For Quick Alerts
  ALLOW NOTIFICATIONS  
  For Daily Alerts

  ಮೈಕೊಡವಿಕೊಂಡು ಎದ್ದ ಪವನ್ ಕಲ್ಯಾಣ್, ಪಕ್ಷದ ಮುಖವಾಣಿಗೆ ಚಾಲನೆ

  By ಜೇಮ್ಸ್ ಮಾರ್ಟಿನ್
  |

  ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಈಗ ಎದ್ದು ಕುಳಿತಿದ್ದಾರೆ. ವಿಜಯವಾಡದ ಮಂಗಳಗಿರಿ ಕಚೇರಿಯಲ್ಲಿ ಪಕ್ಷದ ಹಿತೈಷಿಗಳು, ಕಾರ್ಯಕರ್ತರು, ಸೋತ ಅಭ್ಯರ್ಥಿಗಳನ್ನು ಕೂರಿಸಿಕೊಂಡು ಮೀಟಿಂಗ್ ಮಾಡಿದ್ದಾರೆ.

  'ನನಗೆ ಇದು ಸೋಲಲ್ಲ, ಇದು ಒಂದು ಅನುಭವ, ಜನರು ಕೊಟ್ಟ ಆದೇಶವನ್ನು, ಬೆಂಬಲವನ್ನು ಮುಕ್ತವಾಗಿ ಸ್ವೀಕರಿಸುತ್ತೇನೆ, ಶೇ 6.7 ಮತಗಳನ್ನು ಗಳಿಸಿರುವುದು ಕಡಿಮೆ ಸಾಧನೆಯಲ್ಲ' ಎಂದು ಪವನ್ ಹೇಳಿದ್ದಾರೆ.

  ವಿಧಾನಸಭೆ ಫಲಿತಾಂಶ: ತೆಲುಗು ನಟ ಪವನ್ ಕಲ್ಯಾಣ್ ಗೆ ಭಾರಿ ಹಿನ್ನಡೆ

  ಸಿಎಂ ಜಗನ್​ಮೋಹನ್​ರೆಡ್ಡಿ, ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ರಂತೆ ತಮ್ಮ ಪಕ್ಷಕ್ಕೂ ಒಂದು ಮುಖವಾಣಿ ಆಗತ್ಯವಿದೆ. ಈ ಮೂಲಕ ಪಕ್ಷದ ಚಿಂತನೆ, ಆಡಳಿತ ಪಕ್ಷದ ಹುಳುಕು, ಜನರ ಆಶೋತ್ತರಕ್ಕೆ ದನಿಯಾಗಬಹುದು ಎಂದು ಪವನ್ ನಿರ್ಧರಿಸಿದ್ದಾರೆ.

  ಚಿರಂಜೀವಿಗಿಂತ ಹೀನಾಯ ಸ್ಥಿತಿ ತಲುಪಿದ ಪವನ್ ಕಲ್ಯಾಣ್

  ಪಕ್ಷದ ಮುಖವಾಣಿಯಲ್ಲಿ ವಿದೇಶಿ ಆರ್ಥಿಕ ನೀತಿ, ರಾಜ್ಯದ ಅಭಿವೃದ್ದಿ, ಸರ್ಕಾರದ ಲೋಪದೋಷಗಳು ಎತ್ತಿ ತೋರಿಸಲಾಗುವುದು ಎಂದು ಜನಸೇನಾದ ಮೂಲಗಳು ಹೇಳಿವೆ.

  ಎರಡು ಕ್ಷೇತ್ರದಲ್ಲೂ ಸೋಲು ಕಂಡಿದ್ದ ಪವನ್ ಕಲ್ಯಾಣ್

  ಎರಡು ಕ್ಷೇತ್ರದಲ್ಲೂ ಸೋಲು ಕಂಡಿದ್ದ ಪವನ್ ಕಲ್ಯಾಣ್

  ಭಾರಿ ಜನ ಬೆಂಬಲದಿಂದ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಅವರು ಎರಡು ಕ್ಷೇತ್ರಗಳಲ್ಲೂ ಸೋಲು ಕಂಡಿದ್ದರು. ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ಒಂದೇ ಬಾರಿಗೆ ಚುನಾವಣೆ ನಡೆಸಲಾಗಿತ್ತು. ಗಜುವಾಕ ಹಾಗೂ ಭೀಮಾವರಂ ನಲ್ಲಿ ಸೋಲು ಕಂಡರು. ಜನಸೇನಾ ಪಕ್ಷದ ಇತರೆ ಅಭ್ಯರ್ಥಿಗಳ ಸ್ಥಿತಿಯೂ ಇದೇ ಆಗಿತ್ತು. ಒಬ್ಬ ಅಭ್ಯರ್ಥಿ ಮಾತ್ರ ಗೆಲುವು ಸಾಧಿಸಿದರು.

  ಕಿಂಗ್ ಮೇಕರ್ ಆಗುತ್ತಾರೆ ಎಂದು ಭಾವಿಸಲಾಗಿತ್ತು.

