ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್

By Bharath Kumar

Recommended Video

ಎರಡನೆ ಮದುವೆಗೆ ರೆಡಿ ಆದ ಪವನ್ ಕಲ್ಯಾಣ್ ಮಾಜಿ ಪತ್ನಿ...!! | Filmibeat Kannada

ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷ್ಯವನ್ನ ಖುದ್ದು ರೇಣು ದೇಸಾಯಿ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೊಡ್ಡ ಚರ್ಚೆಯಾಗುತ್ತಿದೆ. ಅಂದ್ಹಾಗೆ, ಪವನ್ ಕಲ್ಯಾಣ್ ಅವರಿಗೆ ಮೂರು ಜನ ಪತ್ನಿಯರು. ರೇಣು ದೇಸಾಯಿ ಎರಡನೇಯವರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.

ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಟಿ ಈಗ ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ. ಅಷ್ಟಕ್ಕೂ, ರೇಣು ದೇಸಾಯಿ ಪವನ್ ಕಲ್ಯಾಣ್ ಅವರಿಂದ ದೂರವಾಗಿದ್ದೇಕೆ.? ಈಗ ಮದುವೆ ಆಗ್ತಿರುವ ಹೊಸ ಪತಿ ಯಾರು.? ಎಂಬುದನ್ನ ತಿಳಿಯಲು ಮುಂದೆ ಓದಿ.....

'ವರ' ಯಾರು ಎಂಬುದು ಗೌಪ್ಯವಾಗಿದೆ

'ವರ' ಯಾರು ಎಂಬುದು ಗೌಪ್ಯವಾಗಿದೆ

ಎಂಗೇಜ್ ಆಗಿರುವ ಬಗ್ಗೆ ಫೋಟೋ ಶೇರ್ ಮಾಡಿರುವ ನಟಿ ರೇಣು ದೇಸಾಯಿ, ತಮ್ಮನ್ನ ಮದುವೆ ಆಗುತ್ತಿರುವ 'ವರ' ಯಾರು ಎಂಬುದನ್ನ ಬಿಟ್ಟುಕೊಟ್ಟಿಲ್ಲ. ಉಂಗುರ ಬದಲಿಸುತ್ತಿರುವ ಫೋಟೋ ಮಾತ್ರ ಹಂಚಿಕೊಳ್ಳುವ ಮೂಲಕ ತಾವು ಎರಡನೇ ಮದುವೆ ಆಗುತ್ತಿದ್ದೀನಿ ಎಂದು ಖಚಿತಪಡಿಸಿದ್ದಾರೆ.

2012ರಲ್ಲಿ ವಿಚ್ಛೇದನ ಪಡೆದಿರುವ ರೇಣು

2012ರಲ್ಲಿ ವಿಚ್ಛೇದನ ಪಡೆದಿರುವ ರೇಣು

ರೇಣು ದೇಸಾಯಿ ಮೂಲತಃ ಗುಜರಾತಿಯವರು. 2009 ರಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಅವರೊಂದಿಗೆ ಮದುವೆ ಆದರು. ಇವರಿಬ್ಬರ ಪ್ರೀತಿಯ ಪ್ರತಿರೂಪವಾಗಿ ಆಧ್ಯಾ ಮತ್ತು ಅಕಿರಾ ಎಂಬ ಇಬ್ಬರು ಮಕ್ಕಳಿದ್ದರು. ಆದ್ರೆ, ದಾಂಪತ್ಯದಲ್ಲಿ ಮನಸ್ತಾಪ ಮೂಡಿದ ಹಿನ್ನಲೆ 2012ರಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡರು.

ಪವನ್ ಕಲ್ಯಾಣ್ ಗೆ ಮೂರು ಪತ್ನಿಯರು

ಪವನ್ ಕಲ್ಯಾಣ್ ಗೆ ಮೂರು ಪತ್ನಿಯರು

ಪವನ್ ಲ್ಯಾಣ್ 1997ರಲ್ಲಿ ನಂದಿನಿ ಎಂಬುವರ ಜೊತೆ ಮೊದಲ ಬಾರಿಗೆ ಸಪ್ತಪದಿ ತುಳಿದಿದ್ದರು. ಆದ್ರೆ, ಎರಡು ವರ್ಷಗಳ ದಾಂಪತ್ಯದ ನಂತರ ನಂದಿನಿಯಿಂದ ವಿಚ್ಛೇದನ ಪಡೆದರು. ನಂತರ ರೇಣು ದೇಸಾಯಿ ಅವರನ್ನ ವಿವಾಹವಾದರು. ಇವರಿಂದಲೂ ಡಿವೋರ್ಸ್ ಪಡೆದುಕೊಂಡ ಪವನ್, 2013ರಲ್ಲಿ ವಿದೇಶಿ ಮಹಿಳೆ ಅನ್ನಾ ಲೆಜ್ನೆವಾ ಅವರೊಂದಿಗೆ ಮೂರನೇ ವಿವಾಹವಾದರು.

ಪವನ್ ಅಭಿಮಾನಿಗಳಿಂದ ಕಿಡಿ

ಪವನ್ ಅಭಿಮಾನಿಗಳಿಂದ ಕಿಡಿ

ಸದ್ಯ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ಮದುವೆ ಆಗುತ್ತಿರುವುದರಿಂದ ಪವರ್ ಸ್ಟಾರ್ ಫ್ಯಾನ್ಸ್ ರೇಣು ವಿರುದ್ಧ ಕಿಡಿ ಕಾರಿದ್ದಾರೆ. ''ನೀವು ಎರಡನೇ ಮದುವೆ ಆಗೋದ್ರಿಂದ ಪವನ್ ಅವರಿಗೆ ಯಾವುದೇ ತೊಂದರೆಯಾಗಬಾರದು. ಏನೆ ಮಾಡಿದ್ರು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ'' ಎಂದು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳ 'ಕಳಕಳಿ'ಗೆ ರೇಣು ಪ್ರತಿಕ್ರಿಯೆ

ಅಭಿಮಾನಿಗಳ 'ಕಳಕಳಿ'ಗೆ ರೇಣು ಪ್ರತಿಕ್ರಿಯೆ

''ನಾನು ಎರಡನೇ ಮದುವೆ ಮಾಡಿಕೊಳ್ಳುತ್ತಿರುವ ಬಗ್ಗೆ ಯುವತಿಯರಿಗಿಂತ ಯುವಕರೇ ಹೆಚ್ಚು ಮೆಸೆಜ್ ಮಾಡ್ತಿದ್ದಾರೆ ಎಂದು ನನ್ನ ಸಹಾಯಕರು ತಿಳಿಸಿದರು. ನಿಜಕ್ಕೂ ಖುಷಿ ಆಗ್ತಿದೆ. ಅವರ ತಂದೆ-ತಾಯಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಅವರ ಮಕ್ಕಳನ್ನ ಎಷ್ಟು ಚೆನ್ನಾಗಿ ಬೆಳಿಸಿದ್ದಾರೆ. ಹೊಸ ಜನರೇಶನ್ ಬಗ್ಗೆ ಖುಷಿ ಆಗ್ತಿದೆ. ಮಹಿಳೆಯರ ಸಮಾನತೆ ಬಗ್ಗೆ ಇಷ್ಟೊಂದು ಕಾಳಜಿ ತೋರಿಸುತ್ತಿರುವುದು ತೀರಾ ಸಂತಸ ತಂದಿದೆ'' ಎಂದು ರೇಣು ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Telugu super star Pawan Kalyan's Ex- wife Actress Renu Desai got engaged second time. now Renu Desai engagement pic viral social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X