ಮಾಜಿ ಪತ್ನಿಯ ಮರುಮದುವೆ ಬಗ್ಗೆ ಪವನ್ ಕಲ್ಯಾಣ್ ಟ್ವೀಟ್
'ಬ್ರದಿ' ಸಿನಿಮಾದ ಮೂಲಕ ಪರಿಚಯವಾದ ಪವನ್ ಕಲ್ಯಾಣ್ ಮತ್ತು ನಟಿ ರೇಣು ದೇಸಾಯಿ ನಂತರ ಪ್ರೀತಿ, ಮದುವೆ ಎಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಎಲ್ಲವು ಚೆನ್ನಾಗಿಯೇ ನಡೆಯುತ್ತಿತ್ತು ಎನ್ನುವಾಗ ಪವನ್ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಿ ಇಬ್ಬರು ಬೇರೆ ಬೇರೆಯಾದರು.
ನಂತರ ಪವನ್ ಕಲ್ಯಾಣ್ ಬೇರೆ ಮದುವೆ ಆದರು. ಈಗ ಸಂತೋಷದಿಂದ ಸುಖವಾಗಿ ಇದ್ದಾರೆ. ಆದ್ರೆ, ಸುಮಾರು ಆರು ವರ್ಷಗಳಿಂದ ಒಂಟಿ ಜೀವನ ಮಾಡುತ್ತಿದ್ದ ರೇಣು ಈಗ ಮೊತ್ತೊಬ್ಬರ ಜೊತೆ ಮರು ವಿವಾಹವಾಗುತ್ತಿದ್ದಾರೆ. ಇದನ್ನ ಖಂಡಿಸಿ ಪವರ್ ಸ್ಟಾರ್ ಅಭಿಮಾನಿಗಳು ರೇಣು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್
ಆದ್ರೆ, ಪವನ್ ಕಲ್ಯಾಣ್ ಮಾತ್ರ ಮತ್ತೊಂದು ಹೊಸ ಜೀವನವನ್ನ ಆರಂಭಿಸಲಿರುವ ಮಾಜಿ ಪತ್ನಿಗೆ ಶುಭ ಕೋರಿದ್ದಾರೆ. ಅಷ್ಟಕ್ಕೂ, ಪವನ್ ಕಲ್ಯಾಣ್ ಮಾಡಿದ ಟ್ವೀಟ್ ನಲ್ಲಿ ಏನಿದೆ.? ಮಾಜಿ ಪತ್ನಿಗೆ ಏನೆಂದು ಶುಭಕೋರಿದ್ದಾರೆ. ಮುಂದೆ ಓದಿ....

ರೇಣುಗೆ ಶುಭಕೋರಿದ ಪವನ್
''ರೇಣು ಅವರೇ ಹೊಸ ಸಂತೋಷಕ್ಕೆ ಕಾಲಿಡುತ್ತಿರುವ ನಿಮಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ತಮಗೆ ಆರೋಗ್ಯ, ಶಾಂತಿ ಮತ್ತು ಸಮೃದ್ದಿ ದೊರೆಯಲಿ ಎಂದು ಬಯಸುತ್ತೇನೆ'' ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

'ಬದ್ರಿ'ಯಲ್ಲಿ ಮೊಳಗಿದ ಪ್ರೀತಿ
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಬದ್ರಿ' ಚಿತ್ರದಲ್ಲಿ ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ ಹೀರೋ ಹೀರೋಯಿನ್ ಆಗಿ ನಟಿಸಿದ್ದರು. ಇಲ್ಲಿಂದ ಪರಿಚಯವಾದ ಇವರಿಬ್ಬರ ಸ್ನೇಹ ಪ್ರೀತಿಯಾಗಿ ತಿರುಗಿತು. ನಂತರ 'ಜಾನಿ' ಚಿತ್ರದಲ್ಲೂ ಇಬ್ಬರು ಸ್ಕ್ರೀನ್ ಶೇರ್ ಮಾಡಿದ್ದರು.

ಸಹಜೀವನ ನಡೆಸಿದ್ದ ಜೋಡಿ
ಪರಸ್ಪರ ಪ್ರೀತಿಸುತ್ತಿದ್ದ ಪವನ್ ಕಲ್ಯಾಣ್ ಆಗಗಾಲೇ ಒಂದು ಮದುವೆ ಆಗಿದ್ದರೂ, ನಟಿ ರೇಣು ದೇಸಾಯಿ ಜೊತೆಯಲ್ಲಿ ಸಹಜೀವನ ನಡೆಸಿದರು. ನಂತರ ಮದುವೆ ಆದರು. ಈ ಮಧ್ಯೆ 2012ರಲ್ಲಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದುಕೊಂಡರು.

ಪುಣೆಯಲ್ಲಿರುವ ರೇಣು
ಮೂಲತಃ ಗುಜರಾತಿಯವರಾಗಿದ್ದ ರೇಣು ಸದ್ಯ ಪುಣೆಯಲ್ಲಿ ನೆಲೆಸಿದ್ದಾರೆ. ಈಗ ಮದುವೆಯಾಗುತ್ತಿರುವ 'ವರ' ಯಾರೆಂದು ಬಹಿರಂಗಪಡಸಿಲ್ಲ. ಆದ್ರೆ, ಸಿನಿಮಾ ಇಂಡಸ್ಟ್ರಿಯವರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ, ಮದುವೆ ಯಾವಾಗ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದ್ರೆ, ನಿಶ್ಚಿತಾರ್ಥ ಮಾಡಿಕೊಂಡು, ಉಂಗುರ ಬದಲಿಸಿಕೊಂಡಿದ್ದಾರೆ.


Click it and Unblock the Notifications











