Renu Desai: ರೇಣು 2ನೇ ಎಂಗೇಜ್‌ಮೆಂಟ್ ಮುರಿದು ಬಿದ್ದಿದ್ಯಾಕೆ? ಮತ್ತೆ ಮದ್ವೆ ಇಂಗಿತ ವ್ಯಕ್ತಪಡಿಸಿದ ಪವನ್ ಮಾಜಿ ಪತ್ನಿ
ತಮ್ಮ ಹೇಳಿಕೆಗಳಿಂದ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಪದೇ ಪದೆ ಸುದ್ದಿ ಆಗುತ್ತಿರುತ್ತಾರೆ. ಈ ಹಿಂದೆ ಪವನ್ ಕಲ್ಯಾಣ್ ವಿರುದ್ಧವೂ ಪರೋಕ್ಷವಾಗಿ ತಿರುಗಿ ಬಿದ್ದಿದ್ದರು. ಇನ್ನು ಪವನ್‌ನ ವಹಿಸಿಕೊಂಡು ಬರುವ ಆತನ ಅಭಿಮಾನಿಗಳಿಗೂ ತಿರುಗೇಟು ಕೊಡುತ್ತಿರುತ್ತಾರೆ.
ಸದ್ಯ ರವಿತೇಜ ನಟನೆಯ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ರೇಣು ದೇಸಾಯಿ ನಟಿಸಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಡಿವೋರ್ಸ್ ಪಡೆದು ಪವನ್ ಕಲ್ಯಾಣ್ ಇಂದ ದೂರವಾದ ಬಳಿಕ ರೇಣು ತಮ್ಮ ಇಬ್ಬರು ಮಕ್ಕಳ ಒಬ್ಬೊಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲ ದಿನಗಳ ಹಿಂದೆ 2ನೇ ಮದುವೆ ಆಗಲು ನಿರ್ಧರಿಸಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದರು.

ಪೋಷಕರು ಹಾಗೂ ಸ್ನೇಹಿತರ ಒತ್ತಡಕ್ಕೆ ಮಣಿದು 2ನೇ ಮದುವೆಗೆ ಸಿದ್ಧರಾಗಿದ್ದರು. ಎಂಗೇಜ್‌ಮೆಂಟ್ ಸುದ್ದಿ ಬಂದ್ರು ಮದುವೆ ಸುದ್ದಿ ಮಾತ್ರ ಬರಲೇಯಿಲ್ಲ. ಈ ಬಗ್ಗೆ ಇದೀಗ ಸ್ವತಃ ರೇಣು ಪ್ರತಿಕ್ರಿಯಿಸಿದ್ದಾರೆ. "ನನ್ನ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲರಿಗೂ ವಿವರಿಸುವ ಅಗತ್ಯವಿಲ್ಲ. ಹಿರಿಯರ ಒಪ್ಪಿಗೆ ಪಡೆದು ಸೂಕ್ತ ವ್ಯಕ್ತಿಯನ್ನು ಮದುವೆಯಾಗಬೇಕು ಎಂದುಕೊಂಡೆ. ಕುಟುಂಬದ ಸ್ನೇಹಿತರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆಯಿತು"
"ನಿಶ್ಚಿತಾರ್ಥದ ಬಳಿಕ ಮಕ್ಕಳಿದ್ದಾರೆ.. ಅವರಿಗೆ ಬೆಂಬಲವಾಗಿ ಇರಬೇಕು, ಎಂದು ನನ್ನ ಫ್ಯಾಮಿಲಿ, ಫ್ರೆಂಡ್ಸ್ ಹೇಳಿದರು. ಅಷ್ಟೊತ್ತಿಗೆ ನನ್ನ ನಿಶ್ಚಿತಾರ್ಥ ನಡೆದಿತ್ತು. ಫೋಟೋಗಳು ಹೊರಬಂದಿತ್ತು. ಅದು ದೊಡ್ಡ ಸುದ್ದಿಯಾಯಿತು. ಆದರೆ ಆ ಬಳಿಕ ನನಗೆ ಅರಿವಾಯಿತು. ನನ್ನ ಮಗಳಿಗೆ ಆಗ ಕೇವಲ 7 ವರ್ಷ ವಯಸ್ಸು. ಮದುವೆ ಬಳಿಕ ಆತನಿಗೆ ನಾನು ಸಮಯ ಕೊಡಬೇಕು. ಆಗ ನನ್ನ ಮಗಳ ಬಗ್ಗೆ ನಾನು ಯೋಚಿಸಿದೆ. ಅವಳದ್ದು ಬಹಳ ಚಿಕ್ಕ ವಯಸ್ಸು. ಆ ಸಮಯದಲ್ಲಿ ಅವಳೊಟ್ಟಿಗೆ ಬಹಳ ಸಮಯ ನಾನು ಜೊತೆಯಾಗಿ ಇರಬೇಕು. ತಂದೆ ಕೂಡ ಇಲ್ಲ. ತಾಯಿ ಕೂಡ ಬೇರೆ ವ್ಯಕ್ತಿ ಜೊತೆ ಇದ್ದರೆ ಆ ಮಕ್ಕಳ ಪರಿಸ್ಥಿತಿ ಊಹಿಸೋಕೆ ಅಸಾಧ್ಯ. ಅದಕ್ಕೆ ನಾನು ಆ ನಿರ್ಧಾರಕ್ಕೆ ಬಂದೆ"

