ಡಿವೋರ್ಸ್ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ
ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ಮದುವೆ ಆಗುತ್ತಿರುವ ವಿಷ್ಯ ಬಹಿರಂಗಪಡುತ್ತಿದ್ದಂತೆ, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಇದುವರೆಗೂ ಪವನ್ ಮತ್ತು ರೇಣು ಅವರ ನಡುವಿನ ವಿಚ್ಛೇದನ ವಿಷ್ಯ ಎಲ್ಲೂ ಬಹಿರಂಗವಾಗಿಲ್ಲ. ಅದಕ್ಕೆ ಕಾರಣವೇನು ಎಂಬುದನ್ನ ಬಹಿರಂಗಪಡಿಸಿರಲಿಲ್ಲ. ಆದ್ರೆ, ಅಭಿಮಾನಿಗಳ ಅತಿರೇಕದ ವರ್ತನೆಯಿಂದ ರೇಣು ದೇಸಾಯಿ ಕೊನೆಗೂ ಡಿವೋರ್ಸ್ ಬಗ್ಗೆ ಬಾಯ್ಬಿಟ್ಟಿದ್ದಾರೆ.
2012ರಲ್ಲಿ ಪವನ್ ಕಲ್ಯಾಣ್ ಮತ್ತು ರೇಣು ವಿಚ್ಛೇದನ ಪಡೆದುಕೊಂಡಿದ್ದರು. ಸುಮಾರು 6 ವರ್ಷಗಳ ಕಾಲ ಈ ವಿಷ್ಯ ಪ್ರಸ್ತಾಪವಾಗಿಲ್ಲ. ಆದ್ರೆ, ಇದೀಗ, ಮಾಜಿ ಪತ್ನಿ ತಮ್ಮ ಡಿವೋರ್ಸ್ ಹಿಂದಿನ ಅಸಲಿ ಸತ್ಯವನ್ನ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಪವನ್ ಮಾಜಿ ಪತ್ನಿ ಹೇಳಿದ ನಿಜವೇನು.? ಮುಂದೆ ಓದಿ....

ನಾನು ಡಿವೋರ್ಸ್ ಕೇಳಿಲ್ಲ
''ನಾನು ಡಿವೋರ್ಸ್ ಕೇಳಿಲ್ಲ. ಪವನ್ ಕಲ್ಯಾಣ್ ಅವರೇ ವಿಚ್ಛೇದನ ಕೇಳಿದರು. ಅದು ನನಗೆ ಮತ್ತು ಪವನ್ ಕಲ್ಯಾಣ್ ಅವರಿಗೆ ಗೊತ್ತು. ಆ ವೇಳೆ ನನಗೆ ಕೋಪ ಬಂದಿದ್ದು ಸಾಮಾನ್ಯ. ಆದ್ರೆ, ಕೊನೆಯದಾಗಿ ಅವರಿಗೆ ವಿಚ್ಛೇದನ ಬೇಕಿತ್ತು. ಸೋ ನಿರ್ಧಾರಕ್ಕೆ ಬಂದ್ವಿ'' ಎಂದು ರೇಣು ದೇಸಾಯಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಹಿಳೆ ಫ್ಯಾನ್ಸ್ ಗೆ ಒಂದು ಪ್ರಶ್ನೆ.?
ರೇಣು ದೇಸಾಯಿ ಅವರಿಗೆ ಪವನ್ ಕಲ್ಯಾಣ್ ಅವರ ಮಹಿಳಾ ಫ್ಯಾನ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇಂತವರಿಗೆ ರೇಣು ದೇಸಾಯಿ ಒಂದು ಪ್ರಶ್ನೆ ಮುಂದಿಟ್ಟಿದ್ದಾರೆ. '' ನನ್ನ ಜಾಗದಲ್ಲಿದ್ದು, ಮದುವೆ ನಂತರ 11 ವರ್ಷಗಳ ಕಾಲ ನಿಮಗೆ ತಿಳಿಯದೇ ಮತ್ತೊಬ್ಬರ ಜೊತೆ ಒಂದು ಮಗುವಿಗೆ ಜನ್ಮ ನೀಡಿದರೇ ನಿಮ್ಮ ಪರಿಸ್ಥಿತಿ ಹೇಗಿರುತ್ತೆ.? ''ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ವಿವರಣೆ ನೀಡಲಿಲ್ಲ
''ಪವನ್ ಕಲ್ಯಾಣ್ ಅವರ ಜೊತೆ ಡಿವೋರ್ಸ್ ಪಡೆದುಕೊಂಡ ನಂತರ ನಾನು ಅವರಿಗೆ ಕೇಳಿದೆ, ನಮ್ಮ ವಿಚ್ಛೇದನದ ಬಗ್ಗೆ ಒಂದು ಸಾರ್ವಜನಿಕ ವಿವರಣೆ ನೀಡಲು ಕೇಳಿದೆ. ಆದ್ರೆ, ಅವರು ಒಪ್ಪಲಿಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.

