2000 ರೂ ಉಚಿತವಾಗಿ ನೀಡುತ್ತಿದ್ದಾರೆ ಲೂಸಿಯಾ ಪವನ್ ಕುಮಾರ್, ನಿಮಗೆ ಬೇಕಾ?

ಲೂಸಿಯಾ ಸಿನಿಮಾ ನಿರ್ದೇಶಕ ಪವನ್ ಕುಮಾರ್ 350 ಮಂದಿಗೆ 2000 ರೂಪಾಯಿ ಹಣವನ್ನು ಉಚಿತವಾಗಿ ನೀಡುತ್ತಿದ್ದಾರೆ.

Recommended Video

ಶಿವಣ್ಣ ದಯವಿಟ್ಟು ಹೀಗೆ ಮಾಡ್ಬೇಡಿ ಅಂದಿದ್ದೇಕೆ | Shivanna | Stay Home stay Safe | Filmibeat kannada

ಹೌದು, ನಿರ್ದೇಶಕ ಪವನ್ ಕುಮಾರ್ ಅವರು ಕೊರೊನಾ ಭೀತಿಯಿಂದ ಚಿತ್ರರಂಗವೆನ್ನಾ ಬಂದ್ ಆದ ನಂತರ ಸಿನಿ ಕಾರ್ಮಿಕರಿಗೆ ಸಹಾಯ ಮಾಡಲೆಂದು ಹಣ ಸಹಾಯಕ್ಕೆ ಮನವಿ ಮಾಡಿದ್ದರು.

ಭಾನುವಾರದಂದು ಪವನ್ ಕುಮಾರ್ ಅವರು ದಿನವೆಲ್ಲಾ ವಿವಿಧ ಸ್ಟಾರ್ ನಟರ ಜೊತೆಗೆ ಲೈವ್ ಕಾರ್ಯಕ್ರಮ ಮಾಡಿ ಹಣ ಸಹಾಯ ಮಾಡುವಂತೆ ವಿವಿಧ ಜನರನ್ನು ಕೋರಿದ್ದರು. ಅಂತೆಯೇ ಹಲವು ಸಾರ್ವಜನಿಕರು, ನಟರು, ತಂತ್ರಜ್ಞರು ಹಣ ಸಹಾಯ ಮಾಡಿದ್ದಾರೆ.

ಭಾನುವರದಿಂದ 5 ಲಕ್ಷ ಕ್ಕೂ ಹೆಚ್ಚು ಹಣ ಸಂಗ್ರಹ

ಭಾನುವರದಿಂದ 5 ಲಕ್ಷ ಕ್ಕೂ ಹೆಚ್ಚು ಹಣ ಸಂಗ್ರಹ

ಭಾನುವಾರದಿಂದ ಈವರೆಗೆ 5 ಲಕ್ಷ ರೂಪಾಯಿಗೂ ಹೆಚ್ಚು ಹಣ ಒಟ್ಟಾಗಿದ್ದು, ಒಟ್ಟು 350 ಮಂದಿಗೆ 2000 ರೂಪಾಯಿ ಹಣ ನೀಡುವಷ್ಟು ಹಣ ಒಟ್ಟಾಗಿದೆ ಎಂದು ಪವನ್ ಕುಮಾರ್ ಹೇಳಿದ್ದಾರೆ.

ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿರುವ ಪವನ್‌

ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿರುವ ಪವನ್‌

ಈ ಬಗ್ಗೆ ಫೇಸ್‌ಬುಕ್ ನಲ್ಲಿ ಪೋಸ್ಟ್ ಹಾಕಿರುವ ಪವನ್ ಕುಮಾರ್, 'ನಮ್ಮ ಬಳಿ 350 ಮಂದಿಗೆ 2000 ರೂಪಾಯಿ ನಗದು ನೀಡುವಷ್ಟು ಹಣ ಒಟ್ಟಾಗಿದೆ. ಯಾರಿಗೆ ಅವಶ್ಯಕತೆ ಇದೆಯೋ ಅವರು ಯೆಸ್ ಎಂದು ಕಮೆಂಟ್ ಮಾಡಿ, ಬೇಡವಾದವರು ನೋ ಎಂದು ಕಮೆಂಟ್ ಮಾಡಿ' ಎಂದು ಮನವಿ ಮಾಡಿದ್ದಾರೆ.

ಜವಾಬ್ದಾರಿಯುತವಾಗಿ ವರ್ತಿಸುತ್ತೀರೆಂದು ನಿರೀಕ್ಷಿಸುತ್ತೇನೆ: ಪವನ್

ಜವಾಬ್ದಾರಿಯುತವಾಗಿ ವರ್ತಿಸುತ್ತೀರೆಂದು ನಿರೀಕ್ಷಿಸುತ್ತೇನೆ: ಪವನ್

ಯಾರಿಗೆ ತುರ್ತಾಗಿ ಹಣದ ಅವಶ್ಯಕತೆ ಇದೆಯೋ ಅವರು ಮಾತ್ರವೇ ಎಸ್ ಎಂದು ಕಮೆಂಟ್ ಮಾಡಿ ಎಂದು ಮನವಿ ಮಾಡಿರುವ ಪವನ್ ಕುಮಾರ್, ಯಾರು ಸ್ವಲ್ಪ ದಿನ ನಿಭಾಯಿಸಬಲ್ಲಿರೋ ಅವರು ಕಮೆಂಟ್ ಮಾಡಬೇಡಿ, ನೀವು ಜವಾಬ್ದಾರಿಯುತವಾಗಿ ವರ್ತಿಸುತ್ತೀರೆಂದು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.

ಪವನ್ ಕುಮಾರ್ ಕರೆಗೆ ಸ್ಪಂದಿಸಿದ ಸ್ಯಾಂಡಲ್‌ವುಡ್ ನಟರು

ಪವನ್ ಕುಮಾರ್ ಕರೆಗೆ ಸ್ಪಂದಿಸಿದ ಸ್ಯಾಂಡಲ್‌ವುಡ್ ನಟರು

ಪವನ್ ಕುಮಾರ್ ಕರೆ ನೀಡಿದ್ದಕ್ಕೆ ಹಲವು ಸ್ಯಾಂಡಲ್ ವುಡ್ ನಟರು ಸ್ಪಂದಿಸಿದ್ದರು. ಪುನೀತ್ ರಾಜ್‌ ಕುಮಾರ್, ಧನಂಜಯ್, ಐಂದ್ರಿತಾ ರೈ, ಶರ್ಮಿಳಾ ಮಾಂಡ್ರೆ, ಧನಂಜಯ್, ಪ್ರಕಾಶ್ ರೈ ಸೇರಿ ಇನ್ನೂ ಹಲವು ನಟರು ಪವನ್‌ ನೀಡಿದ್ದ ಖಾತೆಗೆ ಹಣ ಹಾಕಿದ್ದಾರೆ.

More from Filmibeat

English summary
Director pawan Kumar distributing 2000 rs for free people who were in need in this coronavirus scare situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X