  ಕಿಂಗ್ ಮೇಕರ್ ಆಗುತ್ತಾರೆ ಎಂದು ಭಾವಿಸಲಾಗಿತ್ತು.

  ಜನಸೇನಾ ಪಕ್ಷದ ಪ್ರಣಾಳಿಕೆ, ಸಭೆ, ಸಮಾರಂಭಕ್ಕೆ ಸೇರುತ್ತಿದ್ದ ಜನಸಾಗರ ಕಂಡ ರಾಜಕೀಯ ವಿಶ್ಲೇಷಕರು, ಈ ಬಾರಿ ಪವನ್ ಕಲ್ಯಾಣ್ ಅವರು ಕಿಂಗ್ ಮೇಕರ್ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಕಿಂಗ್ ಆಗಲಿಲ್ಲ, ಕಿಂಗ್ ಮೇಕರ್ ಕೂಡಾ ಅಗಲಿಲ್ಲ.

  ಜನಸೇನಾ ಪಕ್ಷಕ್ಕೆ 1 ರಿಂದ 4 ಸ್ಥಾನಗಳು ಮಾತ್ರ ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು, ಶೇ 10ರಷ್ಟು ಮತ ಗಳಿಸಲಿದೆ ಎಂಬ ವರದಿ ಬಂದಿತ್ತು. ಅಂತಿಮ ಫಲಿತಾಂಶದಲ್ಲಿ 1 ಸ್ಥಾನ, ಶೇ 6.7ರಷ್ಟು ಮತಗಳಿಕೆ ಕಂಡಿದೆ. ಈಗಷ್ಟೇ ಎಂಟ್ರಿ ಕೊಟ್ಟಿರುವ ರಾಜಕೀಯ ಪಕ್ಷಕ್ಕೆ ಇದು ಬಹು ದೊಡ್ಡ ಹೆಜ್ಜೆ ಎನ್ನಬಹುದು.

  ಮುಂದಿನ 10 ವರ್ಷಕ್ಕೆ ಮಾಸ್ಟರ್ ಪ್ಲ್ಯಾನ್

  ಮುಂದಿನ 10 ವರ್ಷಕ್ಕೆ ಮಾಸ್ಟರ್ ಪ್ಲ್ಯಾನ್

  ಜನಸೇನಾ ಪಕ್ಷವನ್ನು ಬೆಳೆಸಲು ಮುಂದಿನ 10 ವರ್ಷಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ. ನಾವು ತಾಳ್ಮೆಯಿಂದ ಕಾಯಬೇಕು, ಅಧಿಕಾರ ಪಡೆಯಲು ಬಯಸಿದರೆ ಜನರ ಬೆಂಬಲ ಬೇಕು, ಇದು ದೊಡ್ಡ ಪಯಣ ಎಂದು ಪವನ್ ಹೇಳಿದ್ದಾರೆ. ಜನಸೇನಾ 140 ವಿಧಾನಸಭಾ ಕ್ಷೇತ್ರ ಹಾಗೂ 18 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಸೋಲು ಕಂಡಿದೆ

  ಮುಖವಾಣಿಯಲ್ಲಿ ಏನಿರಲಿದೆ?

  ಮುಖವಾಣಿಯಲ್ಲಿ ಏನಿರಲಿದೆ?

  ಪಕ್ಷದ ಮುಖವಾಣಿ ಪಾಕ್ಷಿಕ(15 ದಿನಗೊಮ್ಮೆ) ವಾಗಿರಲಿದ್ದು, ಪಕ್ಷದ ಪ್ರಣಾಳಿಕೆ, ಕಾರ್ಯತಂತ್ರ, ಸಲಹೆ ಸೂಚನೆ ಪಡೆಯಲು ಮುಂದಿನ ಯೋಜನೆ ಹಾಕಿಕೊಳ್ಳಲು, ಜನರೊಂದಿಗೆ ಬೆರೆಯಲು ಸಹಕಾರಿಯಾಗಿರುತ್ತದೆ. ಸೆಪ್ಟೆಂಬರ್ ಮೊದಲ ವಾರಕ್ಕೆ ಮೊದಲ ಪ್ರತಿ ಹೊರಬರಲಿದೆ. ಮುದ್ರಿತ ಹಾಗೂ ಇ ಮ್ಯಾಗಜೀನ್ ರೂಪದಲ್ಲೂ ಸಿಗಲಿದೆ. ಮ್ಯಾಗಜೀನ್ ನ ಸಂಪಾದಕೀಯ ಮಂಡಳಿಯಲ್ಲಿ ವಿವಿಧ ರಂಗ ತಜ್ಞರು ಕಾರ್ಯ ನಿರ್ವಹಿಸಲಿದ್ದಾರೆ.

  English summary
  After Jana Sena’s debacle in the elections power star and Jana Sena Party founder-president Pawan Kalyan is all set to launch a party mouth-piece.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X