Pavitra Lokesh: ಈ ವರ್ಷ ಪವಿತ್ರಾ ಲೋಕೇಶ್‌ಗೆ Phd ಸಿಗಲ್ವಾ? ಕಹಾನಿಯಲ್ಲಿ ಏನಿದು ಟ್ವಿಸ್ಟ್?

ತಮ್ಮ ವೈಯಕ್ತಿಕ ವಿಚಾರಗಳಿಂದ ಇತ್ತೀಚೆಗೆ ಪವಿತ್ರಾ ಲೋಕೇಶ್ ಭಾರೀ ಸುದ್ದಿ ಆಗಿದ್ದರು. ಸದ್ಯ ತೆಲುಗು ನಟ ನರೇಶ್ ಜೊತೆ ಆಕೆ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇಷ್ಟೆಲ್ಲಾ ವಿವಾದದ ನಡುವೆಯೂ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು ಪವಿತ್ರಾ ಉತ್ತೀರ್ಣರಾಗಿದ್ದಾರೆ.

ಪವಿತ್ರಾ ಲೋಕೇಶ್ ಕನ್ನಡದಲ್ಲಿ ಎಂಎ ಪದವಿ ಪಡೆದಿದ್ದಾರೆ. ಇತ್ತೀಚೆಗೆ ಹಂಪಿ ವಿಶ್ವ ವಿದ್ಯಾಲಯ ನಡೆಸಿದ ಪಿಹೆಚ್‌ಡಿ ಪ್ರವೇಶ ಪ್ರವೇಶ ಪರೀಕ್ಷೆಯಲ್ಲಿ ಪರೀಕ್ಷೆ ಬರೆದಿದ್ದರು. ಬೆಳಗಾಗಿ ವಿಸ್ತರಣಾ ಕೇಂದ್ರದಲ್ಲಿ ಪಿಹೆಚ್‌ಡಿ ಸಂಶೋಧನೆಗಾಗಿ ಅವರು ಆಸೆ ಪಟ್ಟಿದ್ದರು. ಒಟ್ಟು 981 ಅಭ್ಯರ್ಥಿಗಳದಲ್ಲಿ 259 ಮಂದಿ ಉತ್ತೀರ್ಣರಾಗಿದ್ದರು. ಆ ಪಟ್ಟಿಯಲ್ಲಿ ಪವಿತ್ರಾ ಲೋಕೇಶ್ ಹೆಸರು ಇದೆ. ಮೇ 10ರಂದು ವಿವಿಯ ನುಡಿಕಟ್ಟಡದಲ್ಲಿ ಪವಿತ್ರಾ ಪ್ರವೇಶ ಪರೀಕ್ಷೆ ಬರೆದರು. ಈ ವೇಳೆ ನರೇಶ್ ಕೂಡ ಜೊತೆಗೆ ಕಾಣಿಸಿಕೊಂಡಿದ್ದರು.

Pavitra Lokesh Phd Entrance Exam Passed, but her name missed in merit list

ಬಹಳ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ಪವಿತ್ರಾ ಲೋಕೇಶ್ ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. ಆದರೂ ಓದುವ ಆಸೆ ಕಮ್ಮಿ ಆಗಿಲ್ಲ. ಸಿನಿಮಾಗಳಲ್ಲಿ ನಟಿಸುವ ಜೊತೆ ಜೊತೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು. ಇದೀಗ ಪಿಹೆಚ್‌ಡಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆಯುವ ಆಸೆಯಲ್ಲಿದ್ದರು. ಆದರೆ ಸದ್ಯಕ್ಕೆ ಅದು ಈಡೇರುವುದು ಅನುಮಾನ ಎನ್ನಲಾಗ್ತಿದೆ.

