ಎದೆಯ ಭಾಗದಲ್ಲಿ ಪವನ್ ಕಲ್ಯಾಣ್ ಹೆಸರು ಟ್ಯಾಟೂ ಹಾಕಿಸಿಕೊಂಡ ನಟಿ

ಸಿನಿಮಾ ನಟರಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅದರಲ್ಲೂ ಸ್ಟಾರ್ ನಟರ ಮಾತುಗಳು ಅವರಿಗೆ ವೇದವಾಕ್ಯ. ತಂದೆ-ತಾಯಿ, ಮನೆಯವರನ್ನ ಗೌರವಿಸುತ್ತಾರೋ ಇಲ್ಲವೋ ನೆಚ್ಚಿನ ಸ್ಟಾರ್ ನಟರನ್ನ ಮಾತ್ರ ದೇವರ ರೀತಿಯಲ್ಲಿ ಕಾಣುವ ಅಭಿಮಾನಿಗಳಿದ್ದಾರೆ.

ನೆಚ್ಚಿನ ನಟ, ನಟಿಯರ ಹೆಸರನ್ನ ಅವರ ಚಿತ್ರಗಳ ಹೆಸರನ್ನ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಇದೆ. ಸಾಮಾನ್ಯವಾಗಿ ಪುರುಷ ಅಭಿಮಾನಿಗಳು ಮೈಮೇಲೆ, ಕೈ ಮೇಲೆ, ಎದೆಯ ಮೇಲೆ, ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಉದಾಹರಣೆ ಇದೆ.

ಇಲ್ಲೊಬ್ಬ ಮಹಿಳಾ ಅಭಿಮಾನಿ ತನ್ನ ನೆಚ್ಚಿನ ನಟ ಹೆಸರನ್ನ ಎದೆಯ ಪಕ್ಕದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ಹಳೆಯ ಸುದ್ದಿ ಆಗಿದ್ದರೂ ಈಗ ಈ ಫೋಟೋ ವೈರಲ್ ಆಗಿದೆ. ಅದಕ್ಕೆ ಕಾರಣನೂ ಇದೆ. ಅಷ್ಟಕ್ಕೂ, ಯಾರು ಆ ನಟ? ಯಾರು ಆ ಮಹಿಳಾ ಅಭಿಮಾನಿ? ಮುಂದೆ ಓದಿ......

ಎದೆಯ ಪಕ್ಕದಲ್ಲಿ ಪವನ್ ಕಲ್ಯಾಣ್ ಹೆಸರು

ಎದೆಯ ಪಕ್ಕದಲ್ಲಿ ಪವನ್ ಕಲ್ಯಾಣ್ ಹೆಸರು

ಸೋಶಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ನಟಿ ಆಶು ರೆಡ್ಡಿ, ತನ್ನ ನೆಚ್ಚಿನ ನಟ ಪವನ್ ಕಲ್ಯಾಣ್ ಅವರ ಹೆಸರನ್ನ ಎದೆಯ ಭಾಗದಲ್ಲಿ (ಎದೆಯ ಪಕ್ಕದಲ್ಲಿ) ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಮನೆಗೆ ಬಂದ ಜೂನಿಯರ್ ಸಮಂತಾ

ಬಿಗ್ ಬಾಸ್ ಮನೆಗೆ ಬಂದ ಜೂನಿಯರ್ ಸಮಂತಾ

ಅಂದ್ಹಾಗೆ, ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಡಬ್ ಸ್ಮಾಶ್ ಮೂಲಕ ಫೇಮಸ್ ಆದ ಆಶು ರೆಡ್ಡಿ ಕೆಲವು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ನೋಡಲು ನಟಿ ಸಮಂತಾ ಅವರನ್ನೆ ಹೋಲುವ ಕಾರಣ, ಇಂಡಸ್ಟ್ರಿಯಲ್ಲಿ ಇವರನ್ನ ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ.

ಲವ್ ಫೆಲ್ಯೂರ್ ಹುಡುಗಿ

ಲವ್ ಫೆಲ್ಯೂರ್ ಹುಡುಗಿ

ಪ್ರಾಥಮಿಕ ಶಿಕ್ಷಣವನ್ನ ಭಾರತದಲ್ಲಿ ಮಾಡಿದ್ದ ಆಶು ರೆಡ್ಡಿ ಉನ್ನತ ಶಿಕ್ಷಣಕ್ಕಾಗಿ ಯುಎಸ್ ಗೆ ಹೋಗಿದ್ದರು. ವಿದ್ಯಾಭ್ಯಾಸ ಮುಗಿಸಿ ಅಲ್ಲೇ ಕೆಲಸ ಕೂಡ ಮಾಡುತ್ತಿದ್ದರು. ಆ ಮಧ್ಯೆ ಒಬ್ಬರ ಜೊತೆ ಪ್ರೀತಿಯಲ್ಲಿದ್ದ ಬಿದ್ದ ಆಶು ರೆಡ್ಡಿ ನಂತರ ಕೆಲವು ದಿನಗಳ ಬಳಿಕ ಬ್ರೇಕ್ ಅಪ್ ಮಾಡಿಕೊಂಡರು. ಲವ್ ಫೆಲ್ಯೂರ್ ಆದ ಬಳಿಕ ಮೂರು ವರ್ಷ ಡಿಪ್ರೆಶನ್ ಗೆ ಒಳಗಾಗಿದ್ದರು. ನಂತರ ಭಾರತಕ್ಕೆ ವಾಪಸ್ ಆದ ಆಶು ರೆಡ್ಡಿ ಮತ್ತೆ ಹೊಸ ಲೈಫ್ ಕಂಡುಕೊಂಡರು.

ಪವನ್ ಕಲ್ಯಾಣ್ ಜೊತೆ ಅಫೇರ್.!

ಪವನ್ ಕಲ್ಯಾಣ್ ಜೊತೆ ಅಫೇರ್.!

ಅಂದ್ಹಾಗೆ, ಆಶು ರೆಡ್ಡಿ ಅವರು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಹಾಗಾಗಿ, ಪವನ್ ಹೆಸರನ್ನ ತನ್ನ ಎದೆಯ ಭಾಗದಲ್ಲಿ ಟ್ಯಾಟೂ ಹಾಕಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡ ಮಾತ್ರಕ್ಕೆ ಪವನ್ ಕಲ್ಯಾಣ್ ಜೊತೆ ನನಗೆ ಅಫೇರ್ ಇದ್ಯಾ ಎಂದು ವಿವಾದದ ಸಂದರ್ಭವೊಂದರಲ್ಲಿ ನಿರ್ದೇಶಕ ಕತ್ತಿ ಮಹೇಶ್ ಅವರನ್ನ ಪ್ರಶ್ನಿಸಿದ್ದರು. ಇಷ್ಟೆಲ್ಲಾ ಹಿನ್ನಲೆ ಹೊಂದಿರುವ ಈ ನಟಿ ಈಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಹಾಗಾಗಿಯೇ ಹಳೆಯ ಫೋಟೋ ವೈರಲ್ ಆಗಿದೆ.

More from Filmibeat

English summary
Social media star Ashu reddy put Pawan Kalyan name tattoo on her body. this photo went to viral in internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X