"ನಾನು ಮಾಡಿದ್ದು ತಪ್ಪೋ ಸರಿನೋ ಗೊತ್ತಿಲ್ಲ. ಎಲ್ಲಾ ಗೊತ್ತಿದ್ದು ಆ ನಿರ್ಣಯ ಕೈಗೊಂಡೆ. ಮದುವೆ ಕ್ಯಾನ್ಸಲ್ ಮಾಡಿಕೊಂಡೆ. ಈಗ ಮಗಳ ವಯಸ್ಸು 13 ವರ್ಷ. ಆಗ 7 ವರ್ಷ. ಆ ಸಮಯಲ್ಲಿ ನಾನು ಆ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ ಅನ್ನಿಸಿತ್ತು. ನನಗೆ ಮದುವೆ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಮದುವೆ ಆಗಬೇಕು ಅನಿಸುತ್ತದೆ. ನನಗೆ ಮದುವೆಯಲ್ಲಿ ತುಂಬಾ ನಂಬಿಕೆ ಇದೆ. ಮದುವೆ ಎಂಬ ಪರಿಕಲ್ಪನೆ ನನಗೆ ಬಹಳ ಇಷ್ಟ. ಸಂಬಂಧವಿಲ್ಲದ ಇಬ್ಬರು ಜೀವನ ಹಂಚಿಕೊಳ್ಳುವ ಆ ಬಾಂಧವ್ಯ ಬಹಳ ಗಟ್ಟಿಯಾದದ್ದು"
"ನಾನು ಮತ್ತೊಂದು ಮದುವೆಯಾಗಲು ಕಾಯುತ್ತಿದ್ದೇನೆ. ಆದ್ಯಾ ಕಾಲೇಜಿಗೆ ಹೋದ ಮೇಲೆ ನನ್ನ ಬಗ್ಗೆ ಯೋಚಿಸುತ್ತೇನೆ. ನನ್ನ ಮಕ್ಕಳು ನನಗೆ ಮದುವೆಯಾಗಬೇಕೆಂದು ಬಯಸುತ್ತಾರೆ. ಅವರು ಸಂತೋಷವಾಗಿದ್ದಾರೆ. ಮದುವೆ ಎಂಬುದು ನನ್ನ ಅಭಿಪ್ರಾಯ. ನನ್ನ ಮಕ್ಕಳು ನನಗೆ ದೇವರ ಕೊಡುಗೆ. ಒಬ್ಬ ವ್ಯಕ್ತಿಯಿಂದ ನೀನು ಸುಖವಾಗಿ ಸಂತೋವಾಗಿ ಇರುತ್ತೀಯಾ ಅಂದರೆ ಸಂತೋಷವಾಗಿ ಮದುವೆ ಆಗಿ ಎಂದು ಮಗ ಅಕಿರಾ ಹೇಳುತ್ತಿರುತ್ತಾನೆ. ಇನ್ನೆರಡು ವರ್ಷಗಳಲ್ಲಿ ಮಕ್ಕಳು ದೊಡ್ಡವರಾಗುತ್ತಾರೆ. ನಂತರ ನಾನು ಮದುವೆಯ ಬಗ್ಗೆ ಯೋಚಿಸುತ್ತೇನೆ" ಎಂದು ರೇಣು ದೇಸಾಯಿ ಹೇಳಿದ್ದಾರೆ.
ಪುಣೆಯಲ್ಲಿ ಹುಟ್ಟಿ ಬೆಳೆದ ರೇಣು ದೇಸಾಯಿ ತೆಲುಗಿನ 'ಬದ್ರಿ' ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಪವನ್ ಜೊತೆಗೆ ಶುರುವಾದ ಪರಿಚಯ ಪ್ರೀತಿಗೆ ತಿರುಗಿ 2009ರಲ್ಲಿ ಇಬ್ಬರು ಮದುವೆ ಆಗಿದ್ದರು. ಕೆಲ ಭಿನ್ನಾಬಿಪ್ರಾಯಗಳಿಂದ 2012ರಲ್ಲಿ ಇಬ್ಬರು ಡಿವೋರ್ಸ್ ಪಡೆದಿದ್ದರು.


Click it and Unblock the Notifications