ಪವಿತ್ರಾ ಲೋಕೇಶ್ ಪಿಹೆಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಮೆರಿಟ್ ಪಟ್ಟಿಯಲ್ಲಿ ಆಕೆಯ ಹೆಸರಿಲ್ಲ. ಇನ್ನು ಜೇಷ್ಠತಾ ಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಯಲ್ಲೂ ಪವಿತ್ರಾ ಹೆಸರಿಲ್ಲ ಎಂದು ಕನ್ನಡ ವಿವಿ ಕುಲಸಚಿವ ಡಾ.ಸುಬ್ಬಣ್ಣ ರೈ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಆಕೆ ಪಿಹೆಚ್‌ಡಿ ಪಡೆಯುವುದು ಬಹುತೇಕ ಅನುಮಾನ ಎಂದು ಹೇಳಿದ್ದಾರೆ. ಉತ್ತೀರ್ಣರಾದ ಎಲ್ಲರಿಗೂ ಪಿಹೆಚ್‌ಡಿ ಸಂಶೋಧನೆ ಕೈಗೊಳ್ಳಲು ಅವಕಾಶ ಸಿಗುವುದಿಲ್ಲ, ಎಂದು ಹೇಳಿದ್ದಾರೆ.

1995ರಲ್ಲಿ 'ಮಿಸ್ಟರ್ ಅಭಿಷೇಕ್' ಸಿನಿಮಾದಲ್ಲಿ ಮೊದಲ ಬಾರಿ ಪವಿತ್ರಾ ಲೋಕೇಶ್ ಬಣ್ಣ ಹಚ್ಚಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಾಯಕಿ ಮಿಂಚಿದರು. ನಾಯಕಿಯಾಗಿ ಅವಕಾಶಗಳು ಕಮ್ಮಿ ಆದಾಗ ಪೋಷಕ ಪಾತ್ರಗಳಲ್ಲಿ ನಟಿಸಲು ಮುಂದಾದರು. ಕಿರುತೆರೆ ಕಾರ್ಯಕ್ರಮಗಳಲ್ಲೂ ಬಣ್ಣ ಹಚ್ಚಿದರು. ಕನ್ನಡ ಬಳಿಕ ತೆಲುಗಿನಲ್ಲಿ ಪೋಷಕ ನಟಿಯಾಗಿ ಸಕ್ಸಸ್ ಕಂಡರು.

ಸದ್ಯ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಗುರ್ತಿಸಿಕೊಂಡಿರುವ ಪವಿತ್ರಾ ಲೋಕೇಶ್ ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದಾರೆ. ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ನಟ ನರೇಶ್ ಜೊತೆ ಸಹಜೀವನ ನಡೆಸುತ್ತಿರುವ ಪವಿತ್ರಾ ಇತ್ತೀಚೆಗೆ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ನರೇಶ್ ತಮ್ಮದೇ ನಿಜ ಜೀವನದ ಕತೆಯನ್ನು ತೆರೆಗೆ ತಂದಿದ್ದರು. ತೆಲುಗು ಹಾಗೂ ಕನ್ನಡದಲ್ಲಿ ಬಿಡುಗಡೆಯಾದ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.

ಈಗಾಗಲೇ ನರೇಶ್ ಇಬ್ಬರಿಗೆ ಡಿವೋರ್ಸ್ ನೀಡಿ ರಮ್ಯಾ ರಘುಪತಿ ಎಂಬುವವರನ್ನು ಮದುವೆ ಆಗಿದ್ದಾರೆ. ಆಕೆಯಿಂದಲೂ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಡಿವೋರ್ಸ್ ಸಿಕ್ಕರೆ ಸದ್ಯ ಸಹ ಜೀವನ ನಡೆಸುತ್ತಿರುವ ನರೇಶ್ ಹಾಗು ಪವಿತ್ರಾ ಲೋಕೇಶ್ ಮದುವೆ ಆಗುವ ಸಾಧ್ಯತೆಯಿದೆ. ಪವಿತ್ರಾ ನನ್ನ ಹಾಗೂ ನರೇಶ್ ದಾಂಪತ್ಯದಲ್ಲಿ ಹುಳಿ ಹಿಂಡಿದ್ದಾಳೆ ಎಂದು ರಮ್ಯಾ ರಘುಪತಿ ಆರೋಪಿಸಿದ್ದರು. ಬಳಿಕ ನರೇಶ್ ಹಾಗೂ ಪವಿತ್ರಾ ಸಹ ರಮ್ಯಾ ವಿರುದ್ಧ ಆರೋಪಗಳನ್ನು ಮಾಡಿದ್ದರು. ಆಕೆ ಕೂಡ ತಿರುಗೇಟು ನೀಡಿದ್ದರು.

More from Filmibeat

English summary
Pavitra Lokesh missed PHD This year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X