twitter
    For Quick Alerts
    ALLOW NOTIFICATIONS  
    For Daily Alerts

    ಪವನ್ ಕುಮಾರ್ ಆಯೋಜಿಸಿರುವ ಸ್ಪರ್ಧೆಯಲ್ಲಿ ಭಾಗವಹಿಸಿ ರೂ.3 ಲಕ್ಷ ಗೆಲ್ಲಿ

    By Suneel
    |

    ಬೋಳು ತಲೆ ಹೊಂದಿರುವವರ ಗೋಳಿನ ಕತೆಯ 'ಒಂದು ಮೊಟ್ಟೆಯ ಕಥೆ' ಚಿತ್ರ ಜುಲೈ 7 ರಂದು ತೆರೆ ಮೇಲೆ ಬರಲು ಸಜ್ಜಾಗಿದೆ. ತಲೆಕೂದಲು ಇಲ್ಲದವರ ಬಗೆಗಿನ ಈ ಚಿತ್ರ ಟೈಟಲ್ ಮಾತ್ರವಲ್ಲದೇ ಟ್ರೈಲರ್ ಮತ್ತು ಹಾಡುಗಳಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.[ಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ...]

    ಅಂದಹಾಗೆ 'ಒಂದು ಮೊಟ್ಟೆಯ ಕಥೆ' ಚಿತ್ರ ನಿರ್ಮಾಣ ಮಾಡಿರುವ 'ಲೂಸಿಯಾ' ಮತ್ತು ;ಯೂ ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಈಗ ಚಿತ್ರದ ಹಿನ್ನೆಲೆಯಲ್ಲಿ ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದು, ಇದರಲ್ಲಿ ಭಾಗವಹಿಸಿ 3 ಲಕ್ಷ ರೂ ಗೆಲ್ಲುವ ಅವಕಾಶ ನೀಡಿದ್ದಾರೆ. ಆ ಸ್ಪರ್ಧೆಯಾವುದು, ಹಣ ಹೇಗೆ ಗೆಲ್ಲಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ಓದಿರಿ.

    ಸ್ಪರ್ಧೆಯ ಹೆಸರು?

    ಸ್ಪರ್ಧೆಯ ಹೆಸರು?

    ಸ್ಪರ್ಧೆಯ ಹೆಸರು 'ಬೀ ಬಾಲ್ಡ್ -ಗೆಟ್ ರಿಚ್'(Be Bald -Get Rich). ಈ ಹಿಂದೆ 2012 'ನೀವು ಹಣ ಕೊಡಿ. ನಾವು ಚಿತ್ರ ನಿರ್ಮಿಸುತ್ತೇವೆ'(Crowd Founded) ಎಂಬ ಕಾನ್ಸೆಪ್ಟ್ ನಲ್ಲಿ ''ಲೂಸಿಯಾ' ಚಿತ್ರವನ್ನು ಮಾಡಿದ್ದರು. ಆದರೆ ಈ ಬಾರಿ 'Crowd Sourced' ಕಾನ್ಸೆಪ್ಟ್ ನಲ್ಲಿ ವಿಡಿಯೋ ಗಳನ್ನು ಸ್ವೀಕರಿಸಿ ಅವರೇ ಹಣ ಕೊಡುವ ಸ್ಪರ್ಧೆಯನ್ನು ಪವನ್ ಕುಮಾರ್ ಏರ್ಪಡಿಸಿದ್ದಾರೆ.

