twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಾಭಿಮಾನ ಮೆರೆದ ತೆಲುಗು ನಟ ಪವನ್ ಕಲ್ಯಾಣ್

    |

    ನಾಡಿನಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಕನ್ನಡ ಭಾವುಟ ಹಾರಿಸಿ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ ಕರುನಾಡ ಕುವರರು.

    ಹೆಮ್ಮೆಯ ಕನ್ನಡ ಹಬ್ಬಕ್ಕೆ ಹೊರರಾಜ್ಯದ ಪ್ರಜೆಗಳು ಶುಭಕೋರಿರುವುದು ಮತ್ತಷ್ಟು ಸಂತೋಷವನ್ನುಂಟು ಮಾಡಿದೆ. ಹೌದು, ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ವಿಶ್ ಮಾಡಿರುವುದು ವಿಶೇಷವೆನಿಸಿಕೊಂಡಿದೆ.

    ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ

    ಇನ್ನು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಕೋರಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಮೋದಿ ಕರ್ನಾಟಕ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಯಾರ್ ಯಾರು ವಿಶ್ ಮಾಡಿದ್ದಾರೆ.? ಮುಂದೆ ಓದಿ.....

    ಸಿರಿಗನ್ನಡಂ ಗೆಲ್ಗೆ ಎಂದ ಪವನ್

    ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ ಕನ್ನಡ ಜನತೆಗೆ ಶುಭಕೋರಿದ್ದಾರೆ. ಅದು ಕನ್ನಡದಲ್ಲೇ ವಿಶ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ''63ನೇ ಕನ್ನಡ ರಾಜ್ಯೋತ್ಸವದ ಸಂದಭ೯ವಾಗಿ ಸಮಸ್ತ ಕನ್ನಡ ಪ್ರಜೆಗಳಿಗೆ, ಕನಾ೯ಟಕದ ಮುಖ್ಯಮಂತ್ರಿಗಳಿಗೆ ಹಾಧಿ೯ಕ ಶುಭಾಶಯಗಳು.! ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ'' ಎಂದಿದ್ದಾರೆ.

    ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ

    ಕರ್ನಾಟಕ ಇತಿಹಾಸಕ್ಕೆ ಮೋದಿ ಸಲಾಂ

    ''ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

    ಈ ವರ್ಷದ ಕನ್ನಡ ರಾಜ್ಯೋತ್ಸವ ದಿನದಿಂದಲಾದರೂ ಹೀಗಾಗಲಿ...

    ನಿಮ್ಮ ದಾಸ ದರ್ಶನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಕಲ ಕನ್ನಡದ ಜನತೆಗೆ ಮತ್ತು ಡಿ ಬಾಸ್ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.

    ಕನ್ನಡ ರಾಜ್ಯೋತ್ಸವ: ನಮ್ಮ 'ಆಟೋ ರಾಜ'ರ ಪಾತ್ರ ಎಷ್ಟಿದೆ?

    ಭಾವುಟ ಹಾರಿಸಿದ ಸುದೀಪ್

    ಭಾವುಟ ಹಾರಿಸಿದ ಸುದೀಪ್

    'ಪೈಲ್ವಾನ್' ಚಿತ್ರದ ಶೂಟಿಂಗ್ ಗಾಗಿ ಹೈದ್ರಾಬಾದ್ ನಲ್ಲಿರುವ ಕಿಚ್ಚ ಸುದೀಪ್, ಅಲ್ಲಿಯೇ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಶೂಟಿಂಗ್ ಸೆಟ್ ನಲ್ಲೇ ಧ್ವಜಾರೋಹಣ ಮಾಡಿರುವ ಸುದೀಪ್ ಅವರ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.

    ಕನ್ನಡದ ಶ್ರೇಷ್ಠ ಕೃತಿಗಳು ಬ್ರೈಲ್‌ ಲಿಪಿಯಲ್ಲಿ, ಅಂಧರ ಈ ಸಾಧನೆ ಅತ್ಯದ್ಭುತ

    English summary
    Janasena Chief Pawan Kalyan has poured in his wholehearted Kannada Rajyotsava wishes to Kannada people and the Chief Minister of Karnataka, HD Kumaraswamy.
    Thursday, November 1, 2018, 18:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X