ನನ್ನಿಂದ ಸಮಸ್ಯೆಯಾಗಬಾರದೆಂದು ಸುಮ್ಮನಿದ್ದೆ
''ಪವನ್ ಕಲ್ಯಾಣ್ ಅವರು ಈಗ ಸಿನಿಮಾ ನಟ ಮಾತ್ರವಲ್ಲ, ರಾಜಕಾರಣಿ. ನಾನು ಈ ಬಗ್ಗೆ ಮಾತನಾಡಿದ್ರೆ, ಅವರ ರಾಜಕೀಯ ವೃತ್ತಿಗೆ ಸಮಸ್ಯೆಯಾಗಬಹುದು, ಆ ನಂತರ ಇದು ರಾಜಕೀಯ ಪಿತೂರಿ ಎನ್ನಬಹುದು ಎಂಬ ಆತಂಕದಿಂದ ಸುಮ್ಮನಿದ್ದೆ. ನನ್ನ ನಿಶ್ಚಿತಾರ್ಥಕ್ಕೆ ಟ್ವೀಟ್ ಮಾಡಿದ್ದ ಪವನ್ ಅವರು ಕೆಲವು ವರ್ಷಗಳ ಹಿಂದೆಯೆ ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರೇ ಎಲ್ಲವೂ ಸರಿಹೋಗುತ್ತಿತ್ತು'' ಎಂದು ರೇಣು ದೇಸಾಯಿ ತಿಳಿಸಿದ್ದಾರೆ.

ರೇಣುಗೆ ಇಬ್ಬರು ಮಕ್ಕಳು
ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಅವರಿಗೆ ಇಬ್ಬರು ಮಕ್ಕಳು. ಅಕಿರಾ ಮತ್ತು ಆಧ್ಯಾ. ಈಗ ಮತ್ತೊಬ್ಬ ವ್ಯಕ್ತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನನ್ನ ವೈಯಕ್ತಿಕ ಜೀವನದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನೀವು ನಿಮ್ಮ ಪವನ್ ಕಲ್ಯಾಣ್ ಅವರ ಬಗ್ಗೆ ಅವರ ಪತ್ನಿ ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.

ಮೂರು ಮದುವೆ ಆಗಿರುವ ಪವನ್
ಪವನ್ ಲ್ಯಾಣ್ 1997ರಲ್ಲಿ ನಂದಿನಿ ಎಂಬುವರ ಜೊತೆ ಮೊದಲ ಬಾರಿಗೆ ಸಪ್ತಪದಿ ತುಳಿದಿದ್ದರು. ಆದ್ರೆ, ಎರಡು ವರ್ಷಗಳ ದಾಂಪತ್ಯದ ನಂತರ ನಂದಿನಿಯಿಂದ ವಿಚ್ಛೇದನ ಪಡೆದರು. ನಂತರ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನ ವಿವಾಹವಾದರು. ಆಮೇಲೆ 2012 ಇವರಿಂದಲೂ ಡಿವೋರ್ಸ್ ಪಡೆದುಕೊಂಡ ಪವನ್, 2013ರಲ್ಲಿ ವಿದೇಶಿ ಮಹಿಳೆ ಅನ್ನಾ ಲೆಜ್ನೆವಾ ಅವರೊಂದಿಗೆ ಮೂರನೇ ವಿವಾಹವಾದರು.


Click it and Unblock the Notifications