    ಮೊದಲು ಹಾಡು ನೋಡಿ

    ಮೊದಲು ಹಾಡು ನೋಡಿ

    ಸ್ಪರ್ಧೆಯಲ್ಲಿ ಭಾಗವಹಿಸಿ 3 ಲಕ್ಷ ಹಣ ಗೆಲ್ಲುವ ಮುನ್ನ ಸ್ಪರ್ಧೆ ಏನು ಎಂದು ತಿಳಿಯಲು ಚಿತ್ರತಂಡ ನೀಡಿರುವ 3 ನಿಮಿಷದ ಹಾಡನ್ನು ನೋಡಬೇಕಿದೆ. ಆ ಹಾಡಿನಲ್ಲಿ ಡ್ಯಾನ್ಸ್ ಸೀಕ್ವೆನ್ಸ್, ಲಿರಿಕಲ್ ಲೈನ್ ಮತ್ತು ಬಂಪರ್ ಹಮ್ಮಿಂಗ್ (Lyrical Line, Dance Sequence, Bummper Humming) ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ, ನೀವು ಆಯ್ಕೆಮಾಡಿದ ವಿಷಯಕ್ಕೆ ತಕ್ಕಂತೆ ವಿಡಿಯೋ, ಡಬ್‌ ಸ್ಮಾಷ್ ಅಥವಾ ಹಾಡನ್ನು ರೆಕಾರ್ಡ್ ಮಾಡಿ ನಂತರ ಕ್ರಿಯೇಟಿವ್ ಆಗಿ ತಲೆ ಕೂದಲು ಇಲ್ಲದವರಿಂದ ಆಕ್ಟ್ ಮಾಡಿಸಬೇಕು. ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಬೇಕು. ಸ್ಪರ್ಧೆ ಬಗ್ಗೆ ಪವನ್ ಕುಮಾರ್ ಸ್ವತಃ ಹೆಚ್ಚಿನ ಮಾಹಿತಿ ನೀಡಿದ್ದು ಆ ವಿಡಿಯೋ ನೋಡಲು ಕ್ಲಿಕ್ ಮಾಡಿ

    ಯೂಟ್ಯೂಬ್ ಲಿಂಕ್ ಸಬ್‌ಮಿಟ್ ಮಾಡಿ

    ಯೂಟ್ಯೂಬ್ ಲಿಂಕ್ ಸಬ್‌ಮಿಟ್ ಮಾಡಿ

    ನೀವು ಕ್ರಿಯೇಟ್ ಮಾಡಿದ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಿದ ನಂತರ ಆ ವಿಡಿಯೋದ ಯೂಟ್ಯೂಬ್ ಲಿಂಕ್ ಅನ್ನು ಸ್ಪರ್ಧೆಗೆ ನೀಡಬೇಕು. ನಿಮ್ಮ ಹೆಸರು, ಇಮೇಲ್ ವಿಳಾಸ ನೀಡಿ, ಯೂಟ್ಯೂಬ್ ಲಿಂಕ್ ಸ್ಪರ್ಧೆಗೆ ನೀಡಲು ಕೊನೆಯ ದಿನಾಂಕ ಜುಲೈ 7. ಸ್ಪರ್ಧೆಗೆ ಯೂಟ್ಯೂಬ್ ಲಿಂಕ್ ನೀಡಲು ಈ ಕ್ಲಿಕ್ ಮಾಡಿ

    'ಒಂದು ಮೊಟ್ಟೆಯ ಕಥೆ'

    'ಒಂದು ಮೊಟ್ಟೆಯ ಕಥೆ'

    ಚಿತ್ರವನ್ನು ರಾಜ್ ಬಿ ಶೆಟ್ಟಿ ಎಂಬುವವರು ನಿರ್ದೇಶನ ಮಾಡಿದ್ದು ಅವರೇ ಚಿತ್ರದಲ್ಲಿ ನಟಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಚಿತ್ರ ಜುಲೈ 7 ರಂದು ತೆರೆಕಾಣಲಿದೆ. ಸಿನಿಮಾ ನಿರ್ಮಾಣ ಮಾಡಿರುವ ಪವನ್ ಕುಮಾರ್ ಏರ್ಪಡಿಸಿರುವ ಸ್ಪರ್ಧೆಯಲ್ಲಿ ನೀಡಿರುವ ಮೂರು ನಿಮಿಷದ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದು ಸಂಜಿತ್ ಹೆಗಡೆ ಹಾಡಿದ್ದಾರೆ.

    English summary
    'Lucia' Fame Director Pawan Kumar Organised a contest called 'Be Bald-Get Rich' form 'Ondu Motteya Kathe' film. The Participater's Can win Up to 3 Lakhs. For more details read above this article.
    Thursday, June 22, 2017, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X