರ' ಎಂಬ ಅರ್ಥದಲ್ಲಿ ಫೋಟೋ ಹಂಚಿಕೊಂಡಿದ್ದು ಆ ನಂತರ ನಮ್ಮ 'ಪವಿತ್ರ' ಸಂಬಂಧಕ್ಕೆ ಹತ್ತು ವರುಷ ಎಂದು ಪವಿತ್ರ ಗೌಡ ಹರುಷ ವ್ಯಕ್ತಪಡಿಸಿದ್ದು ನಿಮಗೆ ಈಗಾಗಲೇ ಗೊತ್ತೇ ಇರಬೇಕು. ಆದರೆ.. ಸಂಸಾರದಲ್ಲಿನ ಅಸಹನೆ..ಅಸಮಾಧಾನ.. ಸ್ಫೋಟಗೊಳ್ಳುವ ಮುನ್ನ, ದರ್ಶನ್ ಎಲ್ಲಿದ್ದರು..? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಈಗ ಆಗ್ತಿದೆ. ಇದಕ್ಕೆ ಪುರಾವೆ ಎಂಬಂತೆ ದರ್ಶನ್ ಪವಿತ್ರ ಗೌಡ ಜೊತೆ ನಿನ್ನೆ ಕಬಿನಿಯಲ್ಲಿದ್ದರು ಅನ್ನುವ ಮಾತು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದೆ.
ಸದ್ಯಕ್ಕೆ ಅಂತೆ-ಕಂತೆಯ ಸಂತೆಯಲ್ಲಿ, ಈ 'ಸಂಸಾರ ಸಮರ' ಆರಂಭಕ್ಕೂ ಮುನ್ನ ದರ್ಶನ್ - ಪವಿತ್ರ ಗೌಡ ಹಾಗೂ ಅವರ ಮಗಳ ಜೊತೆ ಪ್ರಕೃತಿ ಪ್ರಿಯರಿಗೆ ಖುಷಿ ಕೊಡುವ ತಾಣ ಕಬಿನಿಯಲ್ಲಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಪವಿತ್ರ ಗೌಡ ಅವರ ಇನ್ಸ್ಟಾ ಗ್ರಾಂನ ಸ್ಟೋರಿ ವೈರಲ್ ಆಗಿದೆ. ವೈರಲ್ ಆದ ಫೋಟೋದಲ್ಲಿ ಪವಿತ್ರ ಗೌಡ ಕ್ಯಾಮರಾ ಹಿಡಿದು ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡುವುದನ್ನ ನೀವು ಗಮನಿಸಬಹುದು. 'Caught her today Kabini Forest Karnataka' ಎಂದು ದಿನಾಂಕ ಹಾಗೂ ದಿನದ ಸಮೇತ ಪವಿತ್ರ ಗೌಡ ಅವರು ಬರೆದುಕೊಂಡಿದ್ದನ್ನೂ ಕೂಡ ನೋಡಬಹುದು. ಇನ್ನೂ ದರ್ಶನ್ ಪ್ರಾಣಿ ಪ್ರೀತಿ ನಿಮಗೆ ಗೊತ್ತು.

ಈ ಫೋಟೋಗಳನ್ನ ವಿಜಯ ಲಕ್ಷ್ಮೀ ನೋಡಿದ್ದರಾ ಗೊತ್ತಿಲ್ಲ. ಆದರೆ ಈ ಕಬಿನಿಯ ಕಥೆಯನ್ನ ನೋಡಿ..ಕೇಳಿಯೇ ವಿಜಯ ಲಕ್ಷ್ಮೀ ಕೆಂಡಾಮಂಡಲವಾಗಿದ್ದಾರೆ ಎಂಬ ಮಾತು ಕೂಡ ಇದೇ ಸಮಯದಲ್ಲಿ, ವ್ಯಾಪಕವಾಗಿ ಕೇಳಿ ಬರ್ತಿದೆ. ಈ ಕಾರಣಕ್ಕೆ ನಿನ್ನೆ ವಿಜಯಲಕ್ಷ್ಮೀ ದರ್ಶನ್ ಹಾಗೂ ಪುತ್ರನ ಜೊತೆ ಇರುವ ಫೋಟೋ ಹಂಚಿಕೊಂಡಿದ್ದರು ಎಂಬ ಅಭಿಪ್ರಾಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ವಿಜಯ ಲಕ್ಷ್ಮೀ ಹಂಚಿಕೊಂಡ ಫೋಟೋಗೆ ಪ್ರತ್ಯುತ್ತರ ನೀಡಲೆಂದೆ ಪವಿತ್ರ ಗೌಡ ವಿಡಿಯೋ ಹಂಚಿಕೊಂಡಿದ್ದು ಎಂಬ ಮಾತು ಕೂಡ ಕೇಳಿ ಬರ್ತಿದೆ.
ಒಟ್ಟಿನಲ್ಲಿ ದರ್ಶನ್ ಅವರ ಸಾಂಸಾರಿಕ ಜೀವನ ಇನ್ನೊಮ್ಮೆ ಚರ್ಚೆಗೀಡಾಗಿದೆ. ಇನ್ನೇನಿದ್ದರೂ ಈ ತ್ರಿಕೋನ ಪ್ರೇಮ ಕಥೆಯ ಕ್ಲೈಮ್ಯಾಕ್ಸ್ ಮೇಲೆ ಎಲ್ಲರಿಗೂ ಕುತೂಹಲ ಇದೆ.


Click it and Unblock the Notifications











