»   » ಗಂಡು ಮಗುವಿಗೆ ಜನ್ಮ ನೀಡಿದ ನಟ ಪವನ್ ಕಲ್ಯಾಣ್ ಮೂರನೇ ಪತ್ನಿ

ಗಂಡು ಮಗುವಿಗೆ ಜನ್ಮ ನೀಡಿದ ನಟ ಪವನ್ ಕಲ್ಯಾಣ್ ಮೂರನೇ ಪತ್ನಿ

Posted By:
Subscribe to Filmibeat Kannada
Pawan Kalyan and wife Anna Lezhneva to be parents again | Filmibeat Kannada

ಟಾಲಿವುಡ್ ನಟ ಪವನ್ ಕಲ್ಯಾಣ್ ಮತ್ತೆ ತಂದೆ ಆಗಿದ್ದಾರೆ. ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ (Anna Lezhneva) ಇಂದು ಬೆಳ್ಳಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಗು ಹುಟ್ಟಿದ್ದು, ಅಮ್ಮ ಮಗು ಆರೋಗ್ಯವಾಗಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಿದ ಟಾಲಿವುಡ್ ನಟ ಪವನ್ ಕಲ್ಯಾಣ್

2011ರಲ್ಲಿ ಪವನ್ ಕಲ್ಯಾಣ್ ಅನ್ನಾ ಲೆಜ್ನೆವಾ ಜೊತೆ ವಿವಾಹವಾಗಿದ್ದರು. 'ತೀನ್ ಮಾರ್‌' ಚಿತ್ರದ ಶೂಟಿಂಗ್ ವೇಳೆ ಪರಿಚಯವಾದ ಅನ್ನಾ ಲೆಜ್ನೆವಾ ಅವರನ್ನು ಪವನ್‌ ಪ್ರೀತಿಸಿ ಮದುವೆಯಾಗಿದ್ದರು. ಅನ್ನಾ ಲೆಜ್ನೆವಾ ಮೂಲತಃ ರಷ್ಯಾದ ಬೆಡಗಿ. ಎರಡನೇ ಪತ್ನಿ ರೇಣು ದೇಸಾಯಿ ಅವರೊಂದಿಗಿನ ವಿಚ್ಛೇದನದ ನಂತರ ಪವನ್ ಮೂರನೇ ಮದುವೆಯಾಗಿದ್ದರು.

Pawan Kalyan, wife Anna Lezhneva are parents to newborn son.

ಈಗಾಗಲೇ ಪವನ್‌ ಮತ್ತು ಅನ್ನಾ ದಂಪತಿಗೆ ಪೋಲೆನಾ ಎಂಬ ಮಗಳಿದ್ದು, ಎರಡನೇ ಮಗು ಈಗ ಜನಿಸಿದೆ. ಅಂದಹಾಗೆ, ಪವನ್ ಎರಡನೇ ಪತ್ನಿ ರೇಣು ಅವರಿಗೂ ಅಕಿರಾ ಮತ್ತು ಆಧ್ಯಾ ಎಂಬ ಎರಡು ಮಕ್ಕಳಿದ್ದಾರೆ. ಆದರೆ ಪವನ್‌ ಮೊದಲ ಪತ್ನಿ ಹೆಸರು ನಂದಿನಿ ಅವರಿಗೆ ಮಕ್ಕಳಿಲ್ಲ. ಒಟ್ಟಿನಲ್ಲಿ ಪವನ್ ಈಗ 4 ಮಕ್ಕಳ ತಂದೆ ಎನ್ನಿಸಿಕೊಂಡಿದ್ದಾರೆ.

Pawan Kalyan, wife Anna Lezhneva are parents to newborn son.

ಪವನ್‌ ಕಲ್ಯಾಣ್ ಸದ್ಯ ತ್ರಿವಿಕ್ರಮ್ ಶ್ರೀನಿವಾಸ್‌ ನಿರ್ದೇಶನದ 'ಅಗ್ನಾತವಾಸಿ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 'ಅತ್ತಾರಿಂಟಿಕಿ ದಾರೇದಿ' ಚಿತ್ರದ ನಂತರ ಮತ್ತೆ ಈ ಚಿತ್ರದಲ್ಲಿ ಪವನ್‌ ಹಾಗೂ ತ್ರಿವಿಕ್ರಮ್ ಒಂದಾಗಿದ್ದಾರೆ.

English summary
Tollywood actor Pawan Kalyan, wife Anna Lezhneva are parents to newborn son.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada