For Quick Alerts
  ALLOW NOTIFICATIONS  
  For Daily Alerts

  'ಫಹಾದ್ ಫಾಸಿಲ್ ನೋಡಿ ನಾನು ಆಕ್ಟ್ ಮಾಡ್ತೀನಿ ಎಂದ್ದಿದ್ದ ಅಪ್ಪು': 'ದ್ವಿತ್ವ' ಇನ್‌ಸೈಡ್ ಸ್ಟೋರಿ!

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿಂಪ್ಲಿಸಿಟಿ ಎಲ್ಲರಿಗೂ ಗೊತ್ತು. ರಿಲೀಸ್ ಲೈಫ್‌ನಲ್ಲಾಗಲಿ, ರಿಯಲ್‌ ಲೈಫ್‌ನಲ್ಲಾಗಲಿ. ಅಪ್ಪು ವ್ಯಕ್ತಿತ್ವ ಬದಲಾಗಿದ್ದನ್ನು ಯಾರೂ ನೋಡಿದ್ದೇ ಇಲ್ಲ. ಪುನೀತ್ ರಾಜ್‌ಕುಮಾರ್ ಇದೇ ಸರಳತೆಗೆ ಅದೆಷ್ಟೋ ಮಂದಿ ಮರುಳಾಗಿದ್ದಾರೆ.

  ಸ್ಟಾರ್‌ಗಿರಿ, ಶ್ರೀಮಂತಿಕೆ ಇವೆಲ್ಲಾ ಇದ್ದರೂ ಪುನೀತ್ ಮಾತ್ರ ಹಿಂದೆ ಹೇಗಿದ್ದರೋ, ಕೊನೆವರೆಗೂ ಹಾಗೇ ಇದ್ದರು. ಅಭಿಮಾನಿಗಳೊಂದಿಗೆ, ಕುಟುಂಬದವರೊಂದಿಗೆ, ಆಪ್ತರೊಂದಿಗೆ ಅಪ್ಪು ಆಗಿದ್ದರೇ ವಿನ: ಪವರ್‌ಸ್ಟಾರ್ ಆಗಿದ್ದು ಯಾರೂ ನೋಡಿದಂತಿಲ್ಲ. ಇನ್ನು ಚಿತ್ರರಂಗದವರ ಜೊತೆಗೂ ಪುನೀತ್ ಸಿಂಪಲ್ ಆಗಿಯೇ ಇರುತ್ತಿದ್ದರು.

  Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!Dvitva: ಪವನ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್ ವಾಟ್ಸ್‌ಆಪ್‌ ಚಾಟ್: ಆ ಕನಸು ಕನಸಾಗೆ ಉಳಿಯಿತು!

  ಅಷ್ಟಕ್ಕೂ ಇಷ್ಟೆಲ್ಲಾ ಹೇಳುವುದಕ್ಕೆ ಒಂದು ಕಾರಣವಿದೆ. ಪುನೀತ್ ರಾಜ್‌ಕುಮಾರ್ ಇದ್ದಾಗ ನಿರ್ದೇಶಕ ಪವನ್ ಕುಮಾರ್ ಬಳಿ ಆಡಿದ ಆ ಒಂದು ಮಾತೇ ಕಾರಣ. ಅಂದು ಅಪ್ಪು, ಮಲಯಾಳಂ ನಟನ ಬಗ್ಗೆ ಹೇಳಿದ್ದ ಮಾತೊಂದನ್ನು 'ದ್ವಿತ್ವ' ಚಿತ್ರದ ನಿರ್ದೇಶಕ ಈಗ ನೆನೆಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಅಂದು ಅಪ್ಪು ಹೇಳಿದ ಆ ಮಾತೇನು? ಈಗ ಪವನ್ ಕುಮಾರ್ ಆ ಮಾತನ್ನು ನೆನಪಿಸಿಕೊಂಡಿದ್ದೇಕೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

  ಅಪ್ಪು ನೆನೆದ ಪವನ್ ಕುಮಾರ್

  ಅಪ್ಪು ನೆನೆದ ಪವನ್ ಕುಮಾರ್

  ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ ಪವನ್‌ ಕುಮಾರ್ 'ದ್ವಿತ್ವ' ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಇನ್ನೇ ಕಥೆನೂ ಓಕೆ ಆಗಿತ್ತು. ಪ್ರೀ-ಪ್ರೊಡಕ್ಷನ್ ಕೆಲಸನೂ ನಡೆಯುತ್ತಿತ್ತು. ಸಿನಿಮಾನೂ ಸೆಟ್ಟೇರಬೇಕಿತ್ತು. ಅಷ್ಟರಲ್ಲೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ದಿಢೀರನೇ ಕಣ್ಮರೆಯಾಗಿಬಿಟ್ಟರು. 'ದ್ವಿತ್ವ' ಸಿನಿಮಾದ ಪ್ರೀ-ಪ್ರೊಡಕ್ಷನ್ ವೇಳೆ ಅಪ್ಪು ಹಾಗೂ ಪವನ್ ಕುಮಾರ್ ನಡುವೆ ನಡೆದ ಮಾತುಕತೆ ಹಾಗೂ ಕೆಲವು ಘಟನೆಗಳನ್ನು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದೆ.

  ಫಹಾದ್ ಫಾಸಿಲ್ ಬಗ್ಗೆ ಅಪ್ಪು ಹೇಳಿದ್ದೇನು?

  ಫಹಾದ್ ಫಾಸಿಲ್ ಬಗ್ಗೆ ಅಪ್ಪು ಹೇಳಿದ್ದೇನು?

  ಪವನ್ ಕುಮಾರ್ 'ದ್ವಿತ್ವ' ಸಿನಿಮಾವನ್ನು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು. ಕನ್ನಡ ಹಾಗೂ ತೆಲುಗಿನಲ್ಲಿ ಅಪ್ಪು ಜನಪ್ರಿಯರಾಗಿದ್ದರು. ಆದರೆ, ತಮಿಳು ಹಾಗೂ ಮಲಯಾಳಂನಲ್ಲಿ ಅಷ್ಟು ಪರಿಚಯ ಇರಲಿಲ್ಲ. ಹೀಗಾಗಿ ತಮಿಳು, ಮಲಯಾಳಂನಲ್ಲಿ ಫಹಾದ್ ಫಾಸಿಲ್‌ ಹಾಕಿಕೊಳ್ಳಲು ಸಿನಿಮಾ ಮಾಡಲು ನಿರ್ಧರಿಸಿದ್ದರು. ಆ ವೇಳೆ ನಡೆದ ಸಂಭಾಷಣೆಯನ್ನು ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. "ಅಪ್ಪು ಸರ್‌ ಬಳಿಗೆ ಹೋಗಿ ಈತರ ಅಂದ್ಕೊಂಡಿದ್ದೀವಿ ಅಂತ ಹೇಳಿದಾಗ, ಪವನ್ ಒಂದು ಕೆಲಸ ಮಾಡಿ, ಪ್ರತಿ ಬಾರಿ ಫಸ್ಟ್ ಶಾಟ್ ಫಹಾದ್‌ದು ತೆಗೀರಿ. ಅವರು ಮಾಡೋದನ್ನು ಮಾಡೋದಕ್ಕೆ ಪ್ರಯತ್ನ ಪಡುತ್ತೇನೆ. ಇದನ್ನು ನನಗೊಬ್ಬನಿಗೆ ಹೇಳಿದರೆ ಬೇರೆ, ಅದೇ ಎಲ್ಲರ ಎದುರಿಗೂ ಹೇಳಿದ್ದು ಇದೆಯಲ್ಲಾ ಅದು ಶಾಕಿಂಗ್ ಆಗಿತ್ತು." ಎಂದು ಪವನ್ ಕುಮಾರ್ ಹೇಳಿದ್ದಾರೆ.

  ಆಗಲೂ ಅದೇ ಮರ್ಯಾದೆ ಇತ್ತು

  ಆಗಲೂ ಅದೇ ಮರ್ಯಾದೆ ಇತ್ತು

  "ಲಗೋರಿ ಸಿನಿಮಾಗೆ ಬರೆಯುವಾಗ ಅವರ ಮನೆಗೆ ಹೋಗಿದ್ದೆ. ಆಗ ಭಟ್ಟರಿಗೆ ಅಸಿಸ್ಟೆಂಟ್ ಆಗಿದ್ದೆ. ಆಗಲೂ ಅಸಿಸ್ಟೆಂಟ್ ಆಗಿದ್ದಾಗ ಎಷ್ಟು ಮರ್ಯಾದೆ ಕೊಟ್ಟು ಮಾತಾಡುತ್ತಿದ್ದರೋ. ದ್ವಿತ್ವ ಸ್ಟೋರಿ ಬಗ್ಗೆ ಮಾತಾಡೋಕೆ ಹೋದಾಗಲೂ ಅಷ್ಟೇ ಮರ್ಯಾದೆ ಕೊಟ್ಟಿದ್ದರು. ಈ ಮಧ್ಯದಲ್ಲಿ ಆಗಾಗ ಮಾತುಕತೆ ನಡೆದಿತ್ತು. ಯೂಟರ್ನ್ ನೋಡಿ ಅವರೇ ಒಂದು ವಿಡಿಯೋ ಮಾಡಿ ಕಳಿಸಿದ್ದರು. ಅವರಾಗೇ ಪೋನ್ ಮಾಡೋರು. ದ್ವಿತ್ವ ಸಮಯದಲ್ಲಿ ಎಷ್ಟು ಮರ್ಯಾದೆ ಸಿಕ್ಕಿತ್ತೋ ಅದು ಸಹಾಯಕ ನಿರ್ದೇಶಕನಾಗಿದ್ದಾಗಲೇ ಸಿಕ್ಕಿತ್ತು." ಎಂದು ಪವನ್ ಕುಮಾರ್ ಹೇಳಿದ್ದಾರೆ.

  'ದ್ವಿತ್ವ' ಸಿನಿಮಾ ಆಗುತ್ತಾ?

  'ದ್ವಿತ್ವ' ಸಿನಿಮಾ ಆಗುತ್ತಾ?

  ಪವನ್ ಕುಮಾರ್ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದ ಸಿನಿಮಾ 'ದ್ವಿತ್ವ'. ಅಪ್ಪು ಹಾಗೂ ಪವನ್ ಇಬ್ಬರ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಬರಬೇಕಿತ್ತು. ಅಷ್ಟರಲ್ಲೇ ಇಷ್ಟೆಲ್ಲಾ ನಡೆದು ಹೋಗಿತ್ತು. ಈಗ ಮತ್ತೆ ಪವನ್ ಕುಮಾರ್ 'ದ್ವಿತ್ವ' ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಾರಾ? ಅನ್ನೋ ಕುತೂಹಲವಿದೆ. ಈ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. "ದ್ವಿತ್ವ ನೋಡೋಣ. ಆಗ್ಬೇಕು ಅಂದ್ರೆ ಯಾವಾಗ ಆಗುತ್ತೋ ಮುಂದೆ ನೋಡೋಣ." ಎಂದಿದ್ದಾರೆ ಪವನ್.

  English summary
  Pawan Kumar About Puneeth Rajkumar And Fahadh Faasil On Dvitva, Know More.
  Tuesday, August 9, 2022